ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಬೈಲ್ ಮೂಲಕ ಮನಿಯಾರ್ಡರ್ ಕಳಿಸಿ

|
Google Oneindia Kannada News

ಬೆಂಗಳೂರು, ಸೆ.28 : ಭಾರತೀಯ ಅಂಚೆ ಇಲಾಖೆ ಮತ್ತುಷ್ಟು ಗ್ರಾಹಕ ಸ್ನೇಹಿಯಾಗಿದೆ. ಮನಿಯಾರ್ಡರ್ ಕಳಿಸುವುದನ್ನು ಸರಳಗೊಳಿಸಿರುವ ಇಲಾಖೆ, ಮೊಬೈಲ್ ಮೂಲಕ ಹಣವನ್ನು ಕಳಿಸುವ ನೂತನ ಮೊಬೈಲ್ ಮಿನಿ ಟ್ರಾನ್ಸ್‌ಫ‌ರ್ ಸೇವೆಯನ್ನು ಪ್ರಾರಂಭಿಸಿದೆ.

ಶುಕ್ರವಾರ ಕರ್ನಾಟಕ ವೃತ್ತದ ಪ್ರಧಾನ ಅಂಚೆ ಮಹಾ ಪ್ರಬಂಧಕ ಎಂ.ಎಸ್‌. ರಾಮಾನುಜನ್‌ ಮತ್ತು ಬಿಎಸ್‌ಎನ್‌ಎಲ್‌ ಕರ್ನಾಟಕ ವೃತ್ತದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಆರ್‌.ಕೆ. ಮಿಶ್ರಾ ಈ ಯೋಜನೆಗೆ ಚಾಲನೆ ನೀಡಿದರು.

mobile

ಮೊಬೈಲ್ ಮಿನಿ ಟ್ರಾನ್ಸ್‌ಫ‌ರ್ ಸೇವೆ ಮೂಲಕ, ಮೊಬೈಲ್‌ನಲ್ಲಿ ಕರೆ ಮಾಡುವಷ್ಟು ಅಥವಾ ಸಂದೇಶ ಕಳುಹಿಸಿದಷ್ಟೇ ಸುಲಭವಾಗಿ, ಕೆಲವೇ ಕ್ಷಣಗಳಲ್ಲಿ ಮನಿಯಾರ್ಡರ್ ಕಳುಹಿಸಬಹುದಾಗಿದೆ. ಇದರಿಂದಾಗಿ ಮನಿಯಾರ್ಡರ್ ಕಳಿಸುವುದು ಸರಳವಾಗಿದೆ.

ಸೇವೆಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಮಾನುಜನ್‌, ಮೊಬೈಲ್‌ ಮನಿ ಟ್ರಾನ್ಸ್‌ಫ‌ರ್ ಯೋಜನೆ ಅನೇಕ ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ಬಂದಿದೆ. ಕರ್ನಾಟದಲ್ಲಿ ಮೊದಲ ಬಾರಿಗೆ ಈ ಯೋಜನೆ ಆರಂಭಿಸಲಾಗಿದ್ದು, ಪ್ರಸ್ತುತ 400 ಅಂಚೆ ಕಚೇರಿಗಳಲ್ಲಿ ಮೊಬೈಲ್‌ ಮನಿ ಟ್ರಾನ್ಸ್‌ಫ‌ರ್ ಸೇವೆ ಲಭ್ಯವಿದೆ ಎಂದರು.

ಹಣ ಕಳಿಸುವುದು ಹೇಗೆ : ಮೊಬೈಲ್‌ ಮನಿ ಟ್ರಾನ್ಸ್‌ಫ‌ರ್ ಮೂಲಕ ಹಣ ಕಳುಹಿಸುವುದು ತುಂಬಾ ಸರಳ. ಮೊದಲು ನೀವು ಈ ಸೇವೆ ಇರುವ ಹತ್ತಿರದ ಅಂಚೆ ಕಚೇರಿಗೆ ತೆರಳಿ, ಯಾರಿಗೆ ಎಷ್ಟು ಹಣ ಕಳುಹಿಸಬೇಕು ಎಂದು ಬರೆದು ಜತೆಗೆ ಮೊಬೈಲ್‌ ಸಂಖ್ಯೆ ನಮೂದಿಸಿ ಕಳುಹಿಸಬೇಕಾದ ಹಣದ ಜತೆಗೆ ಸೇವಾ ಶುಲ್ಕ ಪಾವತಿಸಬೇಕು.

ತಕ್ಷಣ ಯಾರಿಗೆ ಹಣ ತಲುಪಬೇಕೋ ಅವರಿಗೆ ಮತ್ತು ಹಣ ಕಳುಹಿಸಿದ ಇಬ್ಬರೂ ವ್ಯಕ್ತಿಗಳಿಗೆ ಕೂಡಲೇ ಸಂದೇಶ ರವಾನೆಯಾಗುತ್ತದೆ. ಸಂದೇಶ ಸ್ವೀಕರಿಸಿದ ವ್ಯಕ್ತಿ ಕೂಡಲೇ ಹತ್ತಿರದ ಅಂಚೆ ಕಚೇರಿಗೆ ಹೋಗಿ ಗೌಪ್ಯ ಸಂಖ್ಯೆಯನ್ನೊಳಗೊಂಡ ಮೊಬೈಲ್‌ ಸಂದೇಶವನ್ನು ನೀಡಿದರೆ ಕೈಗೆ ಹಣ ದೊರೆಯಲಿದೆ.

ಸೇವಾ ಶುಲ್ಕ ಎಷ್ಟು : ಮೊಬೈಲ್‌ ಮನಿ ಟ್ರಾನ್ಸ್‌ಫ‌ರ್ ಮೂಲಕ ಹಣ ಕಳಿಸುವವರು ಸೇವಾಶುಲ್ಕ ಪಾವತಿ ಮಾಡಬೇಕಾಗುತ್ತದೆ. ಅದರಂತೆ, 1000ದಿಂದ 1500 ರೂ. ಕಳುಹಿಸುವವರು 45 ರೂ., 1, 501ರಿಂದ 5000 ರೂ.ವರೆಗೆ ಕಳುಹಿಸುವವರು 75 ರೂ. ಮತ್ತು 5001ರಿಂದ 10,000 ಕಳುಹಿಸುವ ಜನರು 112 ರೂ. ಶುಲ್ಕ ಪಾವತಿ ಮಾಡಬೇಕಾಗಿದೆ.

English summary
Now send your Money Order through Mobile phone. Postal Department of India begins Mobile Mini transfers service in Karnataka on Friday, September 27. by this service you can send Money Order through Mobile. service will available at 400 post office at Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X