ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಆಗಸ್ಟ್ 5, 6ರಂದು ನೀರಿಲ್ಲ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 03 : ಬೆಂಗಳೂರು ನಗರದಲ್ಲಿ ಆಗಸ್ಟ್ 5 ಮತ್ತು 6 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕಾವೇರಿ ನೀರು ಪೂರೈಕೆ ಮಾಡುವ 1 ಮತ್ತು 2ನೇ ಹಂತದ ಯೋಜನೆ ಕೊಳವೆ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಪಂಪಿಂಗ್ ಕಾರ್ಯ ಸ್ಥಗಿತಗೊಳ್ಳಲಿದೆ.

ಬೆಂಗಳೂರು ಜಲಮಂಡಳಿ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಪಂಪಿಂಗ್ ಕಾರ್ಯ ಸ್ಥಗಿತಗೊಳ್ಳಲಿದ್ದು, ಎರಡು ದಿನಗಳ ಕಾಲ ಅರ್ಧ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.[ಹೊಸ ನೀರಿನ ಸಂಪರ್ಕಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಹಾಕಿ]

No water supply for Bengaluru on August 5 and 6, 2016

ನೈಋತ್ಯ, ಆಗ್ನೇಯಾ, ದಕ್ಷಿಣ, ಪಶ್ಚಿಮ ವಿಭಾಗದ ಹಲವು ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಯಾವ-ಯಾವ ಪ್ರದೇಶಗಳಲ್ಲಿ ನೀರಿಲ್ಲ ಇಲ್ಲಿದೆ ವಿವರ.....[ಬೋರ್ ವೆಲ್ ಶುಲ್ಕ ಇಳಿಸಿದ ಜಲಮಂಡಳಿ]

ನೈಋತ್ಯ ವಿಭಾಗ : ಅಂಜನಪ್ಪ ಗಾರ್ಡನ್, ಜೆ.ಜೆ.ನಗರ, ಚಲುವಾದಿ ಪಾಳ್ಯ, ಪಾದರಾಯನಪುರ, ಗೋರಿಪಾಳ್ಯ, ಕೆಂಪೇಗೌಡ ನಗರ, ಶಂಕರಪುರ, ಮಾವಳ್ಳಿ, ಜಯನಗರ, ಶ್ರೀನಗರ, ಶ್ರೀನಿವಾಸ ನಗರ, ಐಟಿಐ ಲೇಔಟ್, ಯಡಿಯೂರು, ಬನಶಂಕರಿ 2ನೇ ಹಂತ, ಹೊಸಕೆರೆಹಳ್ಳಿ, ಬನಗಿರಿ.[ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ತಜ್ಞರ ಸಮಿತಿ]

ಆಗ್ನೇಯ ವಿಭಾಗ : ಸಿಎಲ್ಆರ್‌ ಪ್ರದೇಶ, ಶಾಂತಿ ನಗರ, ರೆಸಿಡೆನ್ಸಿ ರಸ್ತೆ, ದೊಮ್ಮಲೂರು, ಈಜಿಪುರ, ಆಸ್ಟಿನ್ ಟೌನ್, ನೀಲಸಂದ್ರ, ಆಡುಗೋಡಿ, ಕೋರಮಂಗಳ 8ನೇ ಬ್ಲಾಕ್.

ದಕ್ಷಿಣ ವಿಭಾಗ : ಕುಮಾರಸ್ವಾಮಿ ಲೇಔಟ್, ಪ್ರಗತಿಪುರ, ಗಂಗಾಧರ ನಗರ, ಸರಬಂಡೆ ಪಾಳ್ಯ, ಪದ್ಮನಾಭನಗರ, ಬೇಂದ್ರೆ ನಗರ, ಉತ್ತರಹಳ್ಳಿ ಸುತ್ತ-ಮುತ್ತಲಿನ ಪ್ರದೇಶಗಳು.

ಪಶ್ಚಿಮ ವಿಭಾಗ : ಟೆಲಿಕಾಂ ಲೇಔಟ್, ಬಿನ್ನಿ ಲೇಔಟ್, ಆರ್‌ಪಿಸಿ ಲೇಔಟ್, ಪೈಪ್ ಲೈನ್ ಪ್ರದೇಶ, ಬಾಪೂಜಿ ನಗರ, ರಾಘವ ನಗರ, ಶಾಮಣ್ಣ ಗಾರ್ಡನ್, ಹೊಸಗುಡ್ಡದಹಳ್ಳಿ, ನ್ಯೂ ಟಿಂಬರ್ ಯಾರ್ಡ್, ಬ್ಯಾಟರಾಯನಪುರ, ಅವಲಹಳ್ಳಿ, ಬೋರೇಗೌಡ ಮತ್ತು ಎಟಿಎಂ ಸ್ಲಂ, ನಾಗಮ್ಮ ನಗರ, ನೇತಾಜಿ ನಗರ, ಭುವನೇಶ್ವರಿ ನಗರ, ಕೆ.ಪಿ.ಅಗ್ರಹಾರ, ಮರಿಯಪ್ಪನಪಾಳ್ಯ, ಫಿಶ್ ಸ್ಟಾಲ್ ರಸ್ತೆ, ಬೆಟ್ಟಮ್ಮ ರಸ್ತೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There will be no water supply for various parts of Bengaluru city on August 5 and 6 2016. In a press release Bangalore Water Supply and Sewerage Board (BWSSB) said, water supply will hit due to maintenance work.
Please Wait while comments are loading...