ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೌರಿಂಗ್‌ ಕ್ಲಬ್‌ ಲಾಕರ್‌ನಲ್ಲಿ ಇದ್ದಿದ್ದು 550 ಕೋಟಿಯಲ್ಲ 800 ಕೋಟಿ

By Nayana
|
Google Oneindia Kannada News

ಬೆಂಗಳೂರು, ಜು.23: ಬೌರಿಂಗ್ ಕ್ಲಬ್‌ನ ಅವಿನಾಶ್‌ ಅಮರ್‌ಲಾಲ್‌ ಕುಕ್ರೇಜಾ ಅವರ ಲಾಕರ್‌ನಲ್ಲಿ ದೊರೆತಿದ್ದು ಕೇವಲ 550 ಕೋಟಿಯಲ್ಲ ಬದಲಾಗಿ 800 ಕೋಟಿ ಎನ್ನುವ ಮಾಹಿತಿ ಇದೀಗ ಲಭ್ಯವಾಗಿದೆ.

ಐಟಿ ಅಧಿಕಾರಿಗಳು ನಡೆಸಿದ ಅಂತಿಮ ವಿಚಾರಣೆ ಬಳಿಕ ಇದು ಬೆಳಕಿಗೆ ಬಂದಿದೆ. ಬಹುಕೋಟಿ ಕಪ್ಪುಹಣ ದೊರೆತ ಹಿನ್ನೆಲೆಯಲ್ಲಿ ಲಾಕರ್‌ಗಳಿರುವ ಕೊಠಡಿಗೆ ಸಿಸಿಟಿವಿಗಳನ್ನು ಅಳವಡಿಸುವುದಲ್ಲದೆ, ಕ್ಲಬ್‌ನ ನಿಯಮದಲ್ಲಿ ಬದಲಾವಣೆ ತರಲು ಬೌರಿಂಗ್‌ ಕ್ಲಬ್‌ನ ಆಡಳಿತ ಮಂಡಳಿ ಮುಂದಾಗಿದೆ.

ಬೌರಿಂಗ್‌ ಕ್ಲಬ್‌: 500 ಕೋಟಿ ಆಸ್ತಿ ಒಡೆಯನ ವಿಚಾರಣೆ ಬೌರಿಂಗ್‌ ಕ್ಲಬ್‌: 500 ಕೋಟಿ ಆಸ್ತಿ ಒಡೆಯನ ವಿಚಾರಣೆ

ಈ ಲಾಕರ್‌ ಉದ್ಯಮಿ ಅವಿನಾಶ್‌ ಅಮರ್‌ಲಾಲ್‌ ಕುಕ್ರೇಜಾ ಎಂಬುವವರಿಗೆ ಸಂಬಂಧಿಸಿದ್ದಾಗಿದೆ, ಇನ್ನೂ ಎಣಿಕೆ ಕಾರ್ಯಮುಂದುವರೆದಿದೆ, ಇದುವರೆಗೂ ಲಭಿಸಿದ ಮಾಹಿತಿ ಪ್ರಕಾರ 800 ಕೋಟಿ ಮೌಲ್ಯದ ಸಂಪತ್ತಿದೆ. ಇನ್ನೂ ಹೆಚ್ಚಿನ ಸಂಪತ್ತು ಇರಬಹುದು ಎಂದು ಅಂದಾಜಿಸಲಾಗಿದೆ,

Not Rs 550 crore, Bowring locker stash worth over Rs 800 crore

ಲಾಕರ್‌ನಲ್ಲಿ ಪತ್ತೆಯಾದ ಹಣ, ವಜ್ರಾಭರಣ, ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಪತ್ರಗಳ ಮೌಲ್ಯಮಾಪನ ಹಾಗೂ ಪಂಚನಾಮೆ ಪ್ರಕ್ರಿಯೆಗಳನ್ನು ಐಟಿ ಅಧಿಕಾರಿಗಳು ಶನಿವಾರ ರಾತ್ರಿ ಒಂದು ಹಂತದವೆರೆಗೆ ಪೂರ್ಣಗೊಳಿಸಿದ್ದರು. ಸೋಮವಾರ ಕೂಡ ಶೋಧಕಾರ್ಯ ಮುಂದುವರೆದಿದೆ. ಅವಿನಾಶ್‌ ಅವರ ನಿವಾಸ, ಬೆಂಗಳೂರು ಸೇರಿದಂತೆ ಇನ್ನಿತರೆ ಆತನ ಕಂಪನಿಗಳ ಕಚೇರಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಅಲ್ಲದೆ ಆತ ಸದಸ್ಯತ್ವ ಹೊಂದಿದ್ದ ಇತರೆ ಕ್ಲಬ್‌ಗಳಲ್ಲೂ ಕಾರ್ಯಾಚರಣೆ ನಡೆಸಿ ಅನೇಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಲಾಕರ್‌ನಲ್ಲಿ ಪತ್ತೆಯಾದ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರಗಳು ಯಾರಿಗೆ ಸೇರಿದ್ದು ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ ಅದರಲ್ಲಿ ಅವರ ಆಸ್ತಿ 800 ಕೋಟಿ ರೂ ಮೌಲ್ಯದ್ದು ಎಂದು ತಿಳಿದುಬಂದಿದೆ.

ಲಾಕರ್‌ನಲ್ಲಿ 3.90 ಕೋಟಿ ನಗದು, 7.80 ಕೋಟಿ ಮೌಲ್ಯದ ಆಭರಣಗಳು, 650 ಗ್ರಾಂ ಚಿನ್ನ, 15 ಲಕ್ಷ ಬೆಲೆ ಬಾಳುವ ರೋಲೆಕ್ಸ್‌ ವಾಚ್‌ ದೊರೆತಿದೆ. ಅವಿನಾಶ್‌ 1993ರಿಂದ ಬೌರಿಂಗ್‌ ಕ್ಲಬ್‌ ಸದಸ್ಯರಾಗಿದ್ದರು ಎಂದು ತಿಳಿದುಬಂದಿದೆ. ಅವಿನಾಶ್‌ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು ಹಾಗೂ ಅಲ್ಲಿರುವ ಲಾಕರ್‌ ವ್ಯವಸ್ಥೆಯನ್ನು ಕೂಡ ಬದಲಾಯಿಸಲಾಗುತ್ತದೆ, ಜತೆಗೆ ಎಲ್ಲಾ ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Income Tax (I-T) department officials are now saying that the value of land holdings as per the discovery of various property files discovered in the three Bowring Institute lockers belonging to Avinash Amarlal Kukreja is over a whopping Rs 800 crore and not just Rs 550 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X