ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರೀ ಚರ್ಚೆಗೆ ಗ್ರಾಸವಾದ ಪೊಲೀಸರು ಮಾಡಿದ ಟ್ವೀಟ್!

By Prasad
|
Google Oneindia Kannada News

ಬೆಂಗಳೂರು, ಮೇ 29 : "ಕಾರನ್ನು ಚಲಾಯಿಸುವಾಗ ನೀವು ಖಂಡಿತ ಮೊಬೈಲನ್ನು ಬಳಸಬಹುದು... ಮೊಬೈಲಿನಲ್ಲಿ ಹಾಡನ್ನು ಕಳಲು ಬಳಸಿರಿ, ಬೇಕಿದ್ದರೆ. ಆದರೆ, ಕಾರನ್ನು ಓಡಿಸುವಾಗ ಸಂದೇಶವನ್ನು ಕಳಿಸುವಂತಿಲ್ಲ!"

ಬೆಂಗಳೂರು ನಗರ ಪೊಲೀಸರು ಟ್ವಿಟ್ಟರಿನಲ್ಲಿ ಮಾಡಿರುವ ಈ ಟ್ವೀಟ್ ಭಾರೀ ಚರ್ಚೆಗೆ, ಗೊಂದಲಗಳಿಗೆ, ಅನುಮಾನಗಳಿಗೆ ಕಾರಣವಾಗಿದೆ. ಟ್ವಿಟ್ಟಿಗರು ಹಲವಾರು ಪ್ರಶ್ನೆಗಳೊಂದಿಗೆ ಪೊಲೀಸರ ಮೇಲೆ ದಾಳಿ ನಡೆಸುತ್ತಿದ್ದಾರೆ.

ಕೆಲವೊಬ್ಬರು ಸಮಂಜಸವಾದ ಪ್ರಶ್ನೆಗಳನ್ನು ಕೇಳಿದರೆ, ಕೆಲವರು ತರಲೆ ಪ್ರಶ್ನೆಗಳನ್ನು ಕೇಳಿ ಚರ್ಚೆಗೆ ರೋಚಕ ಟಚ್ ನೀಡಿದ್ದಾರೆ. ಕೆಲವೊಬ್ಬರಿಗೆ ಗೊಂದಲಗಳು ಗೊಂದಲಗಳಾಗಿಯೇ ಉಳಿದಿವೆ ಮತ್ತು ಒಂದಿಷ್ಟು ಜನರಿಗೆ ಬೇಕಾಗಿದ್ದ ಉತ್ತರಗಳು ಸಿಕ್ಕಿವೆ.

Of course you can use mobile while driving car

ಈ ಟ್ವೀಟ್ ಮಾಡಿದವರ ಉದ್ದೇಶ ಇಷ್ಟೇ ಆಗಿತ್ತು. ಕಾರನ್ನು ಚಲಾಯಿಸುವಾಗ ಓಡೋಡಿಸುತ್ತಲೇ ಎಸ್ಎಮ್ಎಸ್ ಕಳಿಸುವುದನ್ನು ನಿಲ್ಲಿಸಿ. ಇದು ಕಾನೂನಿಗೆ ವಿರುದ್ಧ, ನಿಯಮ ಉಲ್ಲಂಘನೆಯಾದಂತೆ ಆಗುತ್ತದೆ ಎಂದಾಗಿತ್ತು.

ಸಂಗೀತ ಕೇಳಲು ಬಳಸಬಹುದಾ? ಎಂಥ ಸಂಗೀತ ಎಂದು ಒಂದಿಬ್ಬರು ಮರುಪ್ರಶ್ನೆ ಹಾಕಿದ್ದರೆ, ಕಾರು ಅಥವಾ ಬೈಕ್ ಓಡಿಸುವಾಗ ಈಯರ್ ಫೋನ್ ಬಳಸಬಹುದಾ ಎಂಬ ಸುಸುಂಬದ್ಧ ಪ್ರಶ್ನೆಯನ್ನು ಬೆಂಗಳೂರು ನಗರ ಪೊಲೀಸರ ಮುಂದಿಟ್ಟಿದ್ದರು.

ದಯವಿಟ್ಟು ಈಯರ್ ಫೋನ್ ಬಳಸಬೇಡಿ. ಆಂಬ್ಯುಲೆನ್ಸ್ ಬಂದರೆ ನಿಮಗೆ ಕೇಳುತ್ತದಾ? ಕಿವಿ ಕೇಳದಿದ್ದರೆ ಆಂಬ್ಯುಲೆನ್ಸ್ ಗೆ ಹೇಗೆ ಜಾಗ ಬಿಡುತ್ತೀರಿ? ಎಂದು ಪೊಲೀಸರೇ ಪ್ರಶ್ನೆ ಕೇಳಿದವರಿಗೆ ಪ್ರಶ್ನೆ ಮಾಡಿದರು. ಈ ಉತ್ತರದಿಂದ ಸಮಾಧಾನವಾಗದ ಮತ್ತೊಬ್ಬರು ಕೇಳಿದ ಪ್ರಶ್ನೆ ಹೀಗಿದೆ.

ಈಯರ್ ಫೋನ್ ಬೇಡವೆಂಬುದೇನೋ ಸರಿ. ಆದರೆ, ಕೆಲವೊಬ್ಬರು ಬ್ಲೂಟೂತ್ ಬಳಸಿ ಕಾರು ಚಲಾಯಿಸುತ್ತಿರುತ್ತಾರೆ. ಇದು ನಿಯಮ ಬಾಹಿರವೆ? ಇಂಥವರ ವಿರುದ್ಧ ಕ್ರಮ ಏಕೆ ತೆಗೆದುಕೊಳ್ಳುವುದಿಲ್ಲ ಎಂದು ಪ್ರಶ್ನೆಯ ಬಾಣ ಬಿಡಲಾಗಿದೆ.

ಇದಕ್ಕೆ ಹಿಂದೆ ಹೆಚ್ಚುವರಿ ಪೊಲೀಸ್ ಆಯುಕ್ತ (ಟ್ರಾಫಿಕ್) ಆರ್ ಹಿತೇಂದ್ರ ಅವರು ಮಾಡಿದ್ದ ಟ್ವೀಟ್ ತಂದಿಟ್ಟಿದ್ದಾರೆ. ಅದೇನೆಂದರೆ, "ಈಯರ್ ಫೋನ್ ಆಗಲಿ, ಬ್ಲೂಟೂತ್ ಆಗಲಿ, ಕೈಬಳಸದೆ ಬಳಸುವಂಥ ಸಾಧನಗಳನ್ನು ಕಾರು ಚಲಾಯಿಸುವಾಗ ಬಳಸುವಂತೆಯೇ ಇಲ್ಲ."

ಈರೀತಿಯ ವಿಶಿಷ್ಟವಾದ ರಚನಾತ್ಮಕ ಟ್ವೀಟ್ ಮಾಡಿದವರಿಗೆ ಹ್ಯಾಟ್ಸಾಫ್ ಎಂದು ಬೆಂಗಳೂರು ನಗರ ಪೊಲೀಸರನ್ನು ಶ್ಲಾಷಿಸಿದ್ದಾರೆ. ಇಂಥ ಹಲವಾರು ಜಾಗೃತಿ ಮೂಡಿಸುವಂಥ ಟ್ವೀಟ್ ಗಳನ್ನು ಬೆಂಗಳೂರು ನಗರ ಪೊಲೀಸರು ಮಾಡುತ್ತಲೇ ಇರುತ್ತಾರೆ.

ಓಕೆ, ಸರಿ, ಆಲ್ರೈಟ್... ಇನ್ನು ಮೇಲೆ ಕಾರು ಚಲಾಯಿಸುವವರು, ಬೈಕ್ ಓಡಿಸುವವರು ಹ್ಯಾಂಡ್ಸ್ ಫ್ರೀ ಬಳಸಬಾರದು, ಬ್ಲೂಟೂತ್ ಬಳಸಬಾರದು. ಬಳಸಿದರೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಾರೆ. ಸೀರಿಯಸ್ ಆಗಿ ತೆಗೆದುಕೊಳ್ಳಿ.

ಆದರೆ, ತಲೆತುಂಬ ಹೆಲ್ಮೆಟ್ ಹಾಕಿಕೊಂಡು, ಅಂಗಿಯೊಳಗಿಂದ ವೈರುಗಳನ್ನು ಕಿವಿಯೊಳಗೆ ಬಿಟ್ಟುಕೊಂಡು ಸೈಲೆಂಟಾಗಿ ಮಾತನಾಡುತ್ತ ಬೈಕ್ ಓಡಿಸುವವರಿಗೆ ಎಂಥ ಶಿಕ್ಷೆ ನೀಡುತ್ತೀರಿ ಪೊಲೀಸರೆ? ಹೆಲ್ಮೆಟ್ ಕೂಡ ಹಾಕಿಕೊಳ್ಳದೆ ಭುಜದಿಂದ ಮೊಬೈಲನ್ನು ಕಿವಿಗೆ ಇಟ್ಟುಕೊಂಡು ರೊಯ್ಯನೆ ಬೈಕ್ ಓಡಿಸುವವರ ಮೇಲೆ ಎಂಥ ಶಿಕ್ಷೆ?

English summary
Of course you can use mobile while driving car. Use it to play music, if you want to. Nothing more. Stop texting while driving. This is the tweet by Bengaluru City Police. This doesn't mean that drivers can use handsfree or bluetooth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X