ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿಯಲ್ಲಿ ಪರೀಕ್ಷೆ ಮುಗಿದು 1 ಗಂಟೆಯಲ್ಲಿ ಫಲಿತಾಂಶ

|
Google Oneindia Kannada News

ಬೆಂಗಳೂರು, ಜನವರಿ 5: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಮುಗಿದು ಒಂದು ಗಂಟೆಯಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ದಾಖಲೆ ಸೃಷ್ಟಿಸಿದೆ.

ಬೆಂಗಳೂರು ವಿವಿಗೆ ಒಳಪಡುವ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಬಿ.ಟೆಕ್ ನ ಎಲ್ಲಾ ಕೋರ್ಸ್‌ಗಳ ಮೊದಲನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ಪ್ರಾಯೋಗಿಕ ಪರೀಕ್ಷೆ ಮುಗಿದ ನಂತರ ಒಂದು ಗಂಟೆಯೊಳಗೆ ಪ್ರಕಟಿಸುವ ಮೂಲಕ ದಾಖಲೆ ಬರೆಯಲಾಗಿದೆ.

ಡಿಸೆಂಬರ್ 20ರಿಂದ ಪ್ರಾರಂಭವಾದ ಥಿಯರಿ ಪರೀಕ್ಷೆಗಳು ಡಿ.29ರಂದು ಮುಗಿದಿದ್ದವು. ಡಿ.30ರಿಂದಲೇ ಮೌಲ್ಯಮಾಪನ ಪ್ರಕ್ರಿಯೆ ಆರಂಭಿಸಲಾಯಿತು. ಮೊದಲ ಸೆಮಿಸ್ಟರ್‌ನಲ್ಲಿ ಸುಮಾರು 500 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮೌಲ್ಯಮಾಪಕರು ಸುಮಾರು 5000 ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಸಕಾಲದಲ್ಲಿ ಮುಗಿಸಿದರು.

On the day exam ended, UVCE manages to bring out result too

ಜೊತೆಗೆ ಶುಕ್ರವಾರ 4 ಗಂಟೆಯೊಳಗೆ ಮುಗಿದ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶದ ಅಂಕಗಳನ್ನೂ ಡಿ-ಕೋಡ್ ಮಾಡಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಪರೀಕ್ಷೆ ಮುಗಿದ ಒಂದು ಗಂಟೆಯೊಳಗೆ ವಿವಿಯ ಫಲಿತಾಂಶ ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳ ಅಚ್ಚರಿಗೆ ಕಾರಣವಾಯಿತು.

English summary
University Visvesvaraya College of Engineering (UVCE) students were in for a surprise as the first year batch students of B.Tech were announced within five days of the completion of the theory examination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X