ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೀಕ್ಷೆ ಬಳಿಕ 15 ನಿಮಿಷಕ್ಕೆ ಫಲಿತಾಂಶ: ರಾಜೀವ್‌ ಗಾಂಧಿ ವಿವಿ ಸಾಧನೆ

By Nayana
|
Google Oneindia Kannada News

ಬೆಂಗಳೂರು, ಜು.13: ಬೆಂಗಳೂರು ವಿಶ್ವವಿದ್ಯಾಲಯ ಪರೀಕ್ಷೆ ನಡೆಸಿದ ಮೂರು ಗಂಟೆಯಲ್ಲೇ ಪರೀಕ್ಷೆ ಫಲಿತಾಂಶ ಬಿಡುಗಡೆಬಿಡುಗಡೆ ಮಾಡಿತ್ತು. ಎಂಜಿನಿಯರಿಂಗ್‌ ಫಲಿತಾಂಶ ಕೇವಲ ಎರಡೇ ದಿನದಲ್ಲಿ ನೀಡಿತ್ತು. ಇದೀಗ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯ ಕೆಲವೇ ನಿಮಿಷಗಳಲ್ಲಿ ಫಲಿತಾಂಶ ಬಿಡುಗಡೆ ಮಾಡಿ ಇತಿಹಾಸ ಸೃಷ್ಟಿಸಿದೆ.

ಕೆಲವೇ ನಿಮಿಷಗಳಲ್ಲಿ ಫಲಿತಾಂಶ ಬಿಡುಗಡೆ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ. ಎಂಡಿಎಸ್‌ ಮತ್ತು ಡಿಪ್ಲೊಮಾ ಇನ್‌ ಡೆಂಟಿಸ್ಟರಿ, ಡೆಂಟಲ್‌ ಡಿಪ್ಲೊಮಾ ಥಿಯರಿ ಪರೀಕ್ಷೆಗಳನ್ನು ಆರ್‌ಜಿಯುಎಚ್‌ಎಸ್‌ ಕಳೆದ ವಾರ ನಡೆಸಿತ್ತು. ಆ ಪರೀಕ್ಷೆಗಳ ಮೌಲ್ಯಮಾಪನ ಮಾಡಿಸಲಾಗಿತ್ತು.

ಪರೀಕ್ಷೆ ಮುಗಿಸಿ ಮನೆಗೆ ತೆರಳುವ ಒಳಗೆ ರಿಸಲ್ಟ್ !ಪರೀಕ್ಷೆ ಮುಗಿಸಿ ಮನೆಗೆ ತೆರಳುವ ಒಳಗೆ ರಿಸಲ್ಟ್ !

ಗುರುವಾರ ಪ್ರಾಯೋಗಿಕ ಪರೀಕ್ಷೆ ಮುಗಿದ 15 ನಿಮಿಷಗಳಲ್ಲಿ ಪ್ರಾಯೋಗಿಕ ಮತ್ತು ಥಿಯರಿ ಪರೀಕ್ಷೆಗಳ ಅಂಕಗಳನ್ನು ಕ್ರೋಢೀಕರಿಸಿ ಫಲಿತಾಂಶ ಪ್ರಕಟಿಸಿದೆ. ಈ ಮೊದಲು ಫಲಿತಾಂಶ ನೀಡಲು ಕನಿಷ್ಠ 4 ವಾರ ಬೇಕಿತ್ತು. ಈಗ ಕಡಿಮೆ ಅವಧಿಯಲ್ಲಿ ಫಲಿತಾಂಶ ನೀಡಿದ್ದೇವೆ, ಇದಕ್ಕೆ ಮೌಲ್ಯಮಾಪಕರ ಸಹಕಾರ ಕಾರಣ ಎಂದು ಕುಲಸಚಿವ ಡಾ. ಎಂ.ಕೆ. ರಮೇಶ್‌ ತಿಳಿಸಿದ್ದಾರೆ.

Now instant result in medical courses too!

ಬೆವಿವಿ ನಡೆಸಿದ ಪರೀಕ್ಷೆ ಬಳಿಕ ಮೂರು ಗಂಟೆಯಲ್ಲೇ ಫಲಿತಾಂಶ ಪ್ರಕಟಿಸಲಾಗಿತ್ತು 150 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು ಆದರೆ ಆರ್‌ಜಿಯುಎಚ್‌ಎಸ್‌ನಲ್ಲಿ 850 ವಿದ್ಯಾರ್ಥಿಗಳು ಹಾಜರಾಗಿದ್ದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ 7 ಮತ್ತು 8ನೇ ಸೆಮಿಸ್ಟರ್‌ ಪರೀಕ್ಷೆಗಳು ಮುಗಿದ ಮೂರು ಗಂಟೆಯಲ್ಲೇ ಅಂತಿಮ ಫಲಿತಾಂಶ ಪ್ರಕಟಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಆನ್‌ಲೈನ್‌ನಲ್ಲಿ ಪರೀಕ್ಷೆಗಳ ಫಲಿತಾಂಶ ಕೆಲ ಗಂಟೆಯಲ್ಲೇ ಹೊರಬಂದಿರುವ ಉದಾಹರಣೆಗಳಿವೆ ಆದರೆ ಲಿಖಿತ ಪರೀಕ್ಷೆ ನಡೆದ ಕೆಲವೇ ಗಂಟೆಗಳಲ್ಲಿ ಒಟ್ಟಾರೆ ಫಲಿತಾಂಶ ಪ್ರಕಟವಾದ ಉದಾಹರಣೆಗಳು ಎಲ್ಲೂ ಇಲ್ಲ.

ಆದರೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಪರೀಕ್ಷೆ ಮುಗಿದ ಮೂರೇ ಗಂಟೆಗಳಲ್ಲಿ ತಮ್ಮ ಫಲಿತಾಂಶ ಪಡೆದುಕೊಂಡು ವಿದ್ಯಾರ್ಥಿಗಳು ಸಂಭ್ರಮಿಸಿದ್ದಾರೆ.

English summary
Rajiv Gandhi University of Health Sciences has declared results of many courses within 15 minutes of completing exams. Recently Bangalore university has declared the results within two hours after exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X