ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹತ್ತು ಲಕ್ಷ ಕೂಡ ಆದಾಯ ದಾಟದ ಇವರ ಬಳಿ ಇದ್ದ ಕಾರೇ ಕೋಟಿಗಟ್ಟಲೆ!

ಆದಾಯ ತೆರಿಗೆ ಅಧಿಕಾರಿಗಳಿಗೆ ಕಾಡುತ್ತಿರುವ ಮುಖ್ಯ ಪ್ರಶ್ನೆ ಅಂದರೆ ಇಷ್ಟು ಪ್ರಮಾಣದ ಹೊಸ ನೋಟುಗಳು ಈ ಅಧಿಕಾರಿಗಳಿಗೆ ಹೇಗೆ ಸಿಕ್ಕಿತು ಎಂಬುದು ಯಕ್ಷ ಪ್ರಶ್ನೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಡಿಸೆಂಬರ್ 3: ಇಬ್ಬರು ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ ತೆರಿಗೆ ಅಧಿಕಾರಿಗಳು ಬಯಲು ಮಾಡುತ್ತಿರುವ ಮೊತ್ತ, ಚಿನ್ನ, ವಾಹನ ಹಾಗೂ ಆಸ್ತಿಗಳ ಮೌಲ್ಯ ಬರೀ ಆಶ್ಚರ್ಯವಲ್ಲ, ಅಸಹ್ಯ ಹುಟ್ಟಿಸುವಂತಿದೆ. ತೆರಿಗೆ ಅಧಿಕಾರಿಗಳಿಗೆ ಇವರ ಬಳಿ ಐಷಾರಾಮಿ ಕಾರುಗಳಾದ ಲ್ಯಾಂಬೋರ್ಗಿನಿ, ಎಂ ವಿ ಅಗಸ್ಟಾ, ದುಕಾಟಿ 749 ಮತ್ತು ವೋಲ್ವೊ ಕೂಡ ಇರುವುದು ಪತ್ತೆಯಾಗಿದೆ.

ವಾರ್ಷಿಕವಾಗಿ ಈ ಇಬ್ಬರು ಅಧಿಕಾರಿಗಳ ಆದಾಯ ಹತ್ತು ಲಕ್ಷಕ್ಕಿಂತ ಹೆಚ್ಚಿಲ್ಲ. ಇನ್ನು ದಾಳಿ ವೇಳೆ ವಶಪಡಿಸಿಕೊಂಡ ನಗದು 6 ಕೋಟಿ ರುಪಾಯಿ. ಆ ಪೈಕಿ 4.7 ಕೋಟಿ ರುಪಾಯಿ ಎರಡು ಸಾವಿರದ ಹೊಸ ನೋಟುಗಳೇ ಇದ್ದವು. ಚಿಕ್ಕರಾಯಪ್ಪ ಹಾಗೂ ಜಯಚಂದ್ರ ಮನೆ ಮೇಲೆ ದಾಳಿ ಮಾಡಿದ ವೇಳೆ ಐಷಾರಾಮಿ ಅಪಾರ್ಟ್ ಮೆಂಟ್ ಗಳ ಹಲವು ದಾಖಲೆ ಸಿಕ್ಕಿವೆ.[ಐಟಿ ದಾಳಿ: ಅಕ್ರಮದ ವಿರುದ್ಧ ಜನಪ್ರತಿನಿಧಿಗಳ ಆಕ್ರೋಶ]

Lamborgini

ಇನ್ನು ಇದರ ಜತೆಗೆ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನ ಕೂಡ ಪತ್ತೆಯಾಗಿದ್ದು, ಅವೆಲ್ಲವನ್ನೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಎಲ್ಲವನ್ನೂ ವಿವರಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆಯ ಮುಖ್ಯ ಯೋಜನಾಧಿಕಾರಿ ಜಯಚಂದ್ರ, ಕಾವೇರಿ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕನಾಗಿರುವ ಚಿಕ್ಕರಾಯಪ್ಪ ಈ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಿದ್ದಾದ್ದರೂ ಹೇಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.[ಐಟಿ ದಾಳಿ: ಇಬ್ಬರು ಭ್ರಷ್ಟ ಅಧಿಕಾರಿಗಳು ಅಮಾನತು]

ಇಷ್ಟು ಹೊಸ ನೋಟು ಸಿಕ್ಕಿದ್ದು ಹೇಗೆ?
ಆದಾಯ ತೆರಿಗೆ ಅಧಿಕಾರಿಗಳಿಗೆ ಕಾಡುತ್ತಿರುವ ಮುಖ್ಯ ಪ್ರಶ್ನೆ ಅಂದರೆ ಇಷ್ಟು ಪ್ರಮಾಣದ ಹೊಸ ನೋಟುಗಳು ಈ ಅಧಿಕಾರಿಗಳಿಗೆ ಹೇಗೆ ಸಿಕ್ಕಿತು ಎಂಬುದು. ಒಂದು ಕಡೆ ಜನಸಾಮಾನ್ಯರು ಹೊಸ ನೋಟುಗಳು ಸಿಗ್ತಿಲ್ಲ ಎಂದು ಪರದಾಡುತ್ತಿದ್ದರೆ, ಈ ಅಧಿಕಾರಿಗಳ ಬಳಿ ಹೊಸ ನೋಟೇ 4.7 ಕೋಟಿ ಬಂದಿದ್ದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಈ ಬಗ್ಗೆ ತಲಸ್ಪರ್ಶಿಯಾದ ವಿಚಾರಣೆ ಮಾಡೇ ಮಾಡ್ತೀವಿ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಷಾಮೀಲಾಗದೆ ಇಷ್ಟು ದೊಡ್ಡ ಪ್ರಮಾಣದ ಹಣ ಕೈ ಬದಲಾಗುವುದಿಲ್ಲ ಎನ್ನುತ್ತಾರೆ ಅವರು. ಗುರುವಾರ ಕರ್ನಾಟಕ ಹಾಗೂ ಗೋವಾದ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು.[ಐಟಿ ದಾಳಿ: ಭ್ರಷ್ಟರ ಬಳಿ 152 ಕೋಟಿ ಅಕ್ರಮ ಆಸ್ತಿ]

ನಗದಿನ ಜೊತೆಗೆ ಏಳು ಕೆಜಿ ಚಿನ್ನ, ಏಳೂವರೆ ಕೆಜಿ ಆಭರಣ, ಲ್ಯಾಂಬೋರ್ಗಿನಿ ಕಾರು, ಹಲವು ಆಸ್ತಿಗಳ ದಾಖಲೆ ಪತ್ರ, ಇಬ್ಬರು ಅಧಿಕಾರಿಗಳ ಬಳಿ ಹಲವು ಐಷಾರಾಮಿ ಕಾರು ಸಹ ಪತ್ತೆಯಾಗಿತ್ತು.

English summary
The IT raids conducted in Bengaluru this week at the residence of two officials saw a staggering amount of cash being unearthed. However this was not all, IT sleuths also found at their disposal high end luxury vehicles such as a Lamborghini, M V Augusta, Ducati 749 and a Volvo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X