ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋಟು ಎಕ್ಸ್ ಚೇಂಜ್: ಜನರ ಲೈಫ್ ಸ್ಟೈಲೇ ಚೇಂಜ್

ಒಂದು ಬಾರಿಗೆ ಬರುವುದೇ 2 ಸಾವಿರ ಮತ್ತೆ ಹೋಗಿ ಕಿ.ಮೀ ಗಟ್ಟಲೆ ಇರುವ ಕ್ಯೂನಲ್ಲಿ ನಿಲ್ಲುವವರಾರು ಎಂದು ಕೆಲವರು ಮನೆಗೆ ಹೋಗಿದ್ದಾರೆ. ಇನ್ನು ಕೆಲವರು ಜನರ ದಟ್ಟಣೆ ಕಡಿಮೆಯಾಗಲಿ ಹೋಗೋಣ ಎಂದು ಮೆನೆಯಲ್ಲೇ ಕಾಯುತ್ತಿದ್ದಾರೆ.

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 12 : ದೇಶಾದ್ಯಂತ ನೋಟು ಬದಲಾವಣೆ ಮತ್ತು ನಿತ್ಯವ್ಯವಹಾರಕ್ಕಾಗಿ ಜನ ಪರಿತಪಿಸುತ್ತಿದ್ದು ತಮ್ಮ ಕೆಲಸಕಾರ್ಯಗಳನ್ನು ಬಿಟ್ಟು ಬ್ಯಾಂಕ್, ಎಂಟಿಎಂ ಮುಂದೆ ಕ್ಯೂ ನಿಂತಿದ್ದಾರೆ.

ಎರಡು ದಿನದಿಂದ ನೋಟು ಬದಲಾವಣೆಗೆ ಜನರು ಸರದಿ ನಾಲಿನಲ್ಲಿ ನಿಂತು ಹೆಣಗಾಡುತ್ತಿದ್ದರೆ ಶನಿವಾರ ಈ ಸಾಲಿನಲ್ಲಿ ಐಟಿ- ಬಿಟಿ ಕಂಪೆನಿಯ ನೌಕಕರು ಪಾಲುದಾರರಾಗಿದ್ದಾರೆ. ಶನಿವಾರ ರಜೆ ಇರುವ ಎಂಎನ್ ಸಿ ಕಂಪನಿಯ ಉದ್ಯೋಗಸ್ಥರೂ ಎಟಿಎಂ ಅಲ್ಲಿ ದುಡ್ಡು ಡ್ರಾ ಮಾಡಿಕೊಳ್ಳಲು ಮುಂದಾಗಿದ್ದಾರೆ. [ಎರಡು ಸಾವಿರ ರುಪಾಯಿ ನೋಟಿನಲ್ಲಿ ಕಾಗುಣಿತ ತಪ್ಪು?]

q

ಇನ್ನು ಶನಿವಾರ, ಭಾನುವಾರವೂ ಕೂಡ ಬ್ಯಾಂಕುಗಳ ವ್ಯವಹಾರ ಮುಂದುವರೆಯಲಿದ್ದು ನಾಳೆಯೂ ಜನರು ಕ್ಯೂ ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ. [ಹೊಚ್ಚಹೊಸ 2000 ರು ನೋಟು ಕೈಗೆ ಬಂತಾ?]

ಜನರು ನಿತ್ಯ ಬ್ಯಾಂಕ್, ಎಟಿಎಂಗಳ ಮುಂದೆಯೇ ಕಾಲ ಕೆಳೆಯುತ್ತಿರುವುದರಿಂದ ದಿನಸಿ ಅಂಗಡಿಯಿಂದ ಹಿಡಿದು ಗಿರವಿ ಅಂಗಡಿಯವರೆಗೆ ವ್ಯಾಪಾರಗಳೆಲ್ಲವೂ ತುಸು ತಗ್ಗಿದೆ.

ಒಂದು ಬಾರಿಗೆ ಬರುವುದೇ 2 ಸಾವಿರ ಮತ್ತೆ ಹೋಗಿ ಕಿ.ಮೀ ಗಟ್ಟಲೆ ಇರುವ ಕ್ಯೂನಲ್ಲಿ ನಿಲ್ಲುವವರಾರು ಎಂದು ಕೆಲವರು ಮನೆಗೆ ಹೋಗಿದ್ದಾರೆ. ಇನ್ನು ಕೆಲವರು ಜನರ ದಟ್ಟಣೆ ಕಡಿಮೆಯಾಗಲಿ ಹೋಗೋಣ ಎಂದು ಮೆನೆಯಲ್ಲೇ ಕಾಯುತ್ತಿದ್ದಾರೆ.[ದೊಡ್ಡ ನೋಟಿಲ್ಲದ ದಿನಗಳಲ್ಲಿ ಸಾಮಾನ್ಯರ ಬದುಕಿನ ಚಿತ್ರಗಳು...]

q 1

ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನ, ನಗರ ಪ್ರದೇಶಗಳಿಗೆ ಬಂದು ಹಣವನ್ನು ಚಿಲ್ಲರೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಹೋಬಳಿಮಟ್ಟದ ಎಟಿಎಂ ಮತ್ತು ಬ್ಯಾಂಕುಗಳಲ್ಲಿ ವ್ಯವಹಾರವೇ ಸರಿಯಾಗಿ ನಡೆದಿಲ್ಲ.[ಚಿಕ್ಕಮಗಳೂರಿನಲ್ಲಿ 2 ಸಾವಿರ ರು ಖೋಟಾನೋಟು ಪತ್ತೆ]

ಈಗ ಜನರಿಗೆ ಬ್ಯಾಂಕಿನ ಅಧಿಕಾರಿಗಳು, ನೌಕರರು ನಿಜವಾಗಿಯೂ ಭೂಮಿಗಳಿದು ಬಂದು ತಮಗೆ ಹಣ ಒದಗಿಸುವ ದೇವತೆಗಳಾಗಿ ಪರಿಣಮಿಸಿದ್ದಾರೆ. ಅವರೊಮ್ಮೆ ರೇಗಿದರೂ ಮರು ಮಾತಾಡದೇ ವ್ಯವಹಾರ ನಡೆಸಿ ಹಣ ಪಡೆಯುತ್ತಿದ್ದಾರೆ.

ಮತ್ತೆ ಕೆಲವರು ಹಣ ಪಡೆಯಲು ರಾತ್ರಿ ವೇಳೆಯೇ ಸರಿ ಎಂದು ಸಂಜೆ ಬೇಗನೇ ಊಟ ಮಗಿಸಿ ರಾತ್ರಿ ಕಾದು 9-10 ಗಂಟೆ ವೇಳೆಗೆ ಹಣ ಪಡೆದದ್ದೂ ಇದೆ.

English summary
note exchange: people have various problem. everywhere longline and get only for 2000 in ATM, and 4000 in bank exchange note
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X