ಟಿಪ್ಪು ಜಯಂತಿ ವಿರೋಧಿಸಿ ಒನಕೆ ಹಿಡಿದು ವಿನೂತನ ಪ್ರತಿಭಟನೆ

Posted By:
Subscribe to Oneindia Kannada
   ಟಿಪ್ಪು ಜಯಂತಿ ವಿರೋಧಿಸಿ ಬೆಂಗಳೂರಿನಲ್ಲಿ ವಿನೂತನ ಪ್ರತಿಭಟನೆ | Oneindia Kannada

   ಬೆಂಗಳೂರು, ನವೆಂಬರ್ 6 : ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಒನಕೆ ಓಬವ್ವ ಹೋರಾಟ ವೇದಿಕೆ ಸೋಮವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.

   ಟಿಪ್ಪು ಜಯಂತಿ: ಕೊಡಗಿನಲ್ಲಿ ಖಾಕಿ ಸರ್ಪಗಾವಲು

   ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಹಿಳೆಯರು ಓಬವ್ವನ ವೇಷ ಧರಿಸಿ ಒನಕೆ ಹಿಡಿದು ವಿನೂತನವಾಗಿ ಪ್ರತಿಭಟನೆ ಮಾಡಿದರು. ಟಿಪ್ಪು ಜಯಂತಿ ಆಚರಣೆಯಿಂದ ಓಬವ್ವನ ಶೌರ್ಯದ ಇತಿಹಾಸಕ್ಕೆ ಅವಮಾನ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

   Onake Obavva organisation staged a protest in Bengaluru against Tipu Jayanti celebrations

   ಈ ವೇಳೆ ಬಿಜೆಪಿ ನಾಯಕರಾದ ಅನ್ವರ್ ಮಾಣಿಪ್ಪಾಡಿ, ಚಿ.ನಾ.ರಾಮು ಸೇರಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

   Onake Obavva organisation staged a protest in Bengaluru against Tipu Jayanti celebrations

   ಇದೇ ಸಂದರ್ಭದಲ್ಲಿ ಮಾತನಾಡಿದ ಅನ್ವರ್ ಮಾಣಿಪ್ಪಾಡಿ, "ಸರ್ಕಾರದಿಂದ ಮಿರ್ಜಾ ಇಸ್ಮಾಯಿಲ್ ಜನ್ಮ ದಿನಾಚರಣೆ ಮಾಡಲಿ.

   ಮಿರ್ಜಾ ಇಸ್ಮಾಯಿಲ್ ರನ್ನ ನಾವು ಸಹಿಸಿಕೊಳ್ತೇವೆ. ಆದರೆ, ಟಿಪ್ಪು ಜಯಂತಿ ಅಕ್ಷಮ್ಯ ಅಪರಾಧ" ಎಂದು ವಾಗ್ದಾಳಿ ನಡೆಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Onake Obavva organisation staged a protest gainst Tipu Jayanti celebrations in Mysuru bank circle, Bengaluru on November 6th.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ