ಸಿಎಂ ಸಿದ್ದರಾಮಯ್ಯ ಅವರ ಭಾಷಣಕ್ಕೆ ಅಡ್ಡಿಪಡಿಸಿದ ವ್ಯಕ್ತಿ ಬಂಧನ

Posted By:
Subscribe to Oneindia Kannada

ಬೆಂಗಳೂರು, ಫೆ. 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಭಾನುವಾರ ಬೆಳಗ್ಗೆ ಸಿದ್ದರಾಮಯ್ಯ ಅವರತ್ತ ಕವರ್ ಎಸೆದು ಅದರಲ್ಲಿ ಬಾಂಬ್ ಇದೆ ಎಂದು ಹೇಳಿದ್ದ ಪ್ರಸಾದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪತ್ರಕರ್ತೆ ವಿಜಯಮ್ಮ ಅವರು ಸಂಪಾದಿಸಿರುವ 3,000 ಪುಟಗಳ 3 ಸಂಪುಟ ಗಾತ್ರವುಳ್ಳ 'ಬೆಂಗಳೂರು ದರ್ಶನ' ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಈ ಸಮಾರಂಭದಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್, ನಿವೃತ್ತ ನ್ಯಾ.ಮೂ.ಎಂ.ಎನ್.ವೆಂಕಟಾಚಲಯ್ಯ, ಎ.ಜೆ.ಸದಾಶಿವ, ಕವಿ ಸಿದ್ದಲಿಂಗಯ್ಯ, ಎಂ.ಎಚ್.ಕೃಷ್ಣಯ್ಯ, ಡಾ.ವಿಜಯಾ ಭಾಗವಹಿಸಿದ್ದರು..[ಅಹಿಂದ ವರ್ಗಕ್ಕೆ ಸಿದ್ದರಾಮಯ್ಯ ಕೊಡುಗೆಗಳೇನು?]

ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದ ಕೊನೆಯಲ್ಲಿ ಭಾಷಣಕ್ಕೆ ಮುಂದಾದ ಸಿದ್ದರಾಮಯ್ಯ ಅವರತ್ತ ಬಾಲ್ಕನಿಯಲ್ಲಿದ್ದ ವ್ಯಕ್ತಿಯೊಬ್ಬ ಪ್ರಶ್ನೆ ಹಾಕುತ್ತಾರೆ. ಭಾಷಣಕ್ಕೂ ಮೊದಲು ನಮ್ಮ ಸಮಾಜಕ್ಕೆ ಏನು ಮಾಡಿದ್ದೀರಿ ಹೇಳಿ ಎನ್ನುತ್ತಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು ಯಾವುದಪ್ಪ ನಿಮ್ಮ ಸಮಾಜ ಎನ್ನುತ್ತಾರೆ.[ಕರ್ನಾಟಕ ಬಜೆಟ್ 2015-16 : ಮುಖ್ಯಾಂಶಗಳು]

ಇದಾದ ಬಳಿಕ ಆ ವ್ಯಕ್ತಿ ತನ್ನ ಬಳಿ ಇದ್ದ ಕವರ್ ವೊಂದನ್ನು ವೇದಿಕೆಯತ್ತ ಎಸೆಯುತ್ತಾರೆ. ಕವರ್ ಎಸೆಯುವಾಗ ಇದರಲ್ಲಿ ಬಾಂಬ್ ಇದೆ ಎನ್ನುತ್ತಾರೆ. ಆದರೆ, ಅದರಲ್ಲಿ ಚಾಕಲೋಟ್ ತುಂಬಿರುವುದು ಪತ್ತೆಯಾಗುತ್ತದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸಿದ್ದರಾಮಯ್ಯ ಅವರನ್ನು ಸುತ್ತುವರೆಯುತ್ತಾರೆ ಹಾಗೂ ಬಾಲ್ಕನಿಯಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯುತ್ತಾರೆ.

ಬಂಧಿತ ಪ್ರಸಾದ್ ಸವಿತಾ ಸಮಾಜದ ಸದಸ್ಯ

ಬಂಧಿತ ಪ್ರಸಾದ್ ಸವಿತಾ ಸಮಾಜದ ಸದಸ್ಯ

ಬಂಧಿತನನ್ನು ಸವಿತಾ ಸಮಾಜದ ಸದಸ್ಯ ಬಿ.ಎಚ್ ಪ್ರಸಾದ್ ಎಂದು ಗುರುತಿಸಲಾಗಿದೆ. ಪಾನಮತ್ತನಾಗಿ ಸಮಾರಂಭಕ್ಕೆ ಬಂದಿದ್ದರು ಎಂದು ತಿಳಿದು ಬಂದಿದೆ.

ಸಿಎಂ ಸಿದ್ದರಾಮಯ್ಯ ಅವರತ್ತ ಎಸೆದಿದ್ದು ಏನು?

ಸಿಎಂ ಸಿದ್ದರಾಮಯ್ಯ ಅವರತ್ತ ಎಸೆದಿದ್ದು ಏನು? ಚಿತ್ರಗಳು ಇಲ್ಲಿವೆ ನೋಡಿ

ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗಲಿಲ್ಲ

ನಿಗದಿತ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗಲಿಲ್ಲ. 10.30 ರಿಂದ 12.30 ರ ತನಕ ಸಾಂಗವಾಗಿ ಜರುಗಿದೆ.

ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಏನು?

ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಏನು?

ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಸಾಮಾನ್ಯ. ಯಾವುದೇ ಸಮಾಜಕ್ಕೆ ಅನ್ಯಾಯವಾಗಿದೆಯೋ ಅದನ್ನು ಮೊದಲು ಸರಿಪಡಿಸಲಾಗುವುದು. ಆತನಿಗೆ ಯಾರೋ ಎತ್ತಿ ಕೊಟ್ಟಿದ್ದಾರೆ. ಸುಮ್ಮನೆ ಹೀಗೆ ಪ್ರಶ್ನೆ ಮಾಡಲು ಬರುವುದಿಲ್ಲ. ಆತನದ್ದು ಯಾವ ಜಾತಿ ಏನು ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Man disrupts CM Siddaramaiah's speech at Ravindra Kalashetra today. Police arrest BH Prasad Member of Savita Samaja. Prasad disrupted CM Siddaramaiah's speech by throwing a object claiming it as Bomb. Siddaramaiah was speaking after launching a book at Ravindra Kalakshetra, Bengaluru
Please Wait while comments are loading...