ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ್ವಿತೀಯ ಪಿಯು ಮಾರ್ಕ್ಸ್‌ಕಾರ್ಡ್ ಆ್ಯಪ್ ಮೂಲಕವೂ ಪಡೆಯಬಹುದು

By Nayana
|
Google Oneindia Kannada News

ಬೆಂಗಳೂರು, ಜು.19: ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಕೇವಲ ಪದವಿಪೂರ್ವ ಶಿಕ್ಷಣ ಇಲಾಖೆಯೇ ನೀಡಬೇಕೆಂದೇನಿಲ್ಲ, ಇದೀಗ ಅಂಕಪಟ್ಟಿ ಇನ್ನೂ ಸುಲಭವಾಗಿ ಸಿಗಲಿದೆ.

ಈ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಯಾಗಲಿದೆ. ಕೇಂದ್ರ ಸರ್ಕಾರವು ಅಭಿವೃದ್ಧಿ ಪಡಿಸಿರುವ ಡಿಜಿಲಾಕರ್‌ ಆ್ಯಪ್ನಲ್ಲಿ ದೊರೆಯಲಿದೆ. 2018ರ ಮಾರ್ಚ್​ನಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಅಪ್​ಲೋಡ್ ಮಾಡಿದೆ. 2018-19ನೇ ಸಾಲಿನಿಂದ ಪ್ರತಿವರ್ಷ ಡಿಜಿಟಲ್ ಅಂಕಪಟ್ಟಿ ಅಪ್​ಲೋಡ್ ಮಾಡಲು ಇಲಾಖೆ ನಿರ್ಧರಿಸಿದೆ.

ಪಿಯು ವಿದ್ಯಾರ್ಥಿಗಳು ಮುಚ್ಚಳಿಕೆ ಬರೆದು ಕೊಡುವುದು ಇನ್ನು ಕಡ್ಡಾಯಪಿಯು ವಿದ್ಯಾರ್ಥಿಗಳು ಮುಚ್ಚಳಿಕೆ ಬರೆದು ಕೊಡುವುದು ಇನ್ನು ಕಡ್ಡಾಯ

ದ್ವಿತೀಯ ಪಿಯುಸಿ ಅಂಕಪಟ್ಟಿ ಇನ್ನು ಡಿಜಿಟಲ್ ರೂಪದಲ್ಲೂ ವಿದ್ಯಾರ್ಥಿಗಳ ಕೈಸೇರಲಿದೆ. ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಡಿಜಿಲಾಕರ್ ಆಪ್ ಮೂಲಕ ವಿದ್ಯಾರ್ಥಿಗಳು ಡಿಜಿಟಲ್ ಮಾದರಿ ಅಂಕಪಟ್ಟಿ ಪಡೆಯಬಹುದು.ವಿದ್ಯಾರ್ಥಿಗಳು ಸ್ಮಾರ್ಟ್​ಫೋನ್​ನಲ್ಲಿ ಡಿಜಿಲಾಕರ್ ಆಪ್ ಡೌನ್​ಲೋಡ್ ಮಾಡಿಕೊಂಡು, ಮೊಬೈಲ್ ಸಂಖ್ಯೆ ನಮೂದಿಸಬೇಕು(ವೆಬ್​ಸೈಟ್ ಮುಖಾಂತರವೂ ಲಾಗ್​ಇನ್ ಆಗಬಹುದು).

Now, access PU marks cards via Digilocker

ಈ ಸಂದರ್ಭ ಆಧಾರ್ ನೋಂದಣಿ ವೇಳೆ ಸಲ್ಲಿಸಿದ ಮೊಬೈಲ್ ಸಂಖ್ಯೆಗೆ ಒನ್ ಟೈಂ ಪಾಸ್​ವರ್ಡ್(ಒಟಿಪಿ) ರವಾನೆಯಾಗಲಿದೆ.

ಆ ಪಾಸ್​ವರ್ಡ್ ಬಳಸಿ ಯೂಸರ್ ನೇಮ್ ಮತ್ತು ಪಾಸ್​ವರ್ಡ್ ರಚಿಸಬೇಕು. ಲಾಗ್​ಇನ್ ಆದ ನಂತರದಲ್ಲಿ ಆಧಾರ್ ಸಂಖ್ಯೆ ನಮೂದಿಸಬೇಕು(ಆಧಾರ್ ಜೋಡಣೆಯಾಗದೆ ಇದ್ದಲ್ಲಿ ಡಿಜಿಟಲ್ ಅಂಕಪಟ್ಟಿ ಪಡೆಯಲು ಸಾಧ್ಯವಿಲ್ಲ).

ಆಧಾರ್ ಸಂಖ್ಯೆ ನಮೂದಿಸಿದ ನಂತರದಲ್ಲಿ ಇಶ್ಯೂಡ್ ವಿಭಾಗದಲ್ಲಿ 'ಡಿಪಾರ್ಟ್​ವೆುಂಟ್ ಆಫ್ ಪ್ರೀ ಯೂನಿವರ್ಸಿಟಿ ಎಜುಕೇಷನ್, ಕರ್ನಾಟಕ' ಎಂಬುದನ್ನು ಆಯ್ಕೆ ಮಾಡಬೇಕು. ನೋಂದಣಿ ಸಂಖ್ಯೆ ಹಾಗೂ ಉತ್ತೀರ್ಣರಾದ ವರ್ಷ ನಮೂದಿಸಿ ಅಂಕಪಟ್ಟಿ ಪಡೆಯಬಹುದಾಗಿದೆ.

English summary
This year on, marks cards of second puc course final examinations can be availed from the central government launched cloud storage space digilocker facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X