ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕಿತ್ಸೆ ಬಳಿಕ ವ್ಹೀಲ್‌ ಚೇರ್ ಇಲ್ಲದೆ ತೆವಳಿಕೊಂಡೇ ಸಾಗಿದ ವೃದ್ಧ

By Nayana
|
Google Oneindia Kannada News

ಬೆಂಗಳೂರು, ಜೂನ್ 6: ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ವೃದ್ಧರೊಬ್ಬರು ತೆವಳಿಕೊಂಡೇ ಸಾಗುತ್ತಿದ್ದರೂ ವ್ಹೀಲ್‌ಚೇರ್‌ ನೀಡದೆ ವೈದ್ಯರು ಮಾನವೀಯತೆ ಮರೆತ ಘಟನೆ ಬೆಂಗಳೂರಿನ ಕೆಸಿ ಜೆನರಲ್ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.

ಆಸ್ಪತ್ರೆಯೊಳಗೆ ನೆಲದಲ್ಲೇ ತೆವಳಿಕೊಂಡು ಹೋಗುತ್ತಿದ್ದರೂ ಕೂಡ ನರ್ಸ್‌ಗಳು, ವೈದ್ಯರು ಕಣ್ಣಿಗೆ ಕಂಡರೂ ಕಾಣದಂತೆ ನಿರ್ಲಕ್ಷ್ಯ ತೋರಿದ್ದಾರೆ. 70 ವರ್ಷದ ವೃದ್ಧ ರೋಗಿಯು ದೊಡ್ಡಬಳ್ಳಾಪುರ ಜಿಲ್ಲೆಯ ಕಮ್ಮಘಟ್ಟದವರಾಗಿದ್ದಾರೆ.

ಬೆಂಗಳೂರು ಬಳಲುತ್ತಿದೆ, ಶ್ವಾಸಕೋಶ ಸಂಬಂಧಿ ರೋಗ ಹೆಚ್ಚುತ್ತಿದೆ! ಬೆಂಗಳೂರು ಬಳಲುತ್ತಿದೆ, ಶ್ವಾಸಕೋಶ ಸಂಬಂಧಿ ರೋಗ ಹೆಚ್ಚುತ್ತಿದೆ!

ಕಾಲಿಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯಲು ಹಳ್ಳಿಯಿಂದ ನಗರಕ್ಕೆ ಆಗಮಿಸಿದ್ದರು. ಅವರಿಗೆ ಬ್ಯಾಂಡೇಜ್ ಮಾಡಿದ ನಂತರ ಒಂದೆಡೆಯಿಂದ ಮತ್ತೊಂದೆಡೆಗೆ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ ಅವರನ್ನು ಕಂಡೂ ಕಾಣದಂತೆ ಆಸ್ಪತ್ರೆ ಸಿಬ್ಬಂದಿಗಳು ಜಾಣ ಕುರುಡು ಪ್ರದರ್ಶಿಸಿದ್ದಾರೆ.

No wheelchair, 70-year-old crawls out of government hospital

ಕೆಸಿ ಜನರಲ್ ಆಸ್ಪತ್ರೆ ವೈದ್ಯರಾದ ಡಾ. ಆರ್‌ ಭಾನುಮೂರ್ತಿ ಈ ಕುರಿತು ಪ್ರತಿಕ್ರಿಯಿಸಿ ಅವರಿಗೆ ಕಾಲಿನಲ್ಲಿ ಅಲ್ಸರ್ ಆಗಿತ್ತು, ಅವರು ಬಸ್‌ನಲ್ಲಿ ಆಸ್ಪತ್ರೆಗೆ ಸ್ವತಃ ನಡೆದುಕೊಂಡು ಬಂದಿದ್ದರು, ನಂತರ ಅವರ ಕಾಲುಗಳಿಗೆ ಬ್ಯಾಂಡೇಜ್ ಮಾಡಲಾಗಿದೆ.

ಅವರ ಕುಟುಂಬದವರ ಮೊಬೈಲ್‌ ನಂಬರ್‌ನ್ನು ಪಡೆದು ಮನೆಯವರಿಗೆ ಮಾಹಿತಿ ನೀಡಲಾಗಿದೆ. ಅವರು ವ್ಹೀಲ್‌ಚೇರ್‌ ಬೇಕು ಎಂದು ಕೇಳಿಲ್ಲ , ನಂತರ ಕುಟುಂಬದವರು ತಿಳಿಸಿದಂತೆ ಅವರ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ತಿಳಿದುಬಂದಿದೆ. ದಿನನಿತ್ಯ ಸಾವಿರಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ ಪ್ರತಿಯೊಬ್ಬ ರೋಗಿಯ ಮೇಲೂ ನಿಗಾ ಇಡುವುದು ಕಷ್ಟ ಎಂದು ತಿಳಿಸಿದ್ದಾರೆ.

English summary
In yet another example of apathy at government hospitals, a 70-year-old villager who came for treatment at KC General Hospital in Malleshwaram, was forced to crawl out of the facility as the staff failed to offer wheelchair assistance to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X