ಒಂದೇ ದಿನದಲ್ಲಿ ನಾಲ್ಕು ಕೊಲೆ, ಬೆಚ್ಚಿಬಿದ್ದ ಬೆಂಗಳೂರು

Posted By:
Subscribe to Oneindia Kannada

ಬೆಂಗಳೂರು,ಜನವರಿ,11 : ಕಳೆದ ಒಂದು ದಿನದಲ್ಲಿಯೇ ನಡೆದ ನಾಲ್ಕು ಕೊಲೆಗಳು ಇಡೀ ಬೆಂಗಳೂರು ಜನತೆ ಭಯದಲ್ಲಿಯೇ ಕಾಲ ತಳ್ಳುವಂತೆ ಮಾಡಿದೆ. ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಭಾನುವಾರ ಕರಾಳಮಯವಾಗಿತ್ತು.

ವಿನಾಯಕ ಲೇಔಟ್ ನ ಶಿವಮಾದು, ಸುಬ್ರಹ್ಮಣ್ಯಪುರದ ಸಂದೀಪ್ ರೆಡ್ಡಿ, ಕೆ.ಜಿ ಹಳ್ಳಿಯಲ್ಲಿ ಅಪರಿಚಿತ ಯುವಕ, ಕುಮಾರಸ್ವಾಮಿ ಲೇಔಟ್ ನಲ್ಲಿ ಮಹಿಳೆ ಈ ನಾಲ್ವರು ಭಾನುವಾರ ಕೊಲೆಯಾದ ವ್ಯಕ್ತಿಗಳು.[ದೇಶದ ದಾನಿಗಳ ಪೈಕಿ ಪ್ರೇಮ್ ಜೀ ನಂ.1]

Benagluru

ಕತ್ತು ಸೀಳಿ ಕೊಲೆ:

ವಿನಾಯಕ ಲೇಔಟ್ ನ ಶಿವಮಾದು ಚನ್ನಪಟ್ಟಣ ಮೂಲದ ನಿವಾಸಿ. ಚಂದ್ರಲೇ ಔಟ್ ನಲ್ಲಿ ಸೈಕಲ್ ಮಾರ್ಟ್ ನ ಕೆಲಸಗಾರನಾದ ಈತನನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ. ಶನಿವಾರ ಬೆಳಗಿನ ಜಾವ ಸ್ನೇಹಿತರನ್ನು ಬಸ್ಸು ಹತ್ತಿಸಲು ಹೋದ ಶಿವಮಾದು ಮನೆಗೆ ವಾಪಾಸ್ಸಾಗಿರಲಿಲ್ಲ. ಶನಿವಾರ ಮುಂಜಾನೆ 6.30ರ ಸುಮಾರಿಗೆ ವಿನಾಯಕ ಲೇಔಟ್ ನ ದೇವಾಲಯದ ಬಳಿ ಶವ ಪತ್ತೆಯಾಗಿದೆ.

ಕಾರು ಅಡ್ಡ ಹಾಕಿ ಕೊಲೆ:

ಫೈನಾನ್ಷಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದೀಪ್ ರೆಡ್ಡಿ ಜೆ.ಪಿ ನಗರದ ರಾಘವೇಂದ್ರ ಕಾಲೋನಿಯಲ್ಲಿ ವಾಸವಾಗಿದ್ದನು. ಈತ ಶುಕ್ರವಾರ ರಾತಿ 11.30 ರ ವೇಳೆಗೆ ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು. ಆಗ ಆತನ ಕಾರನ್ನು ಅಡ್ಡಗಟ್ಟಿದ ನಾಗರಾಜ್ ಮತ್ತು ಆತನ ಸ್ನೇಹಿತರು ಲಾಂಗು ಮಚ್ಚಿನಿಂದ ಹಲ್ಲೆ ನಡೆಸಿದ್ದು, ಆಸ್ಪತ್ರೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.

ಅಪರಿಚಿತ ಯುವಕ ಮತ್ತು ಗೃಹಿಣಿ ಸಾವು

23 ವರ್ಷದ ಯುವಕನನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ಈರಣ್ಣ ಪಾಳ್ಯದ ಖಾಲಿ ನಿವೇಶನದಲ್ಲಿ ತಂದು ಹಾಕಿದ್ದು, ಸ್ಫಳಿಯರು ನೀಡಿದ ದೂರಿನ ಮೇರೆಗೆ ಕೆ.ಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಂದ್ರನಗರ ನಿವಾಸಿ ಹರಿಣಿ ಎಂಬುವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಗೆ ಹೋಗಲೆಂದು ಹರಿಣಿಯ ತಂದೆ ಆಕೆಯ ಮನೆಗೆ ಬಂದಿದ್ದರು. ಮನೆ ಬಾಗಿಲು ಹಾಕಿತ್ತು. ಮಗು ಅಳುತ್ತಿತ್ತು. ಆಗ ಆಕೆಯ ತಂದೆ ಬಾಗಿಲು ಬಡಿದಿದ್ದಾರೆ. ಎಷ್ಟೇ ಹೊತ್ತಾದರೂ ಬಾಗಿಲು ತೆಗೆಯದಿರುವುದನ್ನು ನೋಡಿ ತಳ್ಳಿ ನೋಡಿದಾಗ ಆಕೆ ಹಾಸಿಗೆ ಮೇಲೆ ಬಿದ್ದಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ಮೊದಲೇ ಮೃತಪಟ್ಟಿದ್ದರು. ಕುಮಾರಸ್ವಾಮಿ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One day 4 people Shivamadu, Sandeep reddy, Harini, unknown person murdered in Benagluru on Sunday
Please Wait while comments are loading...