ಓಲಾ ಶೇರ್, ಉಬರ್ ಪೂಲ್ ಸೇವೆಗಳ ಮೇಲೆ ನಿಷೇಧದ ತೂಗುಗತ್ತಿ

Subscribe to Oneindia Kannada

ಬೆಂಗಳೂರು, ಜನವರಿ 27: ಪ್ರಮುಖ ಕ್ಯಾಬ್ ಸರ್ವಿಸ್ ಕಂಪೆನಿಗಳಾದ ಓಲಾ ಮತ್ತು ಉಬರ್ ತಮ್ಮ 'ಶೇರ್' ಸೇವೆಯನ್ನು ಸದ್ಯದಲ್ಲೇ ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯ ಸಾರಿಗೆ ಆಯುಕ್ತರು ಶೇರ್ ಸೇವೆಯನ್ನು ಕಾನೂನು ಬಾಹಿರ ಎಂದು ಪರಿಗಣಿಸಿರುವುದರಿಂದ ಈ ನಿರ್ಧಾರಕ್ಕೆ ಮುಂದಾಗುವ ಸಾಧ್ಯತೆ ಇದೆ. ಇದು ಎರಡೂ ಕಂಪೆನಿಗಳ ಆದಾಯದ ಮೇಲೆ ಪ್ರಮುಖ ಹೊಡೆತ ನೀಡಲಿದೆ. ಅಲ್ಲದೆ ಶೇರ್ ಸೇವೆ ಅವಲಂಬಿಸಿರುವ ಜನರಿಗೂ ಇದರಿಂದ ತೊಂದರೆಯಾಗಲಿದೆ. [ಓಲಾ, ಉಬರ್ ವಿರುದ್ಧ ಚಾಲಕರ ಪ್ರತಿಭಟನೆ]

Ola Share, UberPool May Stop Soon

ಕರ್ನಾಟಕ ಸಾರಿಗೆ ಇಲಾಖೆಯ ಸಾರಿಗೆ ಪರ್ಮಿಟ್ ನಿಯಮದ ಪ್ರಕಾರ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಡ್ರಾಪ್ ಕೊಡಲು ಮಾತ್ರ ಕ್ಯಾಬ್ ಗಳಿಗೆ ಅವಕಾಶ ಇದೆ. ದಾರಿ ಮಧ್ಯದಲ್ಲಿ ಪ್ರಯಾಣಿಕರನ್ನು ಇಳಿಸಲು ಅವಕಾಶ ಇಲ್ಲ. ಈ ರೀತಿ ಎಲ್ಲೆಂದರಲ್ಲಿ ಪಿಕ್ ಅಪ್ ಮಾಡಿ ಪ್ರತ್ಯೇಕವಾಗಿ ಪ್ರಯಾಣಿಕರನ್ನು ಇಳಿಸುವ ಅವಕಾಶ ಬಿಎಂಟಿಸಿಗೆ ಮಾತ್ರ ನೀಡಲಾಗಿದೆ. [ಹುಬ್ಬಳ್ಳಿ ಸೇರಿ 75 ನಗರಗಳಿಗೆ ಓಲಾ ಕ್ಯಾಬ್ ವಿಸ್ತರಣೆ]

ಬುಧವಾರ ಸಾರಿಗೆ ಆಯುಕ್ತ ಎಂ.ಕೆ ಅಯ್ಯಪ್ಪ, ಓಲಾ ಹಾಗೂ ಉಬರ್ ಪ್ರತಿನಿಧಿಗಳು ಮತ್ತು ಚಾಲಕರ ಸಭೆ ನಡೆಸಿದ್ದಾರೆ. ಓಲಾ ಮತ್ತು ಉಬರ್ ವಿರುದ್ಧ ಪ್ರತಿಭಟನೆ ನಡೆಸುವ ಚಾಲಕರಿಗಾಗಿ ಈ ಸಭೆ ಕರೆದಿದ್ದರು. ಈ ಸಭೆಯಲ್ಲಿ ಈ ವಿಷಯವನ್ನು ಅವರೆಲ್ಲರ ಗಮನಕ್ಕೆ ತರಲಾಗಿದೆ.

ಮತ್ತೊಮ್ಮೆ ಚಾಲಕರು ಮತ್ತು ಕಂಪೆನಿಗಳ ಪ್ರತನಿಧಿಗಳ ಸಭೆಯನ್ನು ಅಯ್ಯಪ್ಪ ಸೋಮವಾರ ಕರೆದಿದ್ದಾರೆ. ಈ ಸಭೆಯಲ್ಲಿ ಶೇರಿಂಗ್ ಸೇವೆಯ ಭವಿಷ್ಯ ನಿರ್ಧಾರವಾಗಲಿದೆ.

ಈ ಕುರಿತು ಉಬರ್ ಪ್ರತಿಕ್ರಿಯೆ ನೀಡಿದ್ದು ನಮ್ಮ ಸೇವೆ ಕಾನೂನಿನ ಪರಿಮಿತಿಯಲ್ಲೇ ಇದೆ. ಸರಕಾರಕ್ಕೆ ನಾವಿದನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After the state transport commissioner deemed Ola and Uber’s ride-sharing services are illegal, they may have to stop the service soon.
Please Wait while comments are loading...