ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ದರದ ಬಗ್ಗೆ ಮಾಹಿತಿ ಬೇಕೆ ಎಸ್ಎಂಎಸ್ ಮಾಡಿ

|
Google Oneindia Kannada News

ಬೆಂಗಳೂರು, ಆ.22 : ಬೆಂಗಳೂರಿನಲ್ಲಿ ಆಟೋ ಚಾಲಕರು ಮೀಟರ್‌ಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ ಎಂಬ ದೂರು ಸಾಮಾನ್ಯ. ಇನ್ನು ಮುಂದೆ ನೀವು ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದರೆ ಎಷ್ಟು ದರ? ಎಂದು ಮಾಹಿತಿ ಪಡೆಯಬಹುದು ಮತ್ತು ಹೆಚ್ಚಿನ ದರ ವಸೂಲಿ ಮಾಡಿದರೆ ದೂರು ನೀಡಬಹುದಾಗಿದೆ.

ಟೆಕ್ಸ್ಟ್ ವೆಬ್‌ ಎಂಬ ಸಂಸ್ಥೆ 'ಆಟೋಫೇರ್ ' ಎಂಬ ಹೊಸ ಆ್ಯಪ್‌ನ್ನು ತಯಾರಿಸಿದೆ. ನೀವು ಎಲ್ಲಿಂದ ಎಲ್ಲಿಗೆ ಹೋಗಬೇಕು ಎಂಬುದನ್ನು ಟೈಪ್ ಮಾಡಿ 51115ಗೆ ಸಂದೇಶ ಕಳುಹಿಸಿದರೆ ಅಲ್ಲಿಂದ ಅಲ್ಲಿಗೆ ಎಷ್ಟು ದರ ಎಂಬ ಮಾಹಿತಿ ಮೊಬೈಲ್‌ಗೆ ಬರುತ್ತದೆ. ಆಗ ಆಟೋ ಚಾಲಕ ಹೆಚ್ಚಿನ ದರ ವಸೂಲಿ ಮಾಡಿದರೆ ಸಿಕ್ಕಿಬೀಳುತ್ತಾರೆ.

ಗುರುವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಆಟೋಫೇರ್‌ ಆ್ಯಪ್‌ಗೆ ಸಂಚಾರ ಮತ್ತು ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹೆಚ್ಚಿನ ಆಟೋ ದರ ವಸೂಲಿ ಬಗ್ಗೆ ಸಾಮಾನ್ಯವಾಗಿ ನಾಗರಿಕರಿಂದ ದೂರುಗಳು ಕೇಳಿಬರುತ್ತಲೇ ಇರುತ್ತವೆ. ಅವರಿಗೆ ಆ್ಯಪ್‌ಗೆ ಸಹಾಯಕವಾಗಲಿದೆ ಎಂದರು. [ಮಾರುವೇಷದಲ್ಲಿ ಆಟೋ ಚಾಲಕರ ವಿರುದ್ಧ ಕಾರ್ಯಾಚರಣೆ]

ಪ್ರತಿನಿತ್ಯ ಆಟೋದಲ್ಲಿ ಸಂಚರಿಸುವ ಜನರಿಗೆ ಆ್ಯಪ್‌ಗೆ ಸಹಾಯಕವಾಗಲಿಗೆ ಎಂದು ಹೇಳಿದ ಬಿ.ದಯಾನಂದ್ ಅವರು, ಇದು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಮಾತ್ರ ಸೀಮಿತವಾಗಿಲ್ಲ ಆದ್ದರಿಂದ ಎಲ್ಲಾ ಜನರಿಗೂ ನೆರವಾಗಲಿದೆ ಎಂದರು. ಇದರಿಂದ ಆಟೋ ದರ ನಿಗದಿಗೆ ಸಂಬಂಧಿಸಿದಂತೆ ಗಮನಹರಿಸಲು ಪೊಲೀಸರಿಗೂ ನೆರವಾಗಲಿದೆ ಎಂದು ತಿಳಿಸಿದರು.

ಟೆಕ್ಸ್ಟ್ ವೆಬ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀವಿದ್ಯಾ ರಾಮರತ್ನಂ ಅವರು, ಈ ಕುರಿತು ಮಾಹಿತಿ ನೀಡಿ ದಿನದ 24 ಗಂಟೆಯೂ ಈ ಸೇವೆ ಲಭ್ಯವಿರುತ್ತದೆ. ಒಂದು ವೇಳೆ ಆಟೋ ಚಾಲಕರು ದರದ ಬಗ್ಗೆ ತಾರತಮ್ಯ ಮಾಡಿದರೆ, ಅದನ್ನು ತಿಳಿಯಲು ಮತ್ತು ಗುರುತಿಸಲು ನಗರದ ಎಲ್ಲ ಪ್ರಯಾಣಿಕರಿಗೆ ಇದು ಸುಲಭವಾಗಲಿದೆ ಎಂದರು.

Auto

ಈ ಆ್ಯಪ್, ಆಟೋದ ಸ್ಪಷ್ಟವಾದ ದರವನ್ನು ಸೂಚಿಸುವ ಜೊತೆಗೆ ಪ್ರಮುಖ ಲ್ಯಾಂಡ್ ಮಾರ್ಕ್‌ಗಳನ್ನು ತಿಳಿಸುತ್ತದೆ. ಆದ್ದರಿಂದ ನೀವು ಸಂಚರಿಸುತ್ತಿರುವ ಮಾರ್ಗದ ವಿವರವನ್ನೂ ನೀಡುತ್ತದೆ ಎಂದು ತಿಳಿಸಿದರು.

English summary
Bangaloreans hailing auto rickshaws can now get fare and route details instantly by sending a text message to a designated number. The app called Autofare was launched on Thursday, August 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X