ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಲ್ಲರೆ ಹಣಕ್ಕೆ ಜನರ ಪರದಾಟ! ಆದರೆ ಬಳ್ಳಾರಿಯಲ್ಲಿ ಗಣಿಹಣದ ಚೆಲ್ಲಾಟ

ಗಾಲಿ ಜನಾರ್ದನ ರೆಡ್ಡಿ ಇಂದು ಬರೋಬ್ಬರಿ ತಮ್ಮ ಮಗಳ ಮದುವೆಗಾಗಿ 500ರಿಂದ-1000 ಕೊಟಿ ಹಣ ವೆಚ್ಚ ಮಾಡುತ್ತಿರುವುದು ಜನಸಾಮಾನ್ಯರಿಗೆ ಧಿಗ್ಭ್ರಮೆಯನ್ನುಂಟು ಮಾಡಿದೆ.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 11: ಇಡೀ ದೇಶದಲ್ಲಿ ರೂ.500 ಹಾಗೂ ರೂ.1000 ಮುಖಬೆಲೆಯ ನೋಟುಗಳ ರದ್ದತಿಯಿಂದಾಗಿ ಚಿಲ್ಲರೆ ಹಣಕ್ಕಾಗಿ ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ, ಮಾನ್ಯ ಭ್ರಷ್ಟಾಚಾರದ ಪ್ರತೀಕದಂತಿದ್ದ ಯಡಿಯೂರಪ್ಪನವರ ಸಂಪುಟದಲ್ಲಿ ಮಂತ್ರಿಯಾಗಿದ್ದು, ನಂತರ ಅಕ್ರಮ ಗಣಿಗಾರಿಕೆ ನಡೆಸಿ ಸಿಕ್ಕಿಬಿದ್ದು, ಜೈಲು ಸೇರಿದ್ದ ಗಾಲಿ ಜನಾರ್ದನ ರೆಡ್ಡಿ ಇಂದು ಬರೋಬ್ಬರಿ ತಮ್ಮ ಮಗಳ ಮದುವೆಗಾಗಿ 500ರಿಂದ-1000 ಕೊಟಿ ಹಣ ವೆಚ್ಚ ಮಾಡುತ್ತಿರುವುದು ಜನಸಾಮಾನ್ಯರಿಗೆ ಧಿಗ್ಭ್ರಮೆಯನ್ನುಂಟು ಮಾಡಿದೆ.[ಗಾಲಿ ರೆಡ್ಡಿ ಮಗಳ ಮದುವೆ ವೈಭೋಗದ ಕಥೆಯೇನು?]

ಒಂದೆಡೆ ಕೇಂದ್ರ ಸರಕಾರ 2.5 ಲಕ್ಷಕ್ಕಿಂತ ಅಧಿಕ ಹಣ ಬ್ಯಾಂಕಿಗೆ ತುಂಬಿಸುವ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ 200% ದಂಡ ಮತ್ತು ತೆರಿಗೆ ವಿಧಿಸುವ ಬೆದರಿಕೆ ಹಾಕುತ್ತಿರುವಾಗ, ಬಡವರು, ರೈತರು, ಆಟೋ ಚಾಲಕರು, ಸಣ್ಣ ವ್ಯಾಪಾರಿಗಳು, ತಮ್ಮ ಮಗಳ ಮದುವೆಗೆಂದು ಹಲವಾರು ವರ್ಷದಿಂದ ಸ್ವಲ್ಪ-ಸ್ವಲ್ಪವಾಗಿ ಮನೆಯಲ್ಲಿ ಕೂಡಿಟ್ಟ 4-5 ಲಕ್ಷ ಹಣಕ್ಕೆ ತೆರಿಗೆ, ದಂಡ ಕಟ್ಟಬೇಕಾದಲ್ಲಿ ಜನಸಾಮಾನ್ಯರಿಗೆ ಆತ್ಮಹತ್ಯೆಯೊಂದೇ ದಾರಿಯಾಗುತ್ತದೆ.

ಆದರೆ, ರಾಜರೋಷವಾಗಿ ತಮ್ಮ ಲೂಟಿ ಮಾಡಿದ ಹಣದ ದರ್ಪ ಪ್ರದರ್ಶಿಸುವ ರಾಜಕಾರಣಿಗಳನ್ನು ಪ್ರಶ್ನಿಸುವವರೇ ಯಾರೂ ಇಲ್ಲದಾಗಿದೆ.

ಆಸ್ತಿ ಮತ್ತು ಖಾತೆಗಳನ್ನು ಶೀತಲೀಕರಿಸಬೇಕಾಗಿತ್ತು

ಆಸ್ತಿ ಮತ್ತು ಖಾತೆಗಳನ್ನು ಶೀತಲೀಕರಿಸಬೇಕಾಗಿತ್ತು

ಗಾಲಿ ಜನಾರ್ದನ ರೆಡ್ಡಿ ಇಂದು ಬರೋಬ್ಬರಿ ತಮ್ಮ ಮಗಳ ಮದುವೆಗಾಗಿ 500ರಿಂದ-1000 ಕೊಟಿ ಹಣ ವೆಚ್ಚ ಮಾಡುತ್ತಿರುವುದು ಜನಸಾಮಾನ್ಯರಿಗೆ ಧಿಗ್ಭ್ರಮೆಯನ್ನುಂಟು ಮಾಡಿದೆ.
ರಾಜ್ಯದ ಖನಿಜ ಸಂಪತ್ತನ್ನು ಲೂಟಿ ಮಾಡಿರುವ ಜನಾರ್ದನ ರೆಡ್ಡಿಯವರು ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಸಿಬಿಐ ಮತ್ತು ಇತರ ತನಿಖಾ ತಂಡಗಳು ಅವರ ಆಸ್ತಿ ಮತ್ತು ಖಾತೆಗಳನ್ನು ಶೀತಲೀಕರಿಸಬೇಕಾಗಿತ್ತು.
ಜನಸಾಮಾನ ಖಾತೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಈ ತನಿಖಾ ಸಂಸ್ಥೆಗಳಿಗೆ ಇಷ್ಟು ಅದ್ದೂರಿಯಾಗಿ ಮದುವೆ ನಡೆಯುತ್ತಿರುವುದು ಮಾತ್ರ ಕಾಣದಾಗಿದೆ.

ಮದುವೆಯಲ್ಲಿ ಬಳಸುತ್ತಿರುವುದು ಹಳೆಯ ನೋಟುಗಳೋ

ಮದುವೆಯಲ್ಲಿ ಬಳಸುತ್ತಿರುವುದು ಹಳೆಯ ನೋಟುಗಳೋ

ಅವರು ತಮ್ಮ ಸಕ್ರಮ ಹಣ ಮದುವೆಗೆ ಉಪಯೋಗುಸುತ್ತಿದ್ದಲ್ಲಿ, ಈ ಹಣ ತನಿಖಾ ಸಂಸ್ಥೆಗಳ ಗಮನಕ್ಕೆ ಈ ಮುಂಚೆ ಬಂದಿರಲಿಲ್ಲವೇ? ಅವರು ಖರ್ಚಿಗೆ ನಗದು ಬಳಸುತ್ತಿದ್ದಲ್ಲಿ ಇಷ್ಟೊಂದು ಹಣ ಚಲಾವಣೆಯಿಂದ ಹಿಂಪಡೆದ ಹಳೆಯ ನೋಟುಗಳೋ ಅಥವಾ ಅವರಿಗೆ ಇಷ್ಟೊಂದು ಹೊಸ ನೋಟುಗಳು ಈಗಾಗಲೇ ಲಭ್ಯವಾಗಿವೆಯೇ? ಆಗಿದ್ದರೆ ಅದು ಹೇಗೆ ಸಾಧ್ಯ? ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಪ್ರಶ್ನಿಸುತ್ತಿದೆ.

ಮದುವೆಯ ಆಮಂತ್ರಣ ಒಪ್ಪಿಕೊಂಡ ಸಿದ್ದರಾಮಯ್ಯ

ಮದುವೆಯ ಆಮಂತ್ರಣ ಒಪ್ಪಿಕೊಂಡ ಸಿದ್ದರಾಮಯ್ಯ

ಇನ್ನೂ ಇದೇ ಜನಾರ್ಧನ ರೆಡ್ಡಿಯ ಅಕ್ರಮ ಗಣಿಗಾರಿಕೆಯ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಇದೀಗ ಅದೇ ಕಪ್ಪುಹಣದಿಂದ ನಡೆಯುತ್ತಿರುವ ಮದುವೆಯ ಆಮಂತ್ರಣವನ್ನು ಒಪ್ಪಿಕೊಂಡಿರುವುದಾದರೂ ಹೇಗೆ?
ಈ ಮದುವೆಗೆ ಖರ್ಚು ಮಾಡುತ್ತಿರುವ ಹಣದ ಕುರಿತು ತಾವು ತನಿಖೆ ನಡೆಸುವುದಿಲ್ಲವೇ ಎಂದು ಮಾಧ್ಯಮಗಳ ಪ್ರಶ್ನೆಗೆ ಸರಿಯಾದ ಉತ್ತರ ನೀಡದೆ ನುಣಚಿಕೊಂಡಿದ್ದು ಏಕೆ? ಮಾನ್ಯ ಸಿದ್ದರಾಮಾಯ್ಯನವರ ಸಮಾಜವಾದತನ ಎಲ್ಲಿ ಕಳೆದುಹೋಗಿದೆ ಎಮದು ಜನಸಾಮಾನ್ಯರು ಪ್ರಶ್ನಿಸತೊಡಗಿದ್ದಾರೆ.

ಆಮ್ ಆದ್ಮಿ ಪಾರ್ಟಿ ಕರ್ನಾಟಕದ ಆಗ್ರಹ

ಆಮ್ ಆದ್ಮಿ ಪಾರ್ಟಿ ಕರ್ನಾಟಕದ ಆಗ್ರಹ

1. ಈ ಮದುವೆಗೆ ಆಗುತ್ತಿರುವ ಪ್ರತಿಯೊಂದು ಖರ್ಚು, ಆ ಹಣದ ಮೂಲ ಮತ್ತು ಹಣ ಪಡೆಯುತ್ತಿರುವರ ತನಿಖೆ.
2. ಜನಾರ್ಧನ ರೆಡ್ಡಿಯವರ ಜಾಮೀನು ರದ್ದುಗೊಳಿಸಿ ಅವರ ಪುನರ್ಬಂಧನ.
3. ಈ ಕೂಡಲೇ ರಾಜ್ಯ ಸರ್ಕಾರದ ಎಸಿಬಿ ಕೂಡ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ, ಇಡೀ ಮದುವೆಯ ಖರ್ಚು ವೆಚ್ಚದ ಸಂಕ್ಷಿಪ್ತ ತನಿಖೆ ನಡೆಸಬೇಕು.
ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಈ ಮೇಲಿನ ಕ್ರಮಗಳನ್ನು ಜರುಗಿಸಬಹುದಿತ್ತು,

English summary
Due to demonetization, the whole nation is scrambling for smaller change but the news reports highlight the wanton display of ill-gotten wealth by Gali Janardhan Reddy, a former Minister in the Yeddyurappa Cabinet, who was jailed in the illegal mining scam. His lavish spending of Rs. 500 to 1000 crores for his daughter’s wedding has come as a shock to people of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X