ಮತ್ತದೇ ಮಳಿಗೆಗೆ ಕದಿಯಲು ಬಂದು ಸಿಕ್ಕಿ ಬಿದ್ದ ಚೋರಿಯರು

Posted By:
Subscribe to Oneindia Kannada

ಬೆಂಗಳೂರು, ಜನವರಿ 16: ಮೂರು ತಿಂಗಳ ಹಿಂದೆ ಚಿನ್ನದ ಓಲೆ,ಉಂಗುರ ಕದ್ದು ಪರಾರಿಯಾಗಿದ್ದ ಮಹಿಳೆಯರ ಗ್ಯಾಂಗ್ ಮತ್ತೆ ಬಸವನಗುಡಿಯ ಸಾಯಿ ಗೋಲ್ಡ್ ಪ್ಯಾಲೇಸಿನಲ್ಲಿ ತಮ್ಮ ಕೈಚಳ ತೋರಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.

ಕುಪ್ಪಂ ಮೂಲದವರು ಎನ್ನಲಾದ ರತ್ಮ, ಲತಾ ಮತ್ತು ಕಲಾ ಎಂಬುವರೇ ಬಂಧಿತರು. ಕಳೆದ ನವೆಂಬರ್ 31 ರಂದು ಮಳಿಗೆ ವರ್ತಕನ ಗಮನ ಮತ್ತೊಂದೆಡೆ ಸೆಳೆದು ಓಲೆ, ಉಂಗುರ ಸೇರಿ ಇಪತ್ತು ಗ್ರಾಂ ಆಭರಣ ದೋಚಿ, ಅದೇ ಜಾಗದಲ್ಲಿ ನಕಲಿ ಆಭರಣಗಳನ್ನು ಇಟ್ಟು ಪರಾರಿಯಾಗಿದ್ದರು. ರಾತ್ರಿ ಸಿಸಿ ಟಿವಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಅವರ ಕೃತ್ಯ ಬೆಳಕಿಗೆ ಬಂದಿತ್ತು. ಆಗ ಮಳಿಗೆ ವ್ಯವಸ್ಥಾಪಕ ಬಸವನಗುಡಿ ಠಾಣೆಗೆ ದೂರು ನೀಡಿದ್ದರು.[ಸಿಬಿಐ ಅಧಿಕಾರಿಗಳ ಸೋಗಿನಲ್ಲಿ 45 ಕೆ.ಜಿ. ಚಿನ್ನ ದೋಚಿ ಪರಾರಿ]

Once again come back to steal the gold, Police caught the fallen woman

ಮತ್ತೆ ಮಳಿಗೆಗೆ ಭಾನುವಾರ ಆಗಮಿಸಿದ ಗ್ಯಾಂಗ್ ಮಹಿಳೆಯರನ್ನು ಗುರುತಿಸಿದ ಮಳಿಗೆಯ ನೌಕರ, ಮಳಿಗೆ ಮ್ಯಾನೇಜರ್ ಮೂಲಕ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ

ಪೊಲೀಸರು ಮಹಿಳೆಯರನ್ನು ವಿಚಾರಣೆಗೊಳಪಡಿಸಿದಾಗ ಗ್ಯಾಂಗ್ ಲೀಡರ್ ಕುಪ್ಪಂ ನ ಲಕ್ಷ್ಮಿ ಎಂದು ತಿಳಿಸಿದ್ದಾರೆ. ಅಕೆ ತನ್ನ ಸಹಚರರ ಮೂಲಕ ಆಭರಣ ಮಳಿಗೆಗಳಲ್ಲಿ ಕಳ್ಳತನ ಮಾಡಿಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Once again come back to steal the gold, Police caught the fallen woman in Basavanagudi Sai Gold Palace in Bengaluru.
Please Wait while comments are loading...