ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳದ ಜಾಗಕ್ಕೆ ಗಾಜಾಪಟ್ಟಿ ಹೆಸರೇಕೆ?

By ವಿಕಾಸ್ ನಂಜಪ್ಪ
|
Google Oneindia Kannada News

ಕೇರಳ, ಜೂನ್ 19: ಕೇರಳದ ಸ್ಥಳವೊಂದಕ್ಕೆ ಪ್ಯಾಲೆಸ್ತಿನ್ ಮತ್ತು ಇಸ್ರೇಲ್ ನಡುವಿನ ವಿವಾದದ ಕೇಂದ್ರ ಬಿಂದುವಾದ ಗಾಜಾ ಪಟ್ಟಿಯ ಹೆಸರಿಟ್ಟಿರುವುದು ಇದೀಗ ಭಾರತೀಯ ತನಿಖಾ ದಳದ ಕೆಂಗಣ್ಣಿಗೆ ಗುರಿಯಾಗಿದೆ.

ಸೇನೆ ಮತ್ತು ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿಸೇನೆ ಮತ್ತು ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಉಗ್ರರ ದಾಳಿ

ಪ್ಯಾಲೆಸ್ತಿನ್ ಮತ್ತು ಇಸ್ರೇಲ್ ನಡುವೆ ಸದಾ ಯುದ್ಧ ನಡೆಯುವುದಕ್ಕೆ ಕಾರಣ ಇದೇ ಗಾಜಾಪಟ್ಟಿ. ಆದರೆ ಈ ಹೆಸರನ್ನು ಕೇರಳದ ಕಾಸರಗೋಡಿನ ಸ್ಥಳವೊಂದಕ್ಕೆ ಇಟ್ಟಿರುವುದು ಏಕೆ ಎಂಬ ಅನುಮಾನ ತನಿಖಾ ದಳವನ್ನು ಕಾಡುತ್ತಿದೆ. ಈ ಕೆಲಸದ ಹಿಂದೆ ಯುವಕರನ್ನು ಹಾದಿ ತಪ್ಪಿಸುವ ಉದ್ದೇಶವಿದೆ ಎಂಬುದು ತನಿಖಾ ದಳದ ಊಹೆ.

Now a street in Kerala named

ಈ ಸ್ಥಳಕ್ಕೆ ನಾಮಕರಣ ಮಾಡಿ, ಉದ್ಘಾಟಿಸಿದವರು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್ ಎನ್ನುವವರು.

ಇನ್ನೂ ಆತಂಕದ ವಿಷಯವೆಂದರೆ ಇದೇ ಬೀದಿಯ ಪಕ್ಕದ ಪಡನೆ ಎಂಬ ಪ್ರದೇಶದಿಂದ 21 ಯುವಕರು ಅಫ್ಘಾನಿಸ್ತಾನಕ್ಕೆ ಪರಾರಿಯಾಗಿ ಐಸಿಸ್ ಸೇರಿದ್ದರು. ಇದೀಗ ಈ ಬೀದಿಗೆ ಗಾಜಾ ಎಂಬ ಹೆಸರಿಟ್ಟಿರುವುದು ಮತ್ತಷ್ಟು ಆತಂಕವನ್ನುಂಟುಮಾಡಿದೆ.

English summary
IB officials have for years have been saying that there are major radicalisation drives in Kerala. A street in Kerala has been named Gaza and this has caught the eye of the Intelligence Bureau. The street in the Thuruthi ward of the Kasargod municipality was named Gaza in an apparent reference to the disputed strip of land between Israel and Palestine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X