ಓಲಾ, ಊಬರ್ ಬೈಕ್ಸ್ ಟ್ಯಾಕ್ಸಿ ಕಾನೂನು ಬಾಹಿರ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 05 : ಬೆಂಗಳೂರಿನಲ್ಲಿ ಆರಂಭವಾದ ಓಲಾ ಮತ್ತು ಊಬರ್ ಬೈಕ್ ಟ್ಯಾಕ್ಸಿ ಸೇವೆಗೆ ವಿಘ್ನ ಎದುರಾಗಿದೆ. ಕಾನೂನು ತೊಡಕಿನ ಹಿನ್ನೆಲೆಯಲ್ಲಿ ಬೈಕ್ ಟ್ಯಾಕ್ಸಿ ಬಳಸಬೇಡಿ ಎಂದು ಸಾರಿಗೆ ಇಲಾಖೆ ಜನರಿಗೆ ಮನವಿ ಮಾಡಿದೆ.

ಓಲಾ ಮತ್ತು ಊಬರ್ ಬೈಕ್ ಟ್ಯಾಕ್ಸಿ ಸೇವೆಯನ್ನು ಬಳಸಬೇಡಿ ಎಂದು ಸಾರಿಗೆ ಇಲಾಖೆ ಜನರಿಗೆ ಮನವಿ ಮಾಡಿದ್ದು, ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಬೈಕ್‌ನಲ್ಲಿ ಸಂಚರಿಸುವಾಗ ಯಾವುದೇ ಅಪಘಾತ ನಡೆದರೆ ವಿಮೆ ಸೌಲಭ್ಯ ಸಿಗುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

bike taxi services

ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಓಲಾ ಮತ್ತು ಊಬರ್‌ ಕಂಪನಿಗಳಿಗೆ ಸಾರಿಗೆ ಇಲಾಖೆ ಅನುಮತಿ ನೀಡಿಲ್ಲ. ಆದ್ದರಿಂದ, ವಿಮೆ ಸೌಲಭ್ಯ ದೊರೆಯುವುದಿಲ್ಲ. ಜನರು ಸೇವೆಯನ್ನು ಬಳಸಬಾರದು ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. [ಬೆಂಗಳೂರಲ್ಲಿ ಕಾರು ಪೂಲಿಂಗ್ ಸೇವೆ ಆರಂಭಿಸಿದ ಊಬರ್]

ಓಲಾ ಮತ್ತು ಊಬರ್ ಎರಡು ದಿನಗಳ ಹಿಂದೆ ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿವೆ. ಓಲಾ ಕನಿಷ್ಠ ದರ 30 ರೂ., ಪ್ರತಿ ನಿಮಿಷಕ್ಕೆ 2 ರೂ., ಬೈಕ್ ಬುಕ್ ಮಾಡಿದ ಕ್ಷಣದಿಂದ ನಿಮಿಷಕ್ಕೆ 1 ರೂ. ನಂತೆ ದರ ನಿಗದಿ ಮಾಡಿದೆ. ಹೆಲ್ಮೆಟ್‌ ಕೂಡಾ ಅವರೇ ನೀಡುತ್ತಾರೆ.

ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿರುವ ಊಬರ್‌ ಕನಿಷ್ಠ ದರ 15 ರೂ. ನಿಗದಿ ಮಾಡಿದೆ. ಪ್ರತಿ ಕಿ.ಮೀ.ಗೆ 3ರೂ. ಬೈಕ್ ಟ್ಯಾಕ್ಸಿ ಬುಕ್ ಮಾಡಿದ ಕ್ಷಣದಿಂದ ನಿಮಿಷಕ್ಕೆ 1 ರೂ. ಪಾವತಿ ಮಾಡಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka transport department urged the people not to use Ola and Uber bike taxi services in Bengaluru city. Department said service has illegal. If anyone uses the bike taxi service offered by them and meets with an accident, they are not liable for any kind of insurance.
Please Wait while comments are loading...