ಓಲಾ, ಊಬರ್ ಟ್ಯಾಕ್ಸಿ ರದ್ದು ಮಾಡಿದರೂ ದಂಡ ಕಟ್ಟಬೇಕು!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜುಲೈ 11 : ಬೆಂಗಳೂರಿನಲ್ಲಿ ಟ್ಯಾಕ್ಸಿ ಸೇವೆಯನ್ನು ರದ್ದುಗೊಳಿಸಿದರೂ ಇನ್ನು ಮುಂದೆ ಪ್ರಯಾಣಿಕರು ಹಣ ಪಾವತಿ ಮಾಡಬೇಕು. ಓಲಾ ಮತ್ತು ಊಬರ್ ಟ್ಯಾಕ್ಸಿ ಕಂಪನಿಗಳು Cancellation fee ಸಂಗ್ರಹ ಮಾಡುತ್ತಿವೆ.

ಓಲಾ ರೂ. 25 ರಿಂದ 200ರ ತನಕ ಮತ್ತು ಊಬರ್ 50 ರಿಂದ 150ರ ತನಕ Cancellation fee ಸಂಗ್ರಹ ಮಾಡುತ್ತಿವೆ. ಸಾರಿಗೆ ಇಲಾಖೆ ನಿಗದಿ ಪಡಿಸಿರುವ ಟ್ಯಾಕ್ಸಿ ಮಾರ್ಗಸೂಚಿಗಳಲ್ಲಿ ಈ ದರ ಕಡಿತಗೊಳಿಸಲು ಅವಕಾಶವಿಲ್ಲ. ಆದರೆ, ಟ್ಯಾಕ್ಸಿ ಕಂಪನಿಗಳು ಮಾತ್ರ ದರ ಕಡಿತ ಮಾಡುತ್ತಿವೆ. [ಕರ್ನಾಟಕದಲ್ಲಿ ಓಡಾಡುವ ಓಲಾಕ್ಕೆ ಸಿಕ್ತು ಪರವಾನಗಿ]

ola

'ಬುಕ್ ಮಾಡಿದ ಪಿಕಪ್ ಪಾಯಿಂಟ್‌ನಲ್ಲಿ ಪ್ರಯಾಣಿಕರು ಇಲ್ಲದಿದ್ದರೆ ಅವರ ಮುಂದಿನ ಬುಕ್ಕಿಂಗ್ ವೇಳೆ Cancellation fee ಕಡಿತ ಮಾಡಲಾಗುತ್ತದೆ. ಚಾಲಕ ಪಿಕ್ ಅಪ್ ಪಾಯಿಂಟ್ ತಲುಪಿದ್ದಕ್ಕಾಗಿ, ಆತನಿಗೆ ಈ ಹಣವನ್ನು ಪಾವತಿ ಮಾಡಲಾಗುತ್ತದೆ' ಎಂದು ಓಲಾದ ಅಧಿಕಾರಿಯೊಬ್ಬರು ಹೇಳಿದ್ದಾರೆ. [ಓಲಾ ಲಕ್ಸ್ : ಐಷಾರಾಮಿ ಕಾರಲ್ಲಿ ಸುತ್ತಾಡಿ]

ಟ್ಯಾಕ್ಸಿ ಬುಕ್ ಮಾಡಿದ 5 ನಿಮಿಷದ ಬಳಿಕ ಪ್ರಯಾಣ ರದ್ದುಗೊಳಿಸಿದರೆ ದರ ಕಡಿತ ಮಾಡಲಾಗುತ್ತದೆ ಎಂದು ಊಬರ್ ಹೇಳಿದೆ. ಡ್ರೈವರ್ ಪಿಕಪ್ ಪಾಯಿಂಟ್‌ಗೆ ಬರಲು ತೆಗೆದುಕೊಂಡ ಸಮಯಕ್ಕಾಗಿ ಆತನಿಗೆ ಈ ದರವನ್ನು ನೀಡಲಾಗುತ್ತದೆ. ಐದು ನಿಮಿಷದೊಳಗೆ ಪ್ರಯಾಣ ರದ್ದು ಮಾಡಿದರೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. [ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

ಸಾರಿಗೆ ಇಲಾಖೆ ಟ್ಯಾಕ್ಸಿಗಳಿಗೆ ಕೆಲವು ದಿನಗಳ ಹಿಂದೆ ಮಾರ್ಗಸೂಚಿ ಹೊರಡಿಸಿತ್ತು. ಇದರಲ್ಲಿ Cancellation fee ಮತ್ತು ಸರ್ ಚಾರ್ಜ್‌ ವಿಧಿಸುವುದಕ್ಕೆ ಅವಕಾಶವಿರಲಿಲ್ಲ. ಈದೀಗ ಈ ಪ್ರಕರಣ ಹೈಕೋರ್ಟ್‌ನಲ್ಲಿದೆ. ಕೋರ್ಟ್ ಆದೇಶ ಬಂದ ಮೇಲೆ ಸಾರಿಗೆ ಇಲಾಖೆ ಈ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Now Uber and Ola will charge you a cancellation fee for cancelling your taxi. Cancellation fee will be given to the driver as compensation for reaching the point.
Please Wait while comments are loading...