ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರಕಾರ್ಮಿಕ, ಬೀಗದ ಕೀ ದುರಸ್ತಿಗಾರನಿಗೆ ದೃಷ್ಟಿ ಬಂದ ಕತೆ

By Mahesh
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಪೌರಕಾರ್ಮಿಕ ನಾಗರಾಜ್ ಹಾಗು ಬೀಗದ ಕೈ ತಜ್ಞ ಮೊಹಮ್ಮದ್ ಅಜರ್ ಅವರು ಇತ್ತೀಚೆಗೆ ಎರಡು ಗಂಟೆ ಕಾಲ ಸುದೀರ್ಘ ಕಾಲ ಸಂಕೀರ್ಣ ಚಿಕಿತ್ಸೆಗೆ ಒಳಗಾಗಿ ಮರಳಿ ಕಣ್ಣಿನ ದೃಷ್ಟಿ ಪಡೆದುಕೊಂಡಿದ್ದಾರೆ.

ಈ ಇಬ್ಬರು ಕೆಲಸ ಮಾಡುವ ಸಮಯದಲ್ಲಿ ಗಾಯಗೊಂಡಿದ್ದರು, ಇಲ್ಲಿನ ಡಾ. ಅಗರವಾಲ್ ಐ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಸಾಮಾನ್ಯವಾಗಿ ಕೆಲಸದ ಅವಧಿಯಲ್ಲಿ ಕೆಲವೊಮ್ಮೆ ಕಣ್ಣಿನ ಗಾಯಗಳು ಉಂಟಾಗುವ ಸಾಧ್ಯತೆ ಹೆಚ್ಚು, ಇಂಥ ತೊಂದರೆ ಶೇ 70ರಷ್ಟು ಕಾರ್ಮಿಕ ವಲಯದಲ್ಲಿ ಕಂಡುಬರುತ್ತದೆ.

Occupational ocular injury restored at Dr. Agarwal's Eye Hospital

ಬೆಂಗಳೂರಿನವರಾದ ನಾಗರಾಜ್ ಅವರು ಇತ್ತೀಚಿನವರೆಗೂ ಸಹಜವಾದ ಜೀವನ ಸಾಗಿಸುತ್ತಿದ್ದರು. ಕೆಲವು ವಾರಗಳ ಹಿಂದೆ ಅವರ ಕೆಲಸದಲ್ಲಿ ಏರುಪೇರಾಯಿತು. ಎಂದಿನಂತೆ ಪೌರಕಾರ್ಮಿಕ ಕೆಲಸದಲ್ಲಿ ನಿರತರಾಗಿರುವಾಗ ಕಸಬರಿಕೆ ಕಡ್ಡಿಯೊಂದು ಬಲ ಕಣ್ಣಿಗೆ ಚುಚ್ಚಿತ್ತು. ತಕ್ಷಣ ಅವರಿಗೆ ಡಾ.ಅಗರವಾಲ್ ಐ ಹಾಸ್ಪಿಟಲ್‍ಗೆ ಕರೆದೊಯ್ಯಲಾಯಿತು.

ಪರೀಕ್ಷೆಯ ಸಂದರ್ಭದಲ್ಲಿ ಅವರಿಗೆ ಗಂಭೀರವಾದ ಸಮಸ್ಯೆ ಇರುವುದು ಗೊತ್ತಾಯಿತು. ಕಣ್ಣಿನ ಮಸೂರಕ್ಕೆ ಪೆಟ್ಟುಬಿದ್ದು ಸೋಂಕು ಉಂಟಾಗಿತ್ತು. ಲೆನ್ಸ್ ಗೆ ಪೆಟ್ಟುಬಿದ್ದ ಕಾರಣ ಬಲಗಣ್ಣಿನಲ್ಲಿ ಪೊರೆಯು ಉಂಟಾಗಿ ದೃಷ್ಟಿಯ ಮೇಲೆ ಪರಿಣಾಮ ಬೀರಿತು. ಇದರಿಂದ ದೃಷ್ಟಿಯು ಅತ್ಯಂತ ಕ್ಷೀಣವಾಗಿತ್ತು.

ಮೊಹಮ್ಮದ್ ಅಜರ್ ಅವರ ದೃಷ್ಟಿಯಲ್ಲಿ ಇಂಥದೇ ಸಮಸ್ಯೆ ಇದ್ದು, ಕೆಲಸದ ಸಂದರ್ಭದಲ್ಲಿ ಆದ ಸಮಸ್ಯೆಯಿಂದ ಕಣ್ಣಿನ ದೃಷ್ಟಿಗೆ ಧಕ್ಕೆಯಾಗಿತ್ತು. ಕಬ್ಬಿಣದ ಚೂರೊಂದು ಅವರ ಎಡಗಣ್ಣಿಗೆ ಹೊಕ್ಕಿದ್ದು, ದೃಷ್ಟಿಯ ಮೇಲೆ ಪರಿಣಾಮ ಬೀರಿತ್ತು. ತಪಾಸಣೆಯ ಸಂದರ್ಭದಲ್ಲಿ ಕಬ್ಬಿಣದ ಚೂರಿನಿಂದ ಅವರ ಮಸೂರ ಅಷ್ಟೇ ಅಲ್ಲದೆ ರೆಟಿನಾಗೂ ಧಕ್ಕೆಯುಂಟು ಮಾಡಿದೆ ಎಂದು ತಿಳಿಯಿತು. ಇದರಿಂದಾಗಿ ಅವರು ಒಂದು ಅಡಿ ಮೀರಿದ ನಂತರ ಯಾವುದನ್ನೂ ನೋಡಲು ಶಕ್ತರಾಗಿರಲಿಲ್ಲ.

Occupational ocular injury restored at Dr. Agarwal's Eye Hospital

ನಾಗರಾಜ್ ಮತ್ತು ಮೊಹಮ್ಮದ್ ಅವರ ಗಾಯದ ಸ್ವರೂಪ ಬೇರೆ ಇದ್ದರೂ, ಕೆಲಸದ ಸಂದರ್ಭದಲ್ಲಿ ಆದ ಯಡವಟ್ಟಿನಿಂದ ಇಬ್ಬರೂ ಸಮಸ್ಯೆಗೆ ತುತ್ತಾಗಿದ್ದರು. ಎರಡೂ ಗಂಭೀರ ಪ್ರಕರಣಗಳೇ ಆಗಿದ್ದು, ತಮ್ಮ ಕುಟುಂಬಗಳಿಗೆ ಆಧಾರವಾಗಿದ್ದರು.

ತಕ್ಷಣ ಚಕಿತ್ಸೆ ಪಡೆಯದೇ ಇದ್ದರೆ ದೃಷ್ಟಿಕಳೆದುಕೊಳ್ಳುವ ಸಂಭವವೇ ಇತ್ತು. ಡಾ. ಅಗರವಾಲ್ ಐ ಹಾಸ್ಪಿಟಲ್ ನ ಡಾ. ರವಿ. ಡಿ, ಮುಖ್ಯಸ್ಥರು, ವೈದ್ಯಕೀಯ ಸೇವೆ, ಬೆಂಗಳೂರು ಮತ್ತು ಡಾ.ಆಶ್ರಯ ಮತ್ತು ಡಾ.ರಘು ಅವರಿದ್ದ ತಂಡ ಈ ಪ್ರಕರಣದ ಚಿಕಿತ್ಸೆಯನ್ನು ಕೈಗೆತ್ತಿಕೊಂಡಿತು.

ನಾಗರಾಜ್ ಅವರ ಚಿಕಿತ್ಸೆಯು ಎರಡು ಗಂಟೆ ಕಾಲ ನಡೆಯಿತು. ಅವರ ಮಸೂರ, ಕಣ್ಣಿನ ಪದರಕ್ಕೆ ಧಕ್ಕೆಯಾಗಿದ್ದು, ಸೋರಿಕೆ ಆಗುತ್ತಿತ್ತು. ಮೊದಲು ಅವರ ಕಾರ್ನಿಯ ಪದರ ಸರಿಪಡಿಸಿದ ಬಳಿಕ ಮಸೂರ ಸರಿಪಡಿಸಲು ಒತ್ತು ನೀಡಲಾಯಿತು. ಅಂತಿಮವಾಗಿ ಅವರ ದೃಷ್ಟಿ ಮರಳಿದ್ದು, ಇಂಟ್ರಾ ಆಕುಲರ್ ಲೆನ್ಸ್ ಅಳವಡಿಸಲಾಯಿತು.

ಮೊಹಮ್ಮದ್ ಅಜರ್ ಅವರಿಗೆ ಮೂರು ಹಂತದ ಚಿಕಿತ್ಸೆ ಅಗತ್ಯವಿತ್ತು. ಇವರಿಗೆ ರೆಟಿನಾ ಕೂಡಾ ಧಕ್ಕೆಯಾಗಿತ್ತು. ಅವರು ಪಾಸ ಪ್ಲಾನಾ ವಿಟ್ರೆಕ್ಟೊಮಿ ಚಿಕಿತ್ಸೆಗೆ ಒಳಗಾದರು. ಇವರು, ಇಂಟ್ರಾ ಆಕುಲರ್ ಫಾರಿನ್ ಬಾಡಿ ರಿಮೂವಲ್, ಕಾರ್ನಿಯಲ್ ಟಿಯರ್ ಸುಟುರಿಂಗ್, ಲೆನ್ಸ್ ಆಸ್ಪಿರೇಷನ್, ಐಒಎಲ್ ಇಂಪ್ಲಾಂಟೆಷನ್, ರೆಟಿನಲ್ ಕರೆಕ್ಷನ್, ಸಿಲಿಕಾನ್ ಆಯಿಲ್ ಇಂಪ್ಲಾಂಟೇಷನ್ ಚಿಕಿತ್ಸೆಗೆ ಒಳಗಾದರು.

ಇಂದು, ಅವರು ದೃಷ್ಟಿಯನ್ನಷ್ಟೇ ಮಾತ್ರ ಮರಳಿ ಪಡೆದಿಲ್ಲ. ಮತ್ತೆ ಎಂದಿನಂತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಇಂಥ ಸಂದರ್ಭದಲ್ಲ್ಲಿ ಬಹುಹಂತದ ಚಿಕಿತ್ಸೆಗೆ ಕಾರ್ನಿಯಾ ಕ್ಯಾಟರಾಕ್ಟ್ ಮತ್ತು ರೆಟಿನಾ ತಜ್ಞ ವೈದ್ಯರ ಅಗತ್ಯವಿದೆ.

ಪ್ರಕರಣವನ್ನು ವಿವರಿಸಿದ ಡಾ. ರವಿ .ಡಿ, ಮುಖ್ಯಸ್ಥರು, ವೈದ್ಯಕೀಯ ಸೇವೆ, ಡಾ. ಅಗರವಾಲ್ ಐ ಹಾಸ್ಪಿಟಲ್, ಬೆಂಗಳೂರು ಅವರು, 'ಎರಡೂ ಪ್ರಕರಣಗಳು ಸವಾಲಿನದಾಗಿದ್ದು, ಸಮಸ್ಯೆಗೆ ಕಾರಣ ಏನು ಎಂಬುದು ತಿಳಿದಿರಲಿಲ್ಲ. ಇಲ್ಲಿ ವಿವರವಾದ ತಪಾಸಣೆಯಷ್ಟೇ ಅಲ್ಲ. ಸಮಗ್ರವಾದ ಚಿಕಿತ್ಸೆಯೂ ಅಗತ್ಯವಿತ್ತು. ನಾವು ಕಣ್ಣಿಗೆ ಆಗಿರುವ ನೋವನ್ನು ಆಳವಾಗಿ ಪರಿಶೀಲಿಸಿದೆವು. ಮತ್ತು ಮಸೂರ ಅಳವಡಿಸಿದೆವು. ಮಸೂರಕ್ಕೆ ಪೆಟ್ಟುಬಿದ್ದ ಕಾರಣ ಅದರ ಸಾಮರ್ಥ್ಯ ಗುರುತಿಸುವುದು ಕಷ್ಟವಾಗಿತ್ತು. ಇದರ ಜೊತೆಗೆ, ತಪಾಸಣೆಯಿಂದ ಆಸುಪಾಸಿನ ವ್ಯವಸ್ಥೆಗೆ ತೀವ್ರ ಸಮಸ್ಯೆಯಾಗಿತ್ತು' ಎಂದರು.

English summary
The patients who work as a pourakarmika and a locksmith were cured through a 2 hours long complex surgery at Dr. Agarwal’s Eye Hospital. Nagaraj (Pourakarmika) and Mohammed Azar (Locksmith) today are relieved as their vision has been restored after a successful eye surgery at Dr. Agarwal’s Eye Hospital
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X