ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಮಾಣವಚನ ಸಮಾರಂಭ: ವಿಧಾನಸೌಧ ಸುತ್ತಮುತ್ತ ಸಂಜೆ ಸಂಚಾರ ದಟ್ಟಣೆ

|
Google Oneindia Kannada News

ಬೆಂಗಳೂರು, ಮೇ 23: ವಿಧಾನಸೌಧ ಸುತ್ತಮುತ್ತ ಕೆಲಸ ಮಾಡುವವರಾದರೆ ನೀವು ಸಂಜೆ ಬೇಗನೆ ಮನೆ ಸೇರಿಕೊಳ್ಳುವುದು ಒಳಿತು.

ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭವು ಸಂಜೆ 4.30ಕ್ಕೆ ವಿಧಾನಸೌಧದಲ್ಲಿ ನಡೆಯಲಿರುವುದರಿಂದ ಈ ಮಾರ್ಗದ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿದೆ.

ಇದರಿಂದ ವಿವಿಧೆಡೆ ಸಂಜೆ ವೇಳೆ ನಗರದ ವಿವಿಧ ಭಾಗಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರಿಗೆ ಬಂದು ಎಚ್ಡಿಕೆ ಹರಸಿದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ಬೆಂಗಳೂರಿಗೆ ಬಂದು ಎಚ್ಡಿಕೆ ಹರಸಿದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್

ವಿಧಾನಸೌಧದ ಮಾರ್ಗದಲ್ಲಿ ಸಂಜೆ ಬಳಿಕ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕೋಲಾರ, ಮೈಸೂರು, ರಾಮನಗರ, ತುಮಕೂರು ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಹೀಗಾಗಿ ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಮತ್ತು ಕನಕಪುರ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಡಾಗುವ ಸಾಧ್ಯತೆ ಇದೆ.

ಎಲ್ಲಲ್ಲಿ ಮಾರ್ಗ ಬದಲಾವಣೆ? :
ಡಾ.ಅಂಬೇಡ್ಕರ್ ರಸ್ತೆಯಲ್ಲಿ ಪೊಲೀಸ್ ತಿಮ್ಮಯ್ಯ ವೃತ್ತದಿಂದ ಗೋಪಾಲಗೌಡ ವೃತ್ತದವರೆಗೆ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ.

ಶೇಷಾದ್ರಿ ರಸ್ತೆ ಮತ್ತು ಹಳೆ ಅಂಚೆ ಕಚೇರಿ ರಸ್ತೆ ಕಡೆಯಿಂದ ಬಂದು ಅಂಬೇಡ್ಕರ್ ರಸ್ತೆಯಲ್ಲಿ ಸಂಚರಿಸುವ ಬಸ್‌ಗಳನ್ನು ಕೆ.ಆರ್.ವೃತ್ತದಲ್ಲೇ ತಡೆಯಲಾಗುವುದು. ಆ ವಾಹನಗಳು ನೃಪತುಂಗ ರಸ್ತೆ ಮುಖಾಂತರ ಸಾಗಬೇಕು.

ಕೆ.ಆರ್.ವೃತ್ತದ ಮೂಲಕ ಅಂಬೇಡ್ಕರ್ ರಸ್ತೆಯಲ್ಲಿ ಸಾಗುವ ಕಾರು ಹಾಗೂ ದ್ವಿಚಕ್ರ ವಾಹನಗಳು, ಗೋಪಾಲಗೌಡ ವೃತ್ತದವರೆಗೆ ಸಂಚರಿಸಬಹುದು. ಅಲ್ಲಿಂದ ಬಹುಮಹಡಿ ಕಟ್ಟಡ, ಹೈಕೋರ್ಟ್ ಹಾಗೂ ಕಬ್ಬನ್ ಪಾರ್ಕ್‌ನ ಒಳಭಾಗದ ರಸ್ತೆಗಳ ಮೂಲಕ ಹೋಗಬಹುದು.

ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚನ್ನಪಟ್ಟಣ ಕಡೆಯಿಂದ ಬರುವ ಬಸ್ ಹಾಗೂ ಟಿ.ಟಿಗಳು, ಮೈಸೂರು ರಸ್ತೆ ಮೇಲ್ಸೇತುವೆ-ಎಸ್‌ಜೆಪಿ ರಸ್ತೆ-ಪುರಭವನ-ಎನ್‌.ಆರ್.ಜಂಕ್ಷನ್-ಹಡ್ಸನ್ ವೃತ್ತ ಮಾರ್ಗವಾಗಿ ಕಸ್ತೂರಬಾ ರಸ್ತೆಗೆ ಬಂದು ಅಲ್ಲಿ ಜನರನ್ನು ಇಳಿಸಬೇಕು.

ವಿಧಾನಸೌಧದಲ್ಲಿ ಪ್ರಮಾಣವಚನ: ಯಾರೂ ಪೂರ್ಣಾವಧಿ ಆಡಳಿತ ನಡೆಸಿಲ್ಲ!ವಿಧಾನಸೌಧದಲ್ಲಿ ಪ್ರಮಾಣವಚನ: ಯಾರೂ ಪೂರ್ಣಾವಧಿ ಆಡಳಿತ ನಡೆಸಿಲ್ಲ!

ಕನಕಪುರ ರಸ್ತೆ ಕಡೆಯಿಂದ ಬರುವವರು ಬನಶಂಕರಿ ದೇವಸ್ಥಾನ ಬಸ್ ನಿಲ್ದಾಣ-ರಾಜಲಕ್ಷ್ಮಿ ಜಂಕ್ಷನ್-ಜಯನಗರ 4ನೇ ಮುಖ್ಯರಸ್ತೆ-ಸೌತ್ ಎಂಡ್ ವೃತ್ತ- ಆರ್.ವಿ. ಜಂಕ್ಷನ್-ಲಾಲ್‌ಬಾಗ್ ಪಶ್ಚಿಮ ದ್ವಾರ- ಮಿನರ್ವ ವೃತ್ತ-ಜೆ.ಸಿ.ರಸ್ತೆ-ಪುರಭವನ- ಹಡ್ಸನ್ ವೃತ್ತ ಮಾರ್ಗವಾಗಿ ಕಸ್ತೂರಬಾ ರಸ್ತೆಗೆ ಬರಬೇಕು.

oath-taking-ceremony-vehicle-routes-changed

ನಂತರ ಖಾಲಿ ವಾಹನಗಳನ್ನು ಸಿದ್ದಲಿಂಗಯ್ಯ ವೃತ್ತ-ಕ್ವೀನ್ಸ್‌ ವೃತ್ತ-ಅನಿಲ್‌ ಕುಂಬ್ಳೆ ವೃತ್ತ-ಬಿಆರ್‌ವಿ ಜಂಕ್ಷನ್‌-ಕಬ್ಬನ್ ರಸ್ತೆ-ಹಲಸೂರು ರಸ್ತೆ-ಬೇಗಂ ಮಹಲ್-ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ-ಕೋಲ್ಸ್ ಪಾರ್ಕ್-ನಂದಿದುರ್ಗ ರಸ್ತೆ-ಜಯಮಹಲ್ ರಸ್ತೆ ಮಾರ್ಗವಾಗಿ ತೆಗೆದುಕೊಂಡು ಹೋಗಿ ಅರಮನೆ ಮೈದಾನದ ಕೃಷ್ಣ ವಿಹಾರ ಆವರಣ, ಮಾವಿನಕಾಯಿ ಮಂಡಿ ಮೈದಾನ ಹಾಗೂ ಸರ್ಕಸ್ ಮೈದಾನದಲ್ಲಿ ನಿಲುಗಡೆ ಮಾಡಬೇಕು.

ತುಮಕೂರು, ದೊಡ್ಡಬಳ್ಳಾಪುರ, ಕೋಲಾರ ಕಡೆಯಿಂದ ಬರುವ ಬಸ್‌ಗಳು, ಮೊದಲು ಮೇಖ್ರಿ ವೃತ್ತಕ್ಕೆ ಬರಬೇಕು. ಅಲ್ಲಿಂದ ಕಾವೇರಿ ಜಂಕ್ಷನ್-ವಿಂಡ್ಸರ್ ಮ್ಯಾನರ್ ಮಾರ್ಗವಾಗಿ ಸಾಗಿ ಹಳೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಜಂಕ್ಷನ್‌ ಬಳಿ ಜನರನ್ನು ಇಳಿಸಬೇಕು. ಬಳಿಕ ಖಾಲಿ ವಾಹನಗಳು ಚಂದ್ರಿಕಾ ಜಂಕ್ಷನ್-ಉದಯ ಟಿ.ವಿ ಜಂಕ್ಷನ್-ಕಂಟೋನ್ಮೆಂಟ್ ಅಂಡರ್‌ಪಾಸ್-ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನಕ್ಕೆ ಸಾಗಬೇಕು.

ಚಾಮುಂಡೇಶ್ವರಿಯ ದರ್ಶನದ ನಂತರ ಕುಮಾರಸ್ವಾಮಿ ಪ್ರಮಾಣ ವಚನಚಾಮುಂಡೇಶ್ವರಿಯ ದರ್ಶನದ ನಂತರ ಕುಮಾರಸ್ವಾಮಿ ಪ್ರಮಾಣ ವಚನ

ಪಾರ್ಕಿಂಗ್‌ಗೆ ವ್ಯವಸ್ಥೆ ಎಲ್ಲೆಲ್ಲಿ?
ಮಲ್ಯ ಆಸ್ಪತ್ರೆ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಕಂಠೀರವ ಕ್ರೀಡಾಂಗಣ, ಯುಬಿ ಸಿಟಿ ಪಾರ್ಕಿಂಗ್ ಪ್ರದೇಶ, ಸೆಂಟ್ರಲ್ ಕಾಲೇಜು ಮೈದಾನ, ಸ್ವಾತಂತ್ರ್ಯ ಉದ್ಯಾನ, ಹಳೆ ಅಂಚೆ ಕಚೇರಿ ರಸ್ತೆಯ ಸರ್ಕಾರಿ ಕಲಾ ಕಾಲೇಜು, ಟಿ.ಚೌಡಯ್ಯ ರಸ್ತೆಯಲ್ಲಿ ಎಲ್ಆರ್‌ಡಿಇ ಜಂಕ್ಷನ್‌ನಿಂದ ರಾಜಭವನ ಜಂಕ್ಷನ್‌ವರೆಗೆ.

ರಾಜಕಾರಣಿಗಳು ದೇವರಾಜ್ ಅರಸ್ ರಸ್ತೆಯಲ್ಲಿ ಬಂದು ಗೇಟ್ ಸಂಖ್ಯೆ 2ರ ಮೂಲಕವೇ ವಿಧಾನಸೌಧ ಪ್ರವೇಶಿಸಬೇಕು. ವಿಧಾನಸೌಧದ ಪಾರ್ಕಿಂಗ್ ಪ್ರದೇಶದಲ್ಲೇ ವಾಹನ ನಿಲುಗಡೆ ಮಾಡಬಹುದು.

ಬುಧವಾರ ಪರಮೇಶ್ವರ್, ಕುಮಾರಸ್ವಾಮಿ ಮಾತ್ರ ಪ್ರಮಾಣ ವಚನ ಬುಧವಾರ ಪರಮೇಶ್ವರ್, ಕುಮಾರಸ್ವಾಮಿ ಮಾತ್ರ ಪ್ರಮಾಣ ವಚನ

ಬಿಗಿ ಪೊಲೀಸ್‌ ಬಂದೋಬಸ್ತ್
ವಿಧಾನಸೌಧ ಮತ್ತು ಸುತ್ತಮುತ್ತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಕೆಎಸ್‌ಆರ್‌ಪಿಯ 35 ಹಾಗೂ ಸಿಎಆರ್‌ನ 50 ತುಕಡಿಗಳು, ಇಬ್ಬರು ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳು, ಎಂಟು ಡಿಸಿಪಿ, 100 ಇನ್‌ಸ್ಪೆಕ್ಟರ್‌ ಸೇರಿ ವಿಧಾನಸೌಧ ಸುತ್ತಮುತ್ತ ಸುಮಾರು 2,500 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಡ್ರೋನ್‌ ಕ್ಯಾಮೆರಾ ಬಳಕೆ ಮಾಡುವುದಿಲ್ಲ. ಸಿಬ್ಬಂದಿ ಲೋಹಶೋಧಕದ ಮೂಲಕ ಪ್ರತಿಯೊಬ್ಬರನ್ನೂ ತಪಾಸಣೆಗೆ ಒಳಪಡಿಸಲಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ತಿಳಿಸಿದರು.

ರಾಜ್ಯದ ವಿವಿಧೆಡೆಗಳಿಂದ ಸುಮಾರು 2,000 ಬಸ್‌ಗಳು ನಗರಕ್ಕೆ ಬರುವ ನಿರೀಕ್ಷೆ ಇದೆ. ಸಂಚಾರ ನಿರ್ವಹಣೆಗಾಗಿಯೇ 3,000 ಪೊಲೀಸರನ್ನು ನಿಯೋಜಸಿದ್ದೇವೆ ಎಂದು ಅವರು ಹೇಳಿದರು.

English summary
Vehicles are prohibited near Vidhan Soudha route as HD Kumaraswamy is going to take oath as chief minister of Karnataka on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X