ತೀವ್ರ ನಷ್ಟ ಹಿನ್ನಲೆ: ಎರಡು ದಿನ ಓಲಾ, ಉಬರ್ ಟ್ಯಾಕ್ಸಿ ರಸ್ತೆಗಿಳಿಯಲ್ಲ

Posted By:
Subscribe to Oneindia Kannada

ಬೆಂಗಳೂರು, ಡಿ 23: ಓಲಾ ಮತ್ತು ಉಬರ್ ಸಂಸ್ಥೆ ದರ ಪೈಪೋಟಿಗೆ ಇಳಿದಿರುವ ಹಿನ್ನಲೆಯಲ್ಲಿ ಈ ಎರಡು ಸಂಸ್ಥೆಯ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಎರಡು ದಿನದ ಮುಷ್ಕರ ಹೂಡಲು ನಿರ್ಧರಿಸಿದ್ದಾರೆ.

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಯಾವುದೇ ಮೂಲೆಗೆ ಹೋದರೂ 400 ರೂಪಾಯಿ ದರ ನಿಗದಿ ಪಡಿಸಿರುವ ಹಿನ್ನಲೆಯಲ್ಲಿ ಡಿಸೆಂಬರ್ 30, 31ರಂದು ಓಲಾ ಮತ್ತು ಉಬರ್ ಟ್ಯಾಕ್ಸಿಗಳನ್ನು ರಸ್ತೆಗಿಳಿಸದಿರಲು ಮಾಲೀಕರು ನಿರ್ಧರಿಸಿದ್ದಾರೆ. (ಬೆಂಗಳೂರು ರೈಲ್ವೆ ನಿಲ್ದಾಣದಲ್ಲೇ ಸಿಗಲಿದೆ ಓಲಾ ಕ್ಯಾಬ್)

ola uber taxi drivers owners decided go for 2day strike

ಈ ಹಿಂದೆ ವಿಮಾನ ನಿಲ್ದಾಣದ ಪಿಕ್ ಅಪ್ ಗೆ ಒಂದು ಸಾವಿರ ರೂಪಾಯಿವರೆಗೆ ಬಾಡಿಗೆ ಪಡೆಯಲಾಗುತ್ತಿತ್ತು. ಈಗ ಎರಡು ಸಂಸ್ಥೆಗಳು ದರ ಪೈಪೋಟಿಯಿಂದಾಗಿ ನಮ್ಮ ಆದಾಯಕ್ಕೆ ಕುತ್ತು ಬಿದ್ದಿದೆ. ಹಾಗಾಗಿ, ನಾವು ಮುಷ್ಕರ ಹೂಡದೇ ಬೇರೆ ದಾರಿಯಿಲ್ಲ ಎಂದು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಹೇಳಿದ್ದಾರೆ.

ಬೆಂಗಳೂರಿನ ಯಾವುದೇ ಮೂಲೆಗೆ ಹೋದರೂ ನಾಲ್ಕುನೂರು ರೂಪಾಯಿ ಪಡೆಯುತ್ತೇವೆ. ಇದರಲ್ಲಿ 120ರೂಪಾಯಿ ಟೋಲ್ ಗೆ ಮತ್ತು ಬರುವ ಆದಾಯದಲ್ಲಿ ಶೇ. 25ರಷ್ಟನ್ನು ಸಂಸ್ಥೆಗೆ ನೀಡಬೇಕಾಗುತ್ತದೆ.

ಇದರಿಂದ ನಮಗೆ ಲಾಭದ ಬದಲು ನಷ್ಟವಾಗುತ್ತಿದೆ, ಹೀಗಾಗಿ ಮುಷ್ಕರ ಹೂಡುತ್ತಿದ್ದೇವೆ ಎಂದು ಟ್ಯಾಕ್ಸಿ ಮಾಲೀಕರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ola and Uber taxi drivers and owners decided to go for 2 day strike on December 30th and 31st to demand increase in rates.
Please Wait while comments are loading...