ಬೆಂಗಳೂರಲ್ಲೂ ಓಲಾ ಲಕ್ಸ್ : ಐಷಾರಾಮಿ ಕಾರಲ್ಲಿ ಸುತ್ತಾಡಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 27: ಮುಂಬೈನಲ್ಲಿ ಓಲಾ ಲಕ್ಸುರಿ ಯಶಸ್ವಿಯಾದ ಬೆನ್ನಲ್ಲೇ ಮೊಬೈಲ್ ಆಧಾರಿತ ಕ್ಯಾಬ್ ಸರ್ವೀಸ್ ಸಂಸ್ಥೆ ಬೆಂಗಳೂರಿಗೆ 'ಓಲಾ ಲಕ್ಸ್' ಪರಿಚಯಿಸುತ್ತಿದೆ. ಈ ಸೌಲಭ್ಯ ಮೂಲಕ ಕನಿಷ್ಠ 200 ರು ನಂತೆ ಐಷಾರಾಮಿ ಕಾರಿನಲ್ಲಿ ಸುತ್ತಾಡಬಹುದಾಗಿದೆ.

ಜಾಗ್ವಾರ್, ಮರ್ಸಿಡೀಸ್, ಆಡಿ(Audi), ಬಿಎಂಡಬ್ಲ್ಯೂ, ಟೊಯೊಟಾ ಕ್ಯಾಮ್ರಿ, ಫಾರ್ಚುನರ್, ಹೋಂಡಾ ಅಕಾರ್ಡ್ ಮುಂತಾದ ಉನ್ನತ ಮಟ್ಟದ ಐಷಾರಾಮಿ ಸೆಡಾನ್ ಹಾಗೂ ಎಸ್ ಯುವಿಗಳಲ್ಲಿ ಸಂಚರಿಸಬಹುದಾಗಿದೆ.[ಹುಬ್ಬಳ್ಳಿ ಸೇರಿ 75 ನಗರಗಳಿಗೆ ಓಲಾ ಕ್ಯಾಬ್ ವಿಸ್ತರಣೆ]

ಈ ಸೌಲಭ್ಯ ಪಡೆಯಲು ಕನಿಷ್ಠ 200ರು ನಿಗದಿಪಡಿಸಲಾಗಿದ್ದು, 19 ರು ಪ್ರತಿ ಕಿ.ಮೀ ನಂತೆ ದರ ಪಟ್ಟಿ ನಿಗದಿಯಾಗಿದೆ. ಮುಂಬೈ ನಂತರ ಬೆಂಗಳೂರು ಹಾಗೂ ದೆಹಲಿಯಲ್ಲಿ ಓಲಾ ಲಕ್ಸ್ ಸೌಲಭ್ಯ ಲಭ್ಯವಿದೆ.

Ola Lux is now available in three cities viz. Mumbai, Bangalore and Delhi

ಓಲಾ ಮೊಬೈಲ್ ಅಪ್ಲಿಕೇಷನ್ ನಲ್ಲೇ ಈ ಸೌಲಭ್ಯವು ಕಾಣಿಸಿಕೊಳ್ಳಲಿದೆ. ಚಾಲಕನ ಸಂಪೂರ್ಣ ವಿವರ ಸಿಗಲಿದೆ, ವೈಫೈ ಕನೆಕ್ಷನ್, ಲೈವ್ ಟ್ರ್ಯಾಕಿಂಗ್, ಓಲಾ ಮನಿ ಮೂಲಕ ಪೇಮೆಂಟ್ ಎಲ್ಲವೂ ಸಿಗಲಿದೆ. [ಇನ್ಫೋಸಿಸ್ ತೊರೆದ ಬನ್ಸಾಲ್ ಈಗ ಓಲಾ ಸಿಎಫ್ಒ]

ಐಐಟಿ ಬಾಂಬೆ ಅಲುಮ್ನಿಗಳಾದ ಭವಿಶ್ ಅಗರವಾಲ್ ಹಾಗೂ ಅಂಕಿಯ್ ಭಾಟಿ ಅವರು 2011ರಲ್ಲಿ ಸ್ಥಾಪಿಸಿದ ಓಲಾ, ದೇಶದ ಪ್ರಮುಖ ಮೊಬೈಲ್ ಅಪ್ಲಿಕೇಷನ್ ಆಧಾರಿತ ಸಾರಿಗೆ ವ್ಯವಸ್ಥೆಯಾಗಿದೆ. ಓಲಾ ಲಕ್ಸ್ ಸೌಲಭ್ಯದ ಬಗ್ಗೆ ಗ್ಯಾಲರಿಯಲ್ಲಿರುವ ಚಿತ್ರಗಳಲ್ಲಿ ಮಾಹಿತಿಯನ್ನು ನೋಡಿ...

-
ಬೆಂಗಳೂರಲ್ಲಿ ಈಗ ಓಲಾ ಲಕ್ಸ್ ಲಭ್ಯ

ಬೆಂಗಳೂರಲ್ಲಿ ಈಗ ಓಲಾ ಲಕ್ಸ್ ಲಭ್ಯ

-
-
-

2015ರಲ್ಲಿ ಟ್ಯಾಕ್ಸಿ ಫಾರ್ ಶ್ಯೂರ್ ಖರೀದಿಸಿದ ನಂತರ ಓಲಾ ಸಂಸ್ಥೆ ಕ್ಯಾಬ್, ಆಟೋರಿಕ್ಷಾ, ಟ್ಯಾಕ್ಸಿ ಸೇವೆಯನ್ನು ಇನ್ನಷ್ಟು ನಗರಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ www.olacabs.com

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After a successful launch in Mumbai, Ola, India’s most popular mobile app for transportation brings its newest luxury category ‘Ola Lux’ to Bangalore. Ola Lux will feature luxury sedans like Jaguar, Mercedes, Audi, BMW, Toyota Camry & Fortuner, Honda Accord, amongst other high end sedans and SUVs.
Please Wait while comments are loading...