ಚುನಾವಣೆ ಬಂತಲ್ಲ: ಗೂಬೆಗೂ ಅದೃಷ್ಟದ ಕಾಲ ಕೂಡಿ ಬಂತು!

Posted By: Nayana
Subscribe to Oneindia Kannada
   ಓಲಾ ಕ್ಯಾಬ್ಸ್ ಮಹಿಳೆಯರಿಗೆ ಸುರಕ್ಷಿತವಲ್ಲ, ನಟಿ ಪಾರ್ವತಿ ನಾಯರ್ ಟ್ವೀಟ್ | ಕಾರಣ? | Filmibeat Kannada

   ಬೆಂಗಳೂರು, ಮಾರ್ಚ್ 09: ಈಗ ಚುನಾವಣೆ ಕಾಲ, ರಾಜಕಾರಣಿಗಳು ಮತಯಾಚಿಸಲು ಮತದಾರರನ್ನು ಓಲೈಸಲು ಕುಕ್ಕರ್ , ಸೀರೆ ಮುಂತಾದ ಗೃಹಪಯೋಗಿ ವಸ್ತುಗಳನ್ನು ಹಂಚುವುದು ಸಾಮಾನ್ಯ.ಇದೆಲ್ಲ ತೆರೆಯ ಮೇಲೆ ಕಾಣುವ ಮತದಾರರ ಓಲೈಕೆಯ ಪ್ರಯತ್ನವಾದರೆ ತೆರೆಯ ಹಿಂದೆ ಕೆಲ ಪ್ರಯತ್ನ ಕೂಡ ಚುನಾವಣೆಗಾಗಿ ನಡೆಯುತ್ತಿರುತ್ತದೆ. ಆ ಪೈಕಿ ಗೂಬೆ ದರ್ಶನ ಮಾಡುವುದು ಕೂಡ.

   ಚುನಾವಣೆ ಬಂತೆಂದರೆ ರಾಜಕಾರಣಿಗಳು ಮತದಾರರನ್ನು ಹುಡುಕಲು ಮನೆ ಮನೆಗೆ ತೆರಳುವುದು ಸಾಮಾನ್ಯ. ಆದರೆ ಈಗ ಎಲ್ಲರೂ ಬೈದುಕೊಳ್ಳುವ ಗೂಬೆಯನ್ನು ಕೂಡ ರಾಜಕಾರಣಿಗಳು ಬಿಡುತ್ತಿಲ್ಲ. ಅದೃಷ್ಟದ ಸಂಕೇತವೆಂದು ಗೂಬೆ ಹಿಂದೆ ಬಿದ್ದಿದ್ದಾರೆ. ಮಾಟ, ಮಂತ್ರಕ್ಕೆ ಹೆಸರಾಗಿರುವ ಕೊಳ್ಳೆಗಾಲಕ್ಕೆ ರಾಜಕೀಯ ಮುಖಂಡರು ಬರುತ್ತಿದ್ದಾರಲ್ಲದೆ, ಚುನಾವಣೆಯ ಗೆಲುವಿಗಾಗಿ ಅದೃಷ್ಟದ ಸಂಕೇತವೆಂದು ನಂಬಲಾದ

   ಈ ಗೂಬೆಯ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 3 ಲಕ್ಷ ರೂ.!

   ಗೂಬೆಯನ್ನು ಖರೀದಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಗೂಬೆ ಅಪಶಕುನ ಪಕ್ಷಿ ಎಂಬುದು ಸಾಮಾನ್ಯ ನಂಬಿಕೆ. ಆದರೆ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಅದು ಅದೃಷ್ಟದ ಸಂಕೇತ ಎಂಬ ನಂಬಿಕೆಯನ್ನು ಹರಿಯಬಿಡಲಾಗಿದೆ. ಹಾಗಾಗಿ ಗೂಬೆಯನ್ನು ಮಾರಾಟ ಮಾಡುವ ಜಾಲ ಕಾರ್ಯ ಪ್ರವೃತ್ತವಾಗಿದೆ.

   Now political appease not only voters, even owls!

   ಗೂಬೆ ಲಕ್ಷ್ಮೀದೇವಿಯ ವಾಹನ ಎನ್ನಲಾಗುತ್ತದೆ. ಈಕೆ ಕುಳಿತು ಸಂಚರಿಸುವ ಗೂಬೆಯನ್ನು ಖರೀದಿಸಿ ಪೋಷಣೆ ಮಾಡಿದರೆ ವಿಜಯಲಕ್ಷ್ಮೀ ಒಲಿವಳು ಎಂಬ ನಂಬಿಕೆಗೆ ಜೋತು ಬಿದ್ದಿದ್ದಾರೆ. ಇದಕ್ಕೆ ಪುರಾವೆ ಎಂಬಂತೆ ಕೊಳ್ಳೆಗಾಲದಲ್ಲಿ ಅದೃಷ್ಟದ ಗೂಬೆ ಎಂದು ಮಾರಟ ಮಾಡುತ್ತಿದ್ದಿಬ್ಬರನ್ನು ಜಿಲ್ಲಾ ತಡೆ ಪೊಲೀಸರು ಅಪರಾಧ ತಡೆ ಪೊಲೀಸರು ಬಂಧಿಸಿದ್ದಾರೆ.

   ಇವರು ರಾಜಕೀಯ ಮುಖಂಡರಿಗೆ ಗೂಬೆಗಳನ್ನು ಮಾರಾಟ ಮಾಡಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಬಂಧಿತರಿಂದ 2.5 ಕೆಜಿ ತೂಕದ ಗೂಬೆಯನ್ನು ವಶಪಡಿಸಿಕೊಂಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Is this time appease every body to win their heart. Because its elections season. So politicians are busy with strategy. Even they are searching some owls too. Why ? Read this story.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ