ಶಂಕರ್ ನಾಗ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ

Posted By:
Subscribe to Oneindia Kannada

ನವೆಂಬರ್ 09 : ಸಿನಿಮಾ, ನಾಟಕ, ತಂತ್ರಜ್ಞಾನ, ರಾಜಕೀಯ, ಕ್ರಿಕೆಟ್, ನಗರಾಭಿವೃದ್ಧಿ ಹೀಗೆ ಎಲ್ಲವನ್ನೂ ಕೈಗೆಟುಕಿಸಿಕೊಂಡಿದ್ದ ಉತ್ಸಾಹಿ ಶಂಕರ್ ನಾಗ್ ಅವರ 63ನೇ ಹುಟ್ಟುಹಬ್ಬ ಇಂದು (ನವೆಂಬರ್ 9). ಆಟೋಡ್ರೈವರ್ ಗಳ ಆರಾಧ್ಯ ದೈವ ಶಂಕರಣ್ಣ ಅಗಲಿ 27 ವರ್ಷವಾದರೂ ಅವರು ಸಿನಿಮಾ ರಂಗದಲ್ಲಿ ಸೃಷ್ಠಿಸಿದ ನಿರ್ವಾತ ಇಂದಿಗೂ ಭರ್ತಿಯಾಗಿಲ್ಲ. ' ನಮ್ಮ ಶಂಕರಣ್ಣ ಈಗ ಇದ್ದಿದ್ರೆ ಕನ್ನಡ ಇಂಡಸ್ಟ್ರೀ ಹಾಲಿವುಡ್ ರೇಂಜ್ ಅಲ್ಲಿ ಇರೋದು' ಎಂಬ ಮಾತು ಪ್ರತಿ ಸಿನಿಮಾ ಸಂಭಾಷಣೆಯಲ್ಲಿ ತಪ್ಪದೇ ಬಂದು ಹೋಗುತ್ತದೆ ಆ ಮೂಲಕ ಶಂಕರ್ ನಾಗ್ ಅವರ ದೂರದೃಷ್ಠಿತ್ವ, ಸಿನಿಮಾ ಪ್ರೀತಿಯನ್ನು ಮತ್ತೆ ಮತ್ತೆ ಸಾರುತ್ತದೆ.

ಶಂಕರ್ ನಾಗ್ ಕನಸಿನ ನಂದಿ ಬೆಟ್ಟ ರೋಪ್ ವೇ ಸಾಕಾರಕ್ಕೆ ಮುಂದಾದ ಸರಕಾರ

ಇಂತಿಪ್ಪ ಶಂಕರ್ ನಾಗ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ನವೆಂಬರ್ 9 ರ ಗುರುವಾರ ರಾಜ್ಯದೆಲ್ಲೆಡೆ ತಮ್ಮದೇ ಶೈಲಿಯಲ್ಲಿ ಅದ್ದೂರಿಯಾಗಿ ಆಚರಿಸಿ ಅಗಲಿರುವ ಅದಮ್ಯ ಚೇತನವನ್ನು ಮತ್ತೆ ನೆನಪಿಸಿಕೊಳ್ಳುವ ಸಿನಿಮಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳನ್ನು ನೆನಪು ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ರಂಗ ಶಂಕರದ ಹೆಜ್ಜೆ ಗುರುತುಗಳು, ಕನಸುಗಳು ಇಲ್ಲಿವೆ

ಸಾಮಾಜಿಕ ಜಾಲತಾಣವೂ ಶಂಕರ್ ನಾಗ್ ಹುಟ್ಟುಹಬ್ಬ ಆಚರಣೆಯಲ್ಲಿ ಹಿಂದೆ ಬಿದ್ದಿಲ್ಲ. ಟ್ವೀಟರ್ ನಲ್ಲಿ ಶಂಕರ್ ನಾಗ್ ಅವರು ಟಾಪ್ ಸೆಕೆಂಡ್ ಟ್ರೆಂಡಿಂಗ್!. ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಯುವ ಚಿತ್ರೋದ್ಯಮಿಗಳು ಶಂಕರ್ ನಾಗ್ ಭಾವ ಚಿತ್ರ ಪ್ರಕಟಿಸಿ ಹುಟ್ಟುಹಬ್ಬ ಶುಭಾಶಯ ಕೋರಿ ತಮ್ಮ ಆದರ್ಶ ನಟ, ನಿರ್ದೇಶಕನನ್ನು ನೆನೆಸಿಕೊಂಡಿದ್ದಾರೆ.

ಶಂಕರ್ ನಾಗ್ ಅವರನ್ನು ಮೊದಲು ನೋಡಿದ್ದು 1983ರಲ್ಲಿ

ಸದಾ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿರುವ ನಟ, ರಾಜಕಾರಣಿ ಜಗ್ಗೇಶ್ ತಾವು ಮೊದಲ ಬಾರಿಗೆ ಶಂಕರ್ ನಾಗ್ ಅವರನ್ನು ನೋಡಿ ಪನೀತ ಭಾವ ಅನುಭವಿಸಿದ್ದನ್ನು ತಮ್ಮ ಫೇಸ್ ಬುಕ್ ಹಾಗೂ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. "1983ರಲ್ಲಿ ಇಬ್ಬನಿ ಕರಗಿತು ಸೆಟ್ ಗೆ ಶಂಕರ್ ನಾಗ್, ಅನಂತ್ ನಾಗ್ ಒಟ್ಟಿಗೆ ಕಾರಿನಲ್ಲಿ ಬಂದುದನ್ನು, ಆಗಿನ್ನು ಚಿತ್ರರಂಗದಲ್ಲಿ ಅಂಬೆಗಾಲಿಡುತ್ತಿದ್ದ ಜಗ್ಗೇಶ್ ಅವರು ಅವರಿಬ್ಬರನ್ನು ಆಶ್ಚರ್ಯದಿಮದ ನೋಡಿದ್ದನ್ನು ಜಗ್ಗೇಶ್ ನೆನೆಸಿಕೊಂಡಿದ್ದಾರೆ.

v

ಶಂಕರ್ ನಾಗ್ ಸಿನಿಮಾ ನೋಡಿ ಕಲಿಯುವುದು ಸಾಕಷ್ಟಿದೆ

ಭರವಸೆಯ ಯುವ ನಿರ್ದೇಶಕ ಪವನ್ ಒಡೆಯರ್ ತಮ್ಮ ಆರಾಧ್ಯ ದೈವ ಶಂಕರ್ ಅವರನ್ನು ನೆನೆದು ಟ್ವೀಟ್ ಮಾಡಿದ್ದಾರೆ. ಶಂಕರ್ ನಾಗ್ ಅವರ ಸಿನಿಮಾ ನಿರ್ದೇಶನದ ಬಗ್ಗೆ ಹೊಗಳಿರುವ ಅವರು, ಶಂಕರ್ ಅವರ ಸಿನಿಮಾಗಳು ಬುದ್ಧಿಗೆ ಉದ್ದೀಪನ ನೀಡಿ ಪ್ರತಿ ಬಾರಿಯೂ ಹೊಸದೊಂದನ್ನು ಕಲಿಯುವಂತೆ ಮಾಡುತ್ತಿದ್ದವು. 'ನೀವು ನಮ್ಮಿಂದ ದುರಾದರೂ ನಿಮ್ಮ ಸಿನಿಮಾಗಳ ಮೂಲಕ ನಮ್ಮೊಂದಿಗೆ ನಂಟು ಉಳಿಸಿಕೊಂಡಿರುವುದಕ್ಕೆ ಧನ್ಯವಾದ' ಎಂಬುದು ಪವನ್ ಒಡೆಯರ್ ಅವರ ಮಾತು.

ಮಾಲ್ಗುಡಿ ಡೇಸ್ ನೆನಪು ಮಾಡಿಕೊಂಡ ಮಾಜಿ ಮುಖ್ಯ ಮಂತ್ರಿ

ಪರಿವರ್ತನಾ ರ್ಯಾಲಿಯಲ್ಲಿ ಬ್ಯುಸಿಯಾಗಿರುವ ಯಡಿಯೂರಪ್ಪ ಅವರು ಕೂಡ ನಾಡು ಕಂಡ ಅಪ್ರತಿಮ ನಟ ನಿರ್ದೇಶಕನಿಗೆ ಶೂಭಾಷಯ ಕೋರುವುದು ಮರೆತಿಲ್ಲ. "ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ, ನಿರ್ದೇಶಕ ಶಂಕರ್ ನಾಗ್ ಅವರ ಜನ್ಮದಿನ ಇಂದು. ಅವರು ನಿರ್ಮಿಸಿದ 'ಮಾಲ್ಗುಡಿ ಡೇಸ್' ಧಾರಾವಾಹಿ ಇನ್ನೂ ನಮ್ಮ ಮನಸಲ್ಲಿ ಅಚ್ಚೊತ್ತಿದೆ. ಈಗಲೂ ಆಟೊಗಳ ಹಿಂದೆ ಶಂಕರ್ ನಾಗ್ ಫೋಟೊ ಇರುವುದು ಅವರ ಜನಪ್ರಿಯತೆಗೆ ಸಾಕ್ಷಿ' ಎಂದು ಬರೆಯುವ ಮೂಲಕ ಶಂಕರ್ ನಾಗ್ ಅವರ ಜೊತೆಗೆ ಧಾರಾವಾಹಿಗಳಲ್ಲೇ ದಂತ ಕಥೆ ಎನಿಸಿದ ಶಂಕರ್ ನಾಗ್ ನಿರ್ದೇಶಿಸಿದ್ದ 'ಮಾಲ್ಗುಡಿ ಡೇಸ್' ಅನ್ನೂ ನೆನೆಸಿಕೊಂಡಿದ್ದಾರೆ

ಗುರುವಿಗೆ ಅಕ್ಷರದ ಮೂಲಕ ಶುಭಾಷಯ

ಶಂಕರ್ ನಾಗ್ ಅವರೊಂದಿಗೆ ಸಾಕಷ್ಟು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದ ಮಾಸ್ಟರ್ ಮಂಜು ಅವರು ತಮ್ಮ ಮೆಚ್ಚಿನ ನಟ, ಗುರು ಶಂಕರ್ ನಾಗ್ ಅವರ ಬಗ್ಗೆ ಕನ್ನಡ ಪತ್ರಿಕೆಯೊಂದಕ್ಕೆ ವಿಶೇಷ ಲೇಖನ ಬರೆದು ನುಡಿ ನಮನ ಸಲ್ಲಿಸಿದ್ದಾರೆ. ಮಾಸ್ಟರ್ ಮಂಜುನಾಥ್ ಅವರ ಲೇಖನದ ಚಿತ್ರವೂ ಟ್ವಿಟರ್ ನಲ್ಲಿ ಶಂಕರ್ ನಾಗ್ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಹರಿದಾಡುತ್ತಿದೆ.

ಭಿನ್ನ ಹಾದಿಯ ಸಿನಿಮಾ ನಿರ್ದೇಶಕ ಶಂಕರ್

ನ್ಯಾಷನಲ್ ಫಿಲ್ಮ್ ಆರ್ಕೈವ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶಂಕರ್ ನಾಗ್ ಹುಟ್ಟುಹಬ್ಬಕ್ಕೆ ಶುಭ ಕೋರಲಾಗಿದೆ. ಶಂಕರ್ ನಾಗ್ ನಟಿಸಿದ್ದ ಹಿಂದಿ ಚಿತ್ರ "ಉತ್ಸವ್' ಮತ್ತು ಕನ್ನಡ 'ಒಂದಾನೊಂದು ಕಾಲದಲ್ಲಿ' ಸಿನೆಮಾದ ಚಿತ್ರಗಳನ್ನು ಪ್ರಕಟಿಸಿರುವ ಎನ್.ಎಫ್.ಎ.ಐ "ಮಾಲ್ಗುಡಿ ಡೇಸ್' ಧಾರಾವಾಹಿ ಮತ್ತು ಭಿನ್ನ ಹಾದಿಯ ಸಿನಿಮಾ 'ಆಕ್ಸಿಡೆಂಟ್'ನ ನಿರ್ದೇಶಕ ಶಂಕರ್ ನಾಗ್ ಗೆ ಹುಟ್ಟುಹಬ್ಬದ ಶುಭಾಷಯ ಎಂದು ಬರೆದುಕೊಂಡಿದೆ.

ಧಾರಾವಾಹಿ ನೋಡಲು ಟಿ.ವಿ ತಂದ ಜನರು

ಧಾರಾವಾಹಿ ನೋಡಲು ಟಿ.ವಿ ತಂದ ಜನರು

ಶಂಕರ್ ನಾಗ್ ಗೆ ಹುಟ್ಟುಹಬ್ಬ ಶುಭಾಷಯ ಕೋರಿದ ಹಲವರು ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ನೆನಪು ಮಾಡಿಕೊಂಡಿರುವುದು ವಿಶೇಷ. 1986 ರಲ್ಲಿ ಶಂಕರ್ ನಾಗ್ ಅವರು ದೂರದರ್ಶನ ವಾಹಿನಿಗೆಂದು ನಿರ್ದೇಶಿಸಿದ್ದ ಹಿಂದಿ ಧಾರಾವಾಹಿ ಆಗಿನ ಕಾಲಕ್ಕೆ ಮನೆ ಮಾತಾಗಿತ್ತು. ಧಾರಾವಾಹಿ ವೀಕ್ಷಣೆಗೆಂದೇ ಹೊಸ ಟಿವಿಗಳನ್ನು ಸಾಲ ಮಾಡಿ ಕೊಂಡ ಜನರ ಉದಾಹರಣೆಗೆ ಹೇರಳ. ಹಿಂದಿ ಧಾರಾವಾಹಿಯಾದರೂ ನಟಿಸಿದ್ದವರೆಲ್ಲೂಕನ್ನಡದ ನಟರೇ. ಆರ್.ಕೆ.ನಾರಾಯಣ್ ಅವರ ಕೃತಿಯನ್ನು ಎಲ್ಲಿಯೂ ಚ್ಯುತಿ ಬಾರದಂತೆ ದೃಶ್ಯಕ್ಕಿಳಿಸಿದ್ದರು ಶಂಕರ್ ನಾಗ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Birthday Greetings pouring in for versatile Kannada actor Shankar Nag on his 63rd Birthday. He was and is a darling for millions of fans, Kannada movie lovers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ