ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಮಾಲ್‌ಗಳಲ್ಲಿ ಸಾವಯವ ಉತ್ಪನ್ನಗಳು ದೊರೆಯಲಿದೆ

By Nayana
|
Google Oneindia Kannada News

ಬೆಂಗಳೂರು, ಜು.18: ಇನ್ನುಮುಂದೆ ನಗರದಲ್ಲಿರುವ ಮಾಲ್‌ಗಳಲ್ಲಿ ಕೂಡ ಸಾವಯವ ಉತ್ಪನ್ನಗಳು ದೊರೆಯಲಿದೆ. ಸಾವಯವ ಕೃಷಿ ಉತ್ಪನ್ನಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕೃಷಿ ಇಲಾಖೆಯು ಎಲ್ಲಾ ಮಾಲ್‌ಗಳಲ್ಲೂ ಸಾವಯವ ಉತ್ಪನ್ನಗಳನ್ನು ಇರಿಸಲು ಮುಂದಾಗಿದೆ.

ಕೃಷಿ ಇಲಾಖೆ ಹಾಗೂ ಕೃಷಿಕರ ಒಕ್ಕೂಟನಗರ ಸೂಪರ್‌ ಮಾರ್ಕೆಟ್‌ ಜತೆ ಸಂಯೋಜನೆ ಮಾಡಲು ನಿರ್ಧರಿಸಿದೆ.ರಾಜ್ಯದಲ್ಲಿ ಸುಮಾರು 95 ಸಾವಿರಕ್ಕೂ ಹೆಚ್ಚು ನೋಂದಾಯಿತ ಸಾವಯವ ಕೃಷಿಕರಿದ್ದು, ಹಣ್ಣು, ತರಕಾರಿ, ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳುಗಳು ಸೇರಿದಂತೆ ಹಲವು ಬೆಳೆಗಳನ್ನು ಸಾವಯವ ಕೃಷಿ ಪದ್ಧತಿ ಮೂಲಕ ಬೆಳೆಯುತ್ತಿದ್ದಾರೆ.

ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಅರ್ಧ ಮಸಾಲೆ ದೋಸೆ ಬಗ್ಗೆ ಗೊತ್ತಾ?ಸಂಪಂಗಿರಾಮನಗರದ ಸಿದ್ದಪ್ಪ ಹೋಟೆಲ್ ಅರ್ಧ ಮಸಾಲೆ ದೋಸೆ ಬಗ್ಗೆ ಗೊತ್ತಾ?

ಆದರೆ ಈ ಪದಾರ್ಥಗಳಿಗೆ ಸೂಕ್ತ ಮಾರುಕಟ್ಟೆಯಿಲ್ಲದೆ ರೈತರು ಕಂಗಾಲಾಗಿದ್ದರು, ಹಾಗೂ ಬೆಳೆಗಳನ್ನು ಬೆಳೆಯಲು ಹಿಂದೇಟು ಹಾಕುತ್ತಿದ್ದರು. ಈಗಾಗಲೇ ಕೆಲವು ಮಾಲ್‌ಗಳ ಆಹಾರ ವಿಭಾಗದಲ್ಲಿ ಆಯ್ದ ಸಾವಯವ ಉತ್ಪನ್ನಗಳ ಮಾರಾಟ ನಡೆದಿದೆ.

Now Organic products available in Bengaluru Malls

ಆದರೆ ಎಲ್ಲ ಉತ್ಪನ್ನಗಳು ಸಿಗುತ್ತಿಲ್ಲ. ಜನರು ಖರೀದಿಸಲು ಬಯಸಿದರೂ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬಿಗ್‌ ಬಜಾರ್‌, ಫುಡ್‌ ವರ್ಲ್ಡ್, ಮೋರ್‌, ಸ್ಟಾರ್‌ ಬಜಾರ್‌ ರಿಯಲಯನ್ಸ್‌ ಮಾರ್ಟ್‌ ಸೇರಿದಂತೆ ಅನೇಕ ಸೂಪರ್‌ ಮಾರ್ಕೆಟ್‌ಗಳಲ್ಲಿ ಲಭ್ಯವಿರಲಿದೆ.

ಗ್ರಾಮೀಣ ಕೃಷಿ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುವ ರೈತರ ಒಕ್ಕೂಟಗಳನ್ನು ರಚಿಸಲಾಗಿದೆ. ಈ ಒಕ್ಕೂಟದಲ್ಲಿ ಸಾವಯವ ಕೃಷಿಕರನ್ನು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ನೋಂದಣಿಯಾದ ರೈತರು ಸಾವಯವ ಕೃಷಿ ಕೃಷಿ ಪದ್ಧತಿಯನ್ನು ಅನುಸರಿಸುವುದು ಕಡ್ಡಾಯವಾಗಿದೆ ಈ ಒಕ್ಕೂಟದ ರೈತರು 5 ಅಥವಾ 10 ರೂ.ಗಳಷ್ಟು ಷೇರುಗಳನ್ನು ಹಾಕಿ ಸ್ಥಳೀಯವಾಗಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಂಡು ವ್ಯವಹರಿಸುತ್ತಿದ್ದಾರೆ.

English summary
There is a good news for organic farmers and consumers, Organic products will available in Mall also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X