ಮಕ್ಕಳಿಗೆ ಪೌಷ್ಟಿಕಾಂಶ ಹೆಚ್ಚಿರುವ ಮಧ್ಯಾಹ್ನದ ಬಿಸಿಯೂಟ

Posted By:
Subscribe to Oneindia Kannada

ಬೆಂಗಳೂರು, ಜೂನ್ 16 : ಪ್ರೋಟಿನ್ ಹಾಗೂ ವಿಟಮಿನ್‌ಯುಕ್ತ ಮಧ್ಯಾಹ್ನದ ಬಿಸಿಯೂಟ ನೀಡುವ ಅಕ್ಷಯಪಾತ್ರೆ ಪ್ರತಿಷ್ಠಾನದ ಯೋಜನೆಗೆ ಸಚಿವ ಸಂಪುಟ ಗುರುವಾರ ಸಮ್ಮತಿ ಸೂಚಿಸಿದೆ.

ಇದರಿಂದ 2600 ಶಾಲೆಗಳ 4.5 ಲಕ್ಷ ವಿದ್ಯಾರ್ಥಿಗಳಿಗೆ ಸಾರಯುಕ್ತ ಅಕ್ಕಿ ಮೂಲಕ ಪೌಷ್ಟಿಕಾಂಶ ಹೆಚ್ಚಿರುವ ಮಧ್ಯಾಹ್ನದ ಬಿಸಿಯೂಟ ಲಭ್ಯವಾಗಲಿದೆ. ಆಹಾರದಲ್ಲಿರುವ ಪೌಷ್ಟಿಕತೆಯನ್ನು ಕಾಪಾಡಬೇಕಾದ ಜವಾಬ್ದಾರಿಯೂ ಸರಕಾರದ ಮೇಲಿದೆ.

ಸರ್ಕಾರಿ ಹಾಗೂ ಅನುದಾನಿತ ಖಾಸಗಿ ಶಾಲೆಗಳಿಗೆ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಪ್ರತಿಷ್ಠಾನ ಪ್ರತಿದಿನ ಮಧ್ಯಾಹ್ನ ವಿತರಿಸುತ್ತಿರುವ ಬಿಸಿಯೂಟದಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇಲ್ಲ, ಸ್ಟಾರ್ಚ್ ಮಾತ್ರ ಲಭ್ಯವಾಗುತ್ತದೆ. ಇದಕ್ಕೆ ಪ್ರೋಟಿನ್ ಹಾಗೂ ವಿಟಮಿನ್ ಅಂಶಗಳನ್ನು ಸೇರಿಸಿ ಪೌಷ್ಟಿಕಾಂಶಗಳಿಂದ ಕೂಡಿರುವ ಊಟ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. [ಬಿಸಿಯೂಟದ ಅಕ್ಕಿ ಮಾರಾಟಕ್ಕೆ ಯತ್ನ, ಶಾಲಾ ಶಿಕ್ಷಕಿ ಶಾಮೀಲು]

Nutritious mid day meal to govt school Children

ಈ ಯೋಜನೆಗೆ ಸಂಪುಟದ ಅನುಮತಿ ಬೇಕಾಗಿದ್ದರಿಂದ ಪ್ರತಿಷ್ಠಾನದಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ 2600 ಶಾಲೆಗಳಿಗೆ ಮಾತ್ರ ಪೌಷ್ಟಿಕಾಂಶಯುಕ್ತ ಬಿಸಿಯೂಟ ವಿತರಿಸಲು ಅನುಮತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಆಹಾರವನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ತರಿಸಿಕೊಂಡು ಪರಿಶೀಲನೆ ನಡೆಸಲಾಗುವುದು. ಬಳಿಕ ಉಳಿದ ಶಾಲೆಗಳಿಗೂ ಇದೇ ಮಾದರಿಯ ಬಿಸಿಯೂಟ ವಿತರಿಸಲು ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು. [ಬಿಸಿಯೂಟದ ಅಕ್ಕಿ ತಿಂದ ಅಧಿಕಾರಿಗಳಿಗೆ ಅಮಾನತು ಶಿಕ್ಷೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than 4.5 lakh students of government and aided schools will get nutritious food from now onwards. Karnataka cabinet has given nod to provide food with protein and vitamins to the children in 2,600 schools. Iskcon is providing food through Akshaya Patra, but it is not nutritious.
Please Wait while comments are loading...