ಉತ್ತರ ಕರ್ನಾಟಕದ ಊಟ-ತಿಂಡಿಗೆ ಕತ್ರಿಗುಪ್ಪೆಯ 'ಗಮಗಮ' ಹೋಟೆಲ್

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 9: 'ಗಮ ಗಮ' - ಇದು ಆ ಹೋಟೆಲ್ ನ ಹೆಸರು. ಉತ್ತರ ಕರ್ನಾಟಕದ ರೊಟ್ಟಿ ಊಟ ಮಾಡಬೇಕು ಅಂದುಕೊಂಡರೆ ಖಂಡಿತಾ ಈ ಹೋಟೆಲ್ ನಲ್ಲಿ ಪ್ರಯತ್ನಿಸಬಹುದು. ಕತ್ರಿಗುಪ್ಪೆಯ ಡಾಮಿನೋಸ್ ಪಿಜ್ಜಾದ ಪಕ್ಕದಲ್ಲೇ ಈ 'ಗಮ ಗಮ' ಇರೋದು. ಇಲ್ಲಿ ಊಟವಷ್ಟೆ ಅಲ್ಲ, ನಾಷ್ಟಾ ಕೂಡ ಸಿಗುತ್ತದೆ.

ಉಮಾ ಥಿಯೇಟರ್ ಎದುರಿನ ಸಂತೋಷ್ ಸಾಗರ್ ಚಾಟ್ಸ್ ತಿಂದಿದ್ದೀರಾ?

ಇದರ ಜತೆಗೆ ಸಂಜೆ ಹೊತ್ತಿನಲ್ಲಿ ಬಜ್ಜಿ, ಗಿರ್ಮಿಟ್, ಸಾಬೂದಾನ ವಡಾ, ಚೂಡಾ ಅವಲಕ್ಕಿ, ಕಾಫಿ-ಟೀ, ಹಣ್ಣಿನ ರಸ ಕೂಡ ಸಿಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಊಟವಂತೂ ಸಿಕ್ಕೇ ಸಿಗುತ್ತದೆ. ಎರಡು ಬಗೆಯಲ್ಲಿ ಉತ್ತರ ಕರ್ನಾಟಕದ ಶೈಲಿ ಊಟ ಸಿಗುತ್ತದೆ. ವಿಶೇಷ ಅಡುಗೆ ಅಂದರೆ ಬೆಲೆ ಸ್ವಲ್ಪ ಹೆಚ್ಚು.

North Karnataka style food in Gama Gama hotel

ಈ ಊಟದಲ್ಲಿ ಜೋಳದ ರೊಟ್ಟಿ, ಪಲ್ಯ, ಎಣ್ಣೆಗಾಯಿ. ಅನ್ನ-ಸಾಂಬಾರು, ರಸಂ, ಮೊಸರಿನ ಜತೆಗೆ ಹೋಳಿಗೆ ಹಾಗೂ ಮಿರ್ಚಿ ಬಜ್ಜಿ ಹೆಚ್ಚುವರಿಯಾಗಿ ಕೊಡ್ತಾರೆ. ಸಾಮಾನ್ಯ ಊಟ ಅಂದರೆ ಅದರಲ್ಲಿ ಹೋಳಿಗೆ-ಮಿರ್ಚಿ ಬಜ್ಜಿ ಇರೋದಿಲ್ಲ.

ತುಮಕೂರಿನ ವಿಶೇಷ: ತಟ್ಟೆ ಇಡ್ಲಿ, ಚಿತ್ರಾನ್ನ, ಮುದ್ದೆ, ಚಪಾತಿ ಊಟ...

ಉತ್ತರ ಕರ್ನಾಟಕದ ಅಡುಗೆ ಖಾರವೇನೋ ಅಂತ ಗಾಬರಿ ಆಗಬೇಡಿ. ಏಕೆಂದರೆ ತೀರಾ ಖಾರ ಏನಿಲ್ಲ. ಹೋಳಿಗೆ ಬಿಸಿಬಿಸಿಯಾಗಿ ಮಾಡಿದ್ದರು. ಅದಕ್ಕೆ ತುಪ್ಪ ಹಾಕಿಸಿಕೊಂಡು ತಿಂದ ರುಚಿ ಅದ್ಭುತವಾಗಿತ್ತು. ಇನ್ನು ಹೋಟೆಲ್ ಕೂಡ ಸ್ವಚ್ಛವಾಗಿದೆ. ಅಲ್ಲೇ ಕೂತು ನೆಮ್ಮದಿಯಾಗಿ ತಿಂಡಿ-ಊಟ ಮಾಡಬಹುದು.

ಇದೇ ಜಾಗದಲ್ಲೇ ಖಡಕ್ ರೊಟ್ಟಿ ಕೂಡ ಸಿಗುತ್ತದೆ. ಬೆಳಗ್ಗೆ 8ರಿಂದ ರಾತ್ರಿ 10.30ರವರೆಗೆ, ವಾರದ ಎಲ್ಲ ದಿನವೂ ಹೋಟೆಲ್ ತೆರೆದಿರುತ್ತದೆ. ಉತ್ತರ ಕರ್ನಾಟಕದ ಇತರ ಆಹಾರ ಪದಾರ್ಥಗಳು-ಐಸ್ ಕ್ರೀಮ್..ಎಲ್ಲ ಒಂದೇ ಕಡೆ ಸಿಗುವುದರಿಂದ ಈ ಹೋಟೆಲ್ ಗೆ ನೀವೊಮ್ಮೆ ಭೇಟಿ ಕೊಡಬಹುದು. ಆ ನಂತರ ನಿಮಗೆ ಏನನ್ನಿಸಿತು ಅಂತಲೂ ತಿಳಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Here is the suggestion of hotel for North Karnataka food at Bengaluru. Gama Gama is the hotel situated in Katriguppe, Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ