ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್‌ ಮೂಲಕವೂ ನಂದಿನಿ ಹಾಲು ಲಭ್ಯ

|
Google Oneindia Kannada News

ಬೆಂಗಳೂರು, ಜೂ. 01 : ಇನ್ನು ಮುಂದೆ ಬೆಂಗಳೂರಿನಲ್ಲಿ ನಂದಿನಿ ಹಾಲು ತರಲು ಬೂತ್‌ಗಳನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತುಕೊಂಡು ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದಾಗಿದೆ. ಕೆಎಂಎಫ್ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಬಿಗ್ ಬಾಸ್ಕೆಟ್.ಕಾಮ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಆನ್ ಲೈನ್ ಮೂಲಕ ಆರ್ಡರ್ ಮಾಡಿದವರಿಗೆ ಮನೆ ಬಾಗಿಲಿಗೆ ಹಾಲು ಪೂರೈಕೆ ಮಾಡಲು ಮುಂದಾಗಿದೆ. ಜೂನ್ 1ರಿಂದ ಪ್ರಾಯೋಗಿಕವಾಗಿ ಈ ಸೇವೆಗೆ ಚಾಲನೆ ನೀಡಿದೆ.

milk

ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಆನ್ ಲೈನ್ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ಆರಂಭಿಸಲಾಗಿದೆ. ಆನ್ ಲೈನ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಧ ಮತ್ತು 1 ಲೀಟರ್ ಹಾಲು ಮತ್ತು ಮೊಸರು ಪಡೆಯಲು ಆರ್ಡರ್ ಮಾಡಬಹುದಾಗಿದೆ. [ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ]

ಆನ್‌ಲೈನ್ ಮೂಲಕ ಹಾಲು ಮತ್ತು ಮೊಸರು ಮನೆಗೆ ತರಿಸಿಕೊಂಡರೂ ಕೆಎಂಎಫ್ ನಿಗದಿಪಡಿಸಿದ ದರದಲ್ಲಿಯೇ ದೊರೆಯಲಿದೆ. ಬಿಗ್ ಬಾಸ್ಕೆಟ್.ಕಾಮ್ ಕೆಲವೊಮ್ಮೆ ಆಫರ್‌ಗಳನ್ನು ನೀಡಲಿದ್ದು, ಆ ಸಮಯದಲ್ಲಿ ದರಗಳು ಕಡಿತವಾಗುವ ಸಾಧ್ಯತೆ ಇದೆ. [ಹಾಲಿನ ದರ ಹೆಚ್ಚಳಕ್ಕೆ ನಡೆದಿದೆ ಮಾತುಕತೆ]

KMF

ಹೇಗೆ ತಲುಪಿಸಲಾಗುತ್ತದೆ ? : ಗ್ರಾಹಕರು ಮೊದಲು ಬಿಗ್ ಬಾಸ್ಕೆಟ್.ಕಾಮ್ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ನಂತರ ಅಲ್ಲಿ ದೊರೆಯುವ ನಂದಿನಿ ಉತ್ಪನ್ನಗಳನ್ನು ಪಡೆಯಲು ಆರ್ಡರ್ ಮಾಡಬಹುದು. ಸಮಯಕ್ಕೆ ತಕ್ಕಂತೆ ಅದನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

English summary
You can order for Nandini milk through a mobile app now. Karnataka Milk Federation (KMF) has partnered with online grocery portal BigBasket.com to sale milk products. There is no fixed minimum order ­even half or one liter packets of milk will be delivered said, KMF Managing Director SN Jayaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X