ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಬದಲಿ ಮಾರ್ಗ ಎರಡು ಲಾಭ: ಟ್ರಾಫಿಕ್ , ಟೋಲ್ ಇಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 02: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಬರುವಾಗ ಟೋಲ್ ನಲ್ಲಿ ಹಣ ಕಟ್ಟುವುದನ್ನು ತತ್ತಪಿಸಲು ಹೊಸ ಮಾರ್ಗದಲ್ಲಿ ವಾಹನ ಸವಾರರು ಸಂಚಾರ ನಡೆಸುತ್ತಿದ್ದಾರೆ.

ಟೋಲ್ ನಲ್ಲಿ ಇದ್ದ 125 ರೂ ನಿಂದ 130ರೂ ಗೆ ಹೆಚ್ಚಳವಾಗಿದೆ. ಹಾಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವಾಗ ಕೆ.ಆರ್. ಪುರಂ, ವೈಟ್‌ಫೀಲ್ಡ್, ಸರ್ಜಾಪುರ ಹಾಗೂ ಹೊಸ ಕೋಟೆ ಮೂಲಕ ನಗರಕ್ಕೆ ಬಂದು ತಲುಪುತ್ತಿದ್ದಾರೆ.ಕೇವಲ ಎರಡನೇ ದಿನದಲ್ಲಿ 5ಸಾವಿರಕ್ಕೂ ಹೆಚ್ಚಿನ ವಾಹನಗಳು ಈ ರಸ್ತೆಗಳ ಮೂಲಕ ಸಂಚರಿಸಿದೆ.

ಏರ್‌ಪೋರ್ಟ್ ರಸ್ತೆ:ಉದ್ದೇಶಿತ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ಮುಂದಕ್ಕೆಏರ್‌ಪೋರ್ಟ್ ರಸ್ತೆ:ಉದ್ದೇಶಿತ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ಮುಂದಕ್ಕೆ

ಏರ್‌ಪೋರ್ಟ್‌ನಿಂದ ಹಿಂದಿರುಗುವಾಗ ಟೋಲ್ ಪಾವತಿ ಮಾಡಬೇಕಿತ್ತು. ಹಾಗಾಗಿ ವಾಹನ ಸವಾರರು ಮಾರ್ಗವನ್ನೇ ಬದಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 44 ಟೋಲ್ ದರವನ್ನು ಹೆಚ್ಚಿಸಿದ್ದಾರೆ. ಅಂತಾರಾಷ್ಟ್ರೀಯ ನಿಲ್ದಾಣದಿಂದ ಹಿಂದಿರುಗಿ ಬರುವಾಗ ಕಾರ್ ಗೆ 130ರೂ. ಟೋಲ್ ಶುಲ್ಕವನ್ನು ಪಾವತಿಸಬೇಕಿದೆ.

One alternative road, two benefits, Faster journey, no toll payment

ಪಿಡಬ್ಲ್ಯೂಡಿ ಇಲಾಖೆಯವರು ಅಂತಾರಾಷ್ಟ್ರೀಯ ನಿಲ್ದಾಣದಿಂದ ಹಿಂದಿರುಗುವ ವಾಹನಗಳನ್ನು ಲೆಕ್ಕ ಹಾಕಿದ್ದಾರೆ. ಮೊದಲ ಎರಡು ದಿನ 5ರಿಂದ 6ಸಾವಿರ ವಾಹನಗಳು ಬೇರೆ ಮಾರ್ಗದಿಂದ ತೆರಳಿರುವುದು ಬೆಳಕಿಗೆ ಬಂದಿದೆ. ಕೆಂಪೇಗೌಡ ನಿಲ್ದಾಣದಿಂದ ಟೋಲ್ ಮೂಲಕ ಕೇವಲ 2ರಿಂದ 3ಸಾವಿರ ವಾಹನಗಳು ಮಾತ್ರ ಶುಲ್ಕ ಪಾವತಿಸಿ ತೆರಳಿವೆ.

2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ | ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಾದಹಳ್ಳಿ ಟೋಲ್ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳುವ ಬಿಎಂಟಿಸಿ ಬಸ್ ಶುಲ್ಕವನ್ನು ಎನ್‌ಎಚ್‌ಎಐ ಹೆಚ್ಚಿಸಿದೆ. ದಿನದ ಟಿಕೇಟಕ ಶುಲ್ಕವನ್ನು 1ರೂ ಹಾಗೂ ಮಾಸಿಕ ಪಾಸಿನಲ್ಲಿ 30ರೂ ಹೆಚ್ಚಳ ಮಾಡಿದೆ.

English summary
It is not just to save on travel time, a large number of motorists have started using the newly opened alternative road to Kempegowda International Airport to avoid paying toll on their way back from the airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X