ಬೆಂಗಳೂರಲ್ಲಿ ಓಲಾ ಬೈಕ್ ಟ್ಯಾಕ್ಸಿ ಸೇವೆ ಆರಂಭ

Posted By:
Subscribe to Oneindia Kannada

ಬೆಂಗಳೂರು ಮಾರ್ಚ್ 04 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಇನ್ನು ಮುಂದೆ ಕಾರ್ ಟ್ಯಾಕ್ಸಿ ಜೊತೆ ಬೈಕ್ ಟ್ಯಾಕ್ಸಿ ಸೇವೆಯೂ ಸಿಗಲಿದೆ. ಓಲಾ ಗುರುವಾರ ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದೆ. ಊಬರ್ ಕೂಡಾ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿದೆ.

'ಓಲಾ ಬೈಕ್ ಟ್ಯಾಕ್ಸಿಯಲ್ಲಿ ಸಂಚಾರ ನಡೆಸಲು ಪ್ರತಿ ಕಿ.ಮೀ.2 ರೂ. ದರ ನಿಗದಿಪಡಿಸಲಾಗಿದೆ. ಓಲಾ ಮೊಬೈಲ್ ಅಪ್ಲಿಕೇಷನ್ ಮೂಲಕ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದಾಗಿದೆ' ಎಂದು ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಪ್ರಣಯ್ ತಿಳಿಸಿದರು. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

taxi

ದೇಶದಲ್ಲಿಯೇ ಮೊದಲ ಬಾರಿಗೆ ಓಲಾ ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದೆ. ಈ ಸೇವೆಯನ್ನು ಪಡೆಯಲು ಬಯಸುವ ಜನರು ಓಲಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ಬೈಕ್ ಟ್ಯಾಕ್ಸಿ ಆಯ್ಕೆಯ ಮೂಲಕ ಟ್ಯಾಕ್ಸಿ ಬುಕ್ ಮಾಡಬಹುದಾಗಿದೆ. [ಬೆಂಗಳೂರಲ್ಲಿ ಕಾರು ಪೂಲಿಂಗ್ ಸೇವೆ ಆರಂಭಿಸಿದ ಊಬರ್]

ಬೈಕ್ ಟ್ಯಾಕ್ಸಿ ಸೇವೆ ಬುಕ್ ಮಾಡಿದ ಬಳಿಕ ಮೊಬೈಲ್‌ ಸಂಖ್ಯೆಗೆ ಬೈಕ್ ಟ್ಯಾಕ್ಸಿಯ ನಂಬರ್, ಚಾಲಕನ ಹೆಸರು, ಮೊಬೈಲ್‌ ಸಂಖ್ಯೆಯ ಮಾಹಿತಿ ಇರುವ ಸಂದೇಶ ಬರುತ್ತದೆ. ನಗರದಲ್ಲಿ ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯವಿರುವುದರಿಂದ ಸಂಸ್ಥೆಯ ವತಿಯಿಂದ ಹೆಲ್ಮೆಟ್‌ ಒದಗಿಸಲಾಗುತ್ತದೆ.

#Bangalore get ready to vroom to your destination with #OlaBike at Rs. 2/km! All details here: http://bit.ly/1RrqRg7

Posted by Olacabs onThursday, March 3, 2016

ಪ್ರಾಯೋಗಿಕವಾಗಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಜನರಿಂದ ಉತ್ತಮವಾದ ಪ್ರತಿಕ್ರಿಯೆ ಸಿಕ್ಕರೆ ಉಳಿದ ನಗರಗಳಿಗೂ ಸೇವೆಯನ್ನು ವಿಸ್ತರಣೆ ಮಾಡಲು ಓಲಾ ಚಿಂತನೆ ನಡೆಸಿದೆ. [ಓಲಾ ಅಪ್ಲಿಕೇಶನ್ ಬುಕ್ ಮಾಡಲು ವಿಳಾಸ]

ಓಲಾ ಬೈಕ್ ಟ್ಯಾಕ್ಸಿ ದರ : ಕನಿಷ್ಠ ದರ 30 ರೂ., ಪ್ರತಿ ನಿಮಿಷಕ್ಕೆ 2 ರೂ., ಬೈಕ್ ಬುಕ್ ಮಾಡಿದ ಕ್ಷಣದಿಂದ ನಿಮಿಷಕ್ಕೆ 1 ರೂ.

ಊಬರ್‌ನಿಂದಲೂ ಬೈಕ್ ಟ್ಯಾಕ್ಸಿ ಸೇವೆ : ಓಲಾ ಮಾತ್ರವಲ್ಲ ಊಬರ್ ಸಹ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಆರಂಭಮಾಡಿದೆ. ಕನಿಷ್ಠ ದರ 15 ರೂ. ಪ್ರತಿ ಕಿ.ಮೀ.ಗೆ 3ರೂ. ಬೈಕ್ ಟ್ಯಾಕ್ಸಿ ಬುಕ್ ಮಾಡಿದ ಕ್ಷಣದಿಂದ ನಿಮಿಷಕ್ಕೆ 1 ರೂ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's largest cab aggregator Ola launched bike taxi service in Bengaluru on Thursday. Chief operating officer of Ola Pranay Jivrajka said, we are charging Rs 2 per kilometre with a minimum fare of Rs 30.
Please Wait while comments are loading...