ಕಮರ್ಷಿಯಲ್ ಸ್ಟ್ರೀಟ್‌ನಲ್ಲೂ ಮಹಿಳೆಯರಿಗೆ ಪಾರ್ಕಿಂಗ್ ಮೀಸಲಾತಿ

Posted By: Gururaj
Subscribe to Oneindia Kannada

ಬೆಂಗಳೂರು, ನವೆಂಬರ್ 13 : ಮಹಿಳಾ ಕಾರು ಚಾಲಕಿಯರಿಗೆ ಪಾರ್ಕಿಂಗ್‌ನಲ್ಲಿ ಮೀಸಲಾತಿ ಕಲ್ಪಿಸುವ ಸೌಲಭ್ಯವನ್ನು ಬಿಬಿಎಂಪಿ ವಿಸ್ತರಣೆ ಮಾಡಿದೆ. ಕಮರ್ಷಿಯಲ್ ಸ್ಟ್ರೀಟ್ ಮತ್ತು ಗರುಡಾ ಮಾಲ್‌ನಲ್ಲಿ ಈ ಸೌಲಭ್ಯವನ್ನು ಉದ್ಘಾಟಿಸಲಾಗಿದೆ.

ಬೆಂಗಳೂರಲ್ಲಿ ಮಹಿಳಾ ಕಾರು ಚಾಲಕಿಯರಿಗೆ ಪಾರ್ಕಿಂಗ್ ಮೀಸಲಾತಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಸಂಪತ್ ರಾಜ್ ಭಾನುವಾರ ಈ ಸೌಲಭ್ಯವನ್ನು ಉದ್ಘಾಟಿಸಿದರು. ಅಕ್ಟೋಬರ್ 30ರಂದು ಬ್ರಿಗೇಡ್ ರಸ್ತೆಯಲ್ಲಿ ಈ ಸೌಲಭ್ಯವನ್ನು ಮೊದಲು ಪರಿಚಯಿಸಲಾಗಿತ್ತು.

Now reserved parking slots for women drivers on Commercial Street

ಮಾಧ್ಯಮಗಳ ಜೊತೆ ಮಾತನಾಡಿದ ಮೇಯರ್, 'ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ 72 ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಇದೆ. ಇದರಲ್ಲಿ ಮಹಿಳೆಯರಿಗೆ 15 ಕಾರು ನಿಲ್ಲಿಸಲು ಅವಕಾಶ ನೀಡಲಾಗಿದೆ. ಮೂರು ಸ್ಥಳಗಳಲ್ಲಿ ಅಂಗವಿಕಲರಿಗೆ ವ್ಯವಸ್ಥೆ ಮಾಡಲಾಗಿದೆ' ಎಂದರು.

ರಸ್ತೆಗುಂಡಿ ಮುಚ್ಚದ ಬಿಬಿಎಂಪಿ ಮೂವರು ಇಂಜಿನಿಯರ್ ಅಮಾನತು

ಗರುಡಾ ಮಾಲ್‌ನಲ್ಲಿ 972 ವಾಹನಗಳನ್ನು ನಿಲುಗಡೆ ಮಾಡುವ ವ್ಯವಸ್ಥೆ ಇದೆ. ಇವುಗಳಲ್ಲಿ 195 ಅನ್ನು ಮಹಿಳೆಯರಿಗೆ ಮೀಸಲಾಗಿಡಲಾಗಿದೆ.

'ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಮಹಿಳೆಯರಿಗೆ ವಾಹನ ನಿಲುಗಡೆ ಮಾಡಲು ಶೇ 20ರಷ್ಟು ಮೀಸಲಾತಿ ನೀಡಲಾಗುತ್ತದೆ' ಎಂದು ಸಂಪತ್ ರಾಜ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bruhat Bengaluru Mahanagara Palike (BBMP) mayor Sampath Raj inaugurated reserved parking slots for women on the Commercial Street and near Garuda Mall.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ