ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನದ ಜತೆ ಫ್ಲೈ ಬಸ್ ಟಿಕೆಟ್: ಲಗೇಜ್ ಹೊತ್ತೊಯ್ಯುವ ರಗಳೆ ಇಲ್ಲ

Array

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 28: ಇನ್ನುಮುಂದೆ ವಿಮಾನ ಟಿಕೆಟ್ ಬುಕಿಂಗ್ ಮಾಡುವ ಸಂದರ್ಭದಲ್ಲೇ ಫ್ಲೈಬಸ್ ಟಿಕೆಟ್ ಕೂಡ ಬುಕ್ ಮಾಡಬಹುದು, ಈ ನೂತನ ವ್ಯವಸ್ಥೆಯನ್ನು ತರಲು ವಿಮಾನ ನಿಲ್ದಾಣ ಆಡಳಿತ ಮಂಡಳಿ ಮುಂದಾಗಿದೆ.

ಬೇರೆ ಬೇರೆ ದೇಶಗಳಿಂದ ದಿನನಿತ್ಯ ಸಾವಿರಾರು ಮಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಅಲ್ಲಿಂದ ಪ್ರವಾಸಿ ತಾಣಗಳಿಗೆ ಪ್ರಯಾಣಿಸುತ್ತಾರೆ ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಮಾನ ಟಿಕೆಟ್ ಜತೆಗೆ ಫ್ಲೈ ಬಸ್‌ ಟಿಕೆಟ್ ನ್ನು ಏಕಕಾಲದಲ್ಲಿ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭ ಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭ

ದೇಶ ವಿದೇಶಗಳಿಂದ ಕೆಐಎಗೆ ಬರುವ ಪ್ರಯಾಣಿಕರು, ಪ್ರವಾಸಿ ತಾಣಗಳಾದ ಮಡಿಕೇರಿ, ಸೇಲಂ, ಕೊಯಮತ್ತೂರು, ಸೇಲಂ, ಕುಂದಾಪುರಕ್ಕೆ ತೆರಳಲು ಈಗಾಗಲೇ ಸಂಚರಿಸುತ್ತಿರುವ ಫ್ಲೈಬಸ್ ಗಳನ್ನು ಅವಲಂಬಿಸಿದ್ದಾರೆ.

Now book your flight ticket with fly bus too

ನಿಲ್ದಾಣದಲ್ಲಿ ಇಳಿದ ಬಳಿಕ ಲಗೇಜ್ ಹಿಡಿದುಕೊಂಡು ಟರ್ಮಿನಲ್‌ನಿಂದ ಹೊರ ಬಂದು ಫ್ಲೈ ಬಸ್‌ಗಾಗಿ ಕಾಯಬೇಕು. ಕೆಲವರಿಗೆ ಬಸ್‌ ಸಮಯ ಗೊತ್ತಿರುತ್ತದೆ, ಮತ್ತೆ ಕೆಲವರಿಗೆ ಗೊತ್ತಿರುವುದಿಲ್ಲ. ಹೀಗಾಗಿ, ನಿಲ್ದಾಣದಿಂದ ಮುಂದಿನ ನಗರಗಳಿಗೆ ಹೋಗುವವರಿಗೆ ಪ್ರಯಾಣವೂ ತ್ರಾಸದಾಯಕ ಎನಿಸುತ್ತದೆ.

ಆದರೆ, ವಿಮಾನ ಟಿಕೆಟ್ ‌ ಮತ್ತು ಫ್ಲೈಬಸ್ ಟಿಕೆಟ್ ಗಳನ್ನು ಒಂದೇ ಸಮಯದಲ್ಲಿ ಒಂದರಲ್ಲೇ ಬುಕ್ಕಿಂಗ್ ಮಾಡುವುದರಿಂದ ಈ ಎಲ್ಲ ತೊಂದರೆ ತಪ್ಪಲಿವೆ. ಯಾವುದೇ ತೊಂದರೆ ಇಲ್ಲದೆ ತಡೆರಹಿತ ಪ್ರಯಾಣದ ಅನುಭವ ನೀಡಲು ಜೆಟ್‌ ಏರ್‌ವೇಸ್ ಮತ್ತು ಕೆಎಸ್ ‌ಆರ್‌ಟಿಸಿ ಜತೆ ಈಗಾಗಲೇ ಚರ್ಚೆ ನಡೆದಿದೆ. ವಿಮಾನ ಮತ್ತು ಕೆಎಸ್ ಆರ್‌ಟಿಸಿ ಟಿಕೆಟ್ ಬುಕ್ಕಿಂಗ್ ಏಕಕಾಲದಲ್ಲಿ ಆಗಬೇಕು. ಈ ವಿಚಾರವಾಗಿ ಕೆಲವು ಕಾನೂನು ತೊಡಕುಗಳಿದ್ದು, ಅದನ್ನು ಸರಿಪಡಿಸಿಕೊಂಡು ಈ ಯೋಜನೆ ಜಾರಿಗೊಳಿಸುತ್ತೇವೆ.

ಸೇಲಂ, ಮಡಿಕೇರಿಗೆ ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ಆರಂಭ ಸೇಲಂ, ಮಡಿಕೇರಿಗೆ ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ಆರಂಭ

ಇಂತಹ ವ್ಯವಸ್ಥೆಯು ಹೊರ ರಾಷ್ಟ್ರಗಳಲ್ಲಿ ಅದರಲ್ಲೂ ಅತಿ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ದುಬೈ, ಲಂಡನ್‌ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯಿಂದ ಬರುವ ಪ್ರಯಾಣಿಕ ನಿಲ್ದಾಣದಲ್ಲಿ ಇಳಿದ ಬಳಿಕ ಬಸ್‌ ಹೊರಡಲು ಇನ್ನೂ ಸಮಯ ಇದ್ದಲ್ಲಿ ಲಾಂಜ್ ನಲ್ಲಿ ವಿಶ್ರಮಿಸಬಹುದು, ಇಲ್ಲವೇ ಮಳಿಗೆಗಳಲ್ಲಿ ಶಾಪಿಂಗ್‌ ಮಾಡಬಹುದು.

ನಂತರ ಫ್ಲೈಬಸ್ ಹೊರಡುವ ಸಮಯಕ್ಕೆ ತೆರಳಿ ಪ್ಲಾಟ್‌ಫಾರಂಗೆ ತೆರಳಿ ಬಸ್‌ ಹತ್ತಿಕೊಳ್ಳಬಹುದು. ಲಗೇಜ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಮೇಯವೇ ಬರುವುದಿಲ್ಲ. ಏಕೆಂದರೆ, ಏರ್‌ಲೈನ್ಸ್ ನ ಗ್ರೌಂಡ್ ಹ್ಯಾಂಡ್ಲಿಂಗ್ ಪ್ರಯಾಣಿಕ ಸೇವಾ ಸಿಬ್ಬಂದಿಯೇ ಬಸ್‌ಗೆ ಲಗೇಜ್ ಅನ್ನು ಲೋಡ್‌ ಮಾಡುತ್ತಾರೆ. ಬಸ್‌ ಹೊರಡುವ ಸಮಯವೂ ಟಿಕೆಟ್ ನಲ್ಲೇ ಬರೆದಿರುತ್ತದೆ.

English summary
To ease traveling around, KSRTC and KIAL collaborating on booking ticket for flight along with fly bus. It will be helpful for passengers and baggage will be shifted from flight to flybus will be part of the package.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X