ಜೈಲಿನಲ್ಲಿರುವಾಗಲೇ ಹೊಸೂರು ಶಾಸಕನ ಮನೆಗೆ ಹೋಗಿ ಬಂದ್ರಂತೆ ಶಶಿಕಲಾ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಆಗಸ್ಟ್ 23: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಶಿಕಲಾ ನಟರಾಜನ್ ಹೊಸೂರು ಶಾಸಕನ ಮನೆಗೆ ಹೋಗಿ ಬಂದಿದ್ರಾ? ಹೀಗೊಂದು ಪ್ರಶ್ನೆ ಇದೀಗ ಉದ್ಭವಿಸಿದೆ.

ಎಂಜಿ ರಸ್ತೆಯಲ್ಲಿ ಪ್ರತ್ಯಕ್ಷಳಾದ ಜೈಲು ಹಕ್ಕಿ ಶಶಿಕಲಾ!

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಜೈಲಿನಲ್ಲಿ ತಮ್ಮ ನಾಲ್ಕು ವರ್ಷಗಳ ಶಿಕ್ಷೆಯನ್ನು ಶಶಿಕಲಾ ನಟರಾಜನ್ ಅನುಭವಿಸುತ್ತಿದ್ದಾರೆ. ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಲ್ಲಿಸಲಾಗಿರುವ ವರದಿಯಲ್ಲಿ, "ಆಕೆ ಕೆಲವೊಮ್ಮೆ ಜೈಲಿನ ಪಕ್ಕದಲ್ಲಿರುವ ಮನೆಗೆ ಹೋಗಿ ಬರುತ್ತಿದ್ದರು ಎಂಬ ಖಚಿತ ಮಾಹಿತಿಗಳಿವೆ. ಆ ಮನೆ ಹೊಸೂರು ಶಾಸಕನಿಗೆ ಸೇರಿದೆ. ಜೈಲಿನ ಪ್ರವೇಶ ದ್ವಾರ ಮತ್ತು ಗೇಟ್ 1 ಮತ್ತು 2ರಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಇದಕ್ಕೆ ಹೆಚ್ಚಿನ ಸಾಕ್ಷಿಗಳಾಗಿವೆ," ಎಂದು ಡಿಐಜಿ ತಮ್ಮ ವರದಿಯಲ್ಲಿ ಹೇಳಿದ್ದಾರೆ.

Now Sasikala accused of visiting Hosur MLA's house amidst prison sentence

ಈ ಹಿಂದೆ ಜೈಲಿನಲ್ಲಿ ವಿಶೇಷ ಆತಿಥ್ಯ ಪಡೆಯುತ್ತಿರುವ ಶಶಿಕಲಾ ಬಗ್ಗೆ ಪೊಲೀಸ್ ಅಧಿಕಾರಿಗಳು ದೂರು ನೀಡಿದ್ದರು. ಜೈಲಿನಿಂದ ಶಶಿಕಲಾ ಹಲವು ಬಾರಿ ಹೊರಗೆ ಹೋಗಿ ಒಳ ಬರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು.

ಇದರ ಜತೆಗೆ ಶಶಿಕಲಾ ಬೆಂಗಳೂರಿನ ಬ್ರಿಗೇಡ್ ರಸ್ತೆಗೆ ಶಾಪಿಂಗ್ ಗೆ ಹೋಗುತ್ತಿದ್ದರು ಎಂಬ ಆರೋಪಗಳೂ ಇವೆ.

ಈ ಹಿಂದೆ ಡಿಐಜಿ ಡಿ ರೂಪಾ, ಶಶಿಕಲಾರಿಗೆ ವಿಶೇಷ ಆತಿಥ್ಯ ನೀಡಲು ಜೈಲು ಅಧಿಕಾರಿಗಳು ಜೈಲಿನ ಕೈಪಿಡಿಯ ನಿಯಮಗಳನ್ನು ಮುರಿಯುತ್ತಿದ್ದಾರೆ ಎಂದು ಆರೋಪಿಸಿದ್ದರು. ವಿಶೇಷ ಸೌಲಭ್ಯಗಳನ್ನುಕಲ್ಪಿಸಿದ್ದರೂ ಸರಕಾರಕ್ಕೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂಬುದೂ ಡಿಐಜಿ ಡಿ ರೂಪಾ ಆರೋಪವಾಗಿತ್ತು. ಇದೀಗ ಒಂದೊಂದಾಗಿ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Did Sasikala visit the house of an MLA. Sasikala Natrajan who was convicted by the Supreme Court in the disproportionate assets case is serving her four year sentence in the Bengaluru central jail.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ