ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ಯಂತ್ರ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 13 : ರೈಲಿನಲ್ಲಿ ಸ್ವಚ್ಛತೆಯ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸುವ ಹಾಗೂ ಮಹಿಳೆಯರಿಗೆ ಉತ್ತಮ ಪ್ರಯಾಣ ಅನುಭವ ನೀಡುವ ದೃಷ್ಟಿಯಿಂದ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪರಿಸರ ಸ್ನೇಹಿ ಆಟೋಮೆಟಿಕ್ ಸ್ಯಾನಿಟರಿ ನ್ಯಾಪ್ ಕಿನ್ ಯಂತ್ರವನ್ನು ಅಳವಡಿಸಿದೆ.

ಸ್ಯಾನಿಟರಿ ನ್ಯಾಪ್ ಕಿನ್ ಉತ್ಪಾದಿಸುವ ಯಂತ್ರ ಮತ್ತು ನ್ಯಾಪ್ ಕಿನ್ ಗಳನ್ನು ಹೊರಹಾಕಲು ಇರುವ ಪರಿಸರ ಸ್ನೇಹಿ ಯಂತ್ರವನ್ನು ಪ್ರಯೋಗಾರ್ಥವಾಗಿ ಅಳವಡಿಸಲಾಗಿದೆ. ಎರಡು ಉಪಕರಣಗಳನ್ನು ನಗರದ ಎರಡು ನಿಲ್ದಾಣಗಳಲ್ಲಿರುವ ಮಹಿಳೆಯರ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯದಲ್ಲಿ ಇಡಲಿದೆ. ಮಹಿಳೆಯರಿಗೆ ಸ್ವಚ್ಛತೆ ಬಗ್ಗೆ ಕಾಳಜಿ ಹೆಚ್ಚಿಸಲು ಪ್ರಾಯೋಗಿಕ ಮಾದರಿಯಲ್ಲಿ ಯಂತ್ರವನ್ನು ಸ್ಥಾಪಿಸಲಾಗಿದೆ.

ಕರ್ನಾಟಕಾದ್ಯಂತ ಇರುವ ರೈಲ್ವೆ ನೌಕರರ ನೆರವಿನಿಂದ ನಡೆಯುತ್ತಿರುವ ನೈರುತ್ಯ ರೈಲ್ವೆ ಮಹಿಳಾ ಅಭಿವೃದ್ಧಿ ಸಂಘ ಈ ಯೋಜನೆ ಪ್ರಾಯೋಜಕತ್ವ ನೀಡಿದೆ. ಪ್ರತಿ ಯಂತ್ರಗಳನ್ನು ನಿಲ್ದಾಣಗಳಲ್ಲಿ ಸ್ಥಾಪಿಸಲು 67
ಸಾವಿರ ರೂ ವೆಚ್ಚವಾಗುತ್ತದೆ. ನಗರದ ಸಂಗೊಳ್ಳಿ ರಾಯಣ್ಣ ಮತ್ತು ಯಶವಂತಪುರ ರೈಲು ನಿಲ್ದಾಣಗಳಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ ಮತ್ತು ಮಹಿಳಾ ಶೌಚಾಲಯಗಳಲ್ಲಿ ಕಾಯಿನ್ ವೆಂಡಿಂಗ್ ಮೆಶಿನ್ ಗಳನ್ನು ಸ್ಥಾಪಿಸಲಾಗಿದೆ.

Now, get sanitary pads at Bengaluru Railway stations

ಇದನ್ನು ವಿಶ್ವ ಮಹಿಳಾ ದಿನದಂದು ಉದ್ಘಾಟಿಸಲಾಗುತ್ತದೆ. ಯಂತ್ರದೊಳಗೆ 5ರೂ ಹಾಕಿದರೆ ಸ್ಯಾನಿಟರಿ ನ್ಯಾಪ್ ಕಿನ್ ದೊರೆಯುತ್ತದೆ. ಒಂದು ವೇಳೆ ಪ್ಯಾಡ್ ಖಾಲಿಯಾದರೆ ಅದನ್ನು ಯಂತ್ರಕ್ಕೆ ತುಂಬುವ ವ್ಯವಸ್ಥೆ ಮಾಡಲಾಗಿದ್ದು, ಓರ್ವ ಮಹಿಳಾ ಸಿಬ್ಬಂದಿಗೆ ಇದರ ತರಬೇತಿ ನೀಡಲಾಗಿದೆ ಎಂದು ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಕೆ.ಆಸಿಫ್ ಹಫೀಸ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a move to better the travel experience of its women passengers, the Bengaluru Railway Division will soon install two vital equipment at rest rooms and women's toilets of two stations.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ