ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ತೂರು ಕೆರೆಯಲ್ಲಿ ಕಾಣಿಸಿಕೊಂಡ ನೊರೆ: ವಾಹನ ಸವಾರರಿಗೆ ಕಿರಿಕಿರಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 02: ಬೆಳ್ಳಂದೂರು ಕೆರೆಯದ್ದಾಯ್ತು ಇದೀಗ ವರ್ತೂರು ಕೆರೆ ಸರದಿ, ವರ್ತೂರು ಕೆರೆ ಕೋಡಿಯಲ್ಲಿ ನೊರೆ ಸಮಸ್ಯೆ ಮರುಕಳಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ರಸ್ತೆ ಮೇಲೆ ನೊರೆ ಹಾರುತ್ತಿರುವ ಕಾರಣ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಎರಡು ದಿನಗಳಿಂದ ನಗರದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಇದರಿಂದ ವರ್ತೂರು ಕೆರೆಗೆ ನೀರಿನ ಒಳಹರಿವು ಹೆಚ್ಚಿದೆ. ಹೀಗಾಗಿ ಕೆರೆಗೆ ನೀರು ಹರಿಯುವ ಪ್ರಮಾಣ ಹೆಚ್ಚಾಗಿದೆ. ಇದೇ ವೇಳೆ ಕೆಸಿ ವ್ಯಾಲಿ ಯೋಜನೆಗೆ ಪೈಪ್ ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ಕಾಲುವೆ ಕಿರಿದಾಗಿದೆ. ಆದ್ದರಿಂದ ನೊರೆಯ ಪ್ರಮಾಣ ಹೆಚ್ಚಾಗುತ್ತಿದೆ ಎನ್ನಲಾಗಿದೆ.

ಮತ್ತೆ ಬೆಂಕಿ ಉಗುಳುತ್ತಿದೆ ಬೆಳ್ಳಂದೂರು ಕೆರೆ, ಆತಂಕದಲ್ಲಿ ಜನ ಮತ್ತೆ ಬೆಂಕಿ ಉಗುಳುತ್ತಿದೆ ಬೆಳ್ಳಂದೂರು ಕೆರೆ, ಆತಂಕದಲ್ಲಿ ಜನ

ವರ್ತೂರು ಮತ್ತು ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕ ಅಂಶ ಹೆಚ್ಚಾಗಿರುವ ಕಾರಣ ನೊರೆ ಉಂಟಾಗುತ್ತಿದೆ. ಇದೆಲ್ಲಕ್ಕೂ ಶಾಶ್ವತ ಪರಿಹಾರ ಒದಗಿಸುವಂತೆ ಹಸಿರು ನ್ಯಾಯಾಧೀಕರಣ ಹೇಳಿದ್ದರೂ ಕೂಡ ಸರ್ಕಾರ ಅದರ ಬಗ್ಗೆ ಗಮನ ಹರಿಸಿಲ್ಲ.

ವರ್ತೂರು ಕೆರೆ ಸುತ್ತ ರಸ್ತೆ ಅಗಲೀಕರಣ: ಕೆರೆ ಅಭಿವೃದ್ಧಿ ಪ್ರಾಧಿಕಾರ ತಡೆವರ್ತೂರು ಕೆರೆ ಸುತ್ತ ರಸ್ತೆ ಅಗಲೀಕರಣ: ಕೆರೆ ಅಭಿವೃದ್ಧಿ ಪ್ರಾಧಿಕಾರ ತಡೆ

Once again heavy foams in Vartur lake

ಈ ಮೊದಲು ಕೆರೆ ಕೋಡಿಯಲ್ಲಿ ನೊರೆ ಉಂಟಾದಾಗ ಬಿಬಿಎಂಪಿ ವತಿಯಿಂದ ಕೆರೆ ಬದಿಗೆ ಮೆಶ್ ಅಳವಡಿಸಲಾಗಿತ್ತು. ಅಲ್ಲದೆ, ನೊರೆ ಹೆಚ್ಚಿದಾಗ ಹಾಯಿಸಲಾಗುತ್ತಿತ್ತು. ಆದರೆ ಕೆಸಿ ವ್ಯಾಲಿ ಕಾಮಗಾರಿಗಾಗಿ ಮೆಶ್ ತೆಗೆದು ಹಾಕಲಾಗಿದೆ ಹೀಗಾಗಿ ಸಮಸ್ಯೆ ಪುನಃ ಆರಂಭವಾಗಿದೆ.

English summary
Light showers that came as a respite to the whole of Bengaluru, became a bane to the residents of Varturu. While the burning sun is raising a stink from the heavily polluted vartur lake, the light showers resulted in the froth on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X