ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಸಿಗೆಯಲ್ಲಿ ಬೆಂಗಳೂರಿಗೆ ನೀರಿನ ಸಮಸ್ಯೆ ಇಲ್ಲ: ತುಷಾರ್ ಗಿರಿನಾಥ್

|
Google Oneindia Kannada News

ಬೆಂಗಳೂರು, ಮಾರ್ಚ್ 22: ನಗರದಲ್ಲಿರುವ ಕೆರೆಗಳ ಪುನಶ್ಚೇತನ ಕಾರ್ಯವನ್ನು 2022ರ ವೇಳೆಗೆ ಪೂರೈಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹೇಳಿದರು.

ವಿಶ್ವ ಜಲ ದಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2022ರ ವೇಳೆ ನಗರದಲ್ಲಿರುವ ಎಲ್ಲಾ ಕೆರೆಗಳನ್ನು ಪುನಶ್ಚೇತನಗೊಳಿಸಲಾಗುತ್ತದೆ. ಬಳಿಕ ಅನಿವಾರ್ಯವಾದರೆ ಕೆರೆ ನೀರುಗಳನ್ನು ವಿವಿಧ ಉದ್ದೇಶಕ್ಕೆ ಬಳಸಲಾಗುತ್ತದೆ.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಡೆಯಲು ಜಲಮಂಡಳಿ ಯೋಜನೆ ಏನು?ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಡೆಯಲು ಜಲಮಂಡಳಿ ಯೋಜನೆ ಏನು?

ಈ ಬೇಸಿಗೆಯಲ್ಲಿ ನಗರದ ಜನರಿಗೆ ನೀರಿಗೆ ಯಾವುದೇ ಸಮಸ್ಯೆ ಇಲ್ಲ. 1350 ದಶಲಕ್ಷ ನೀರನ್ನು ಕೊಡುತ್ತಿದ್ದೇವೆ. 2035ರ ಬಳಿಕ ನಗರಕ್ಕೆ ಶರಾವತಿ ನದಿಯಿಂದ ನೀರುವ ತರುವ ಬಗ್ಗೆ ಚಿಂತನೆ ಇದೆ. ಈ ಬೇಸಿಗೆಗೆ ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

No water crisis in Bengaluru for this summer

ಪ್ರಸ್ತುತ ನಗರದಲ್ಲಿರುವ ಕೆರೆಗಳು ಸಂಪೂರ್ಣವಾಗಿ ಕಲುಷಿತಗೊಂಡಿವೆ, ಅಲ್ಲಿರುವ ಜಲಚರಗಳು ಸಾವನ್ನಪ್ಪುತ್ತಿವೆ ಹೀಗಾಗಿ ಕೆರೆಯಗಳ ಪುನಶ್ಚೇತನ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳಲಾಗುತ್ತದೆ ಎಂದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನೀರಿನ ಮಿತ ಬಳಕೆ ಹಾಗೂ ಮರುಬಳಕೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಬಿಬಿಎಂಪಿ ಸಹಕಾರ ನೀಡುವುದಾಗಿ ತಿಳಿಸಿರುವುದು ಸ್ವಾಗತಾರ್ಹ, ಮಂಡಳಿಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದರು.

ಬೆಂಗಳೂರಿಗೆ ಕಾದಿದೆ ನೀರಿನ ಬರ: ಬಿಬಿಸಿ ವರದಿಯಲ್ಲಿ ಎಚ್ಚರಿಕೆಬೆಂಗಳೂರಿಗೆ ಕಾದಿದೆ ನೀರಿನ ಬರ: ಬಿಬಿಸಿ ವರದಿಯಲ್ಲಿ ಎಚ್ಚರಿಕೆ

English summary
BWSSB chairman Tushar girinath said that Bengaluru city has sufficient water for this summer. He also told that by 2022, Bengaluru lakes will be rejuvenated and will be able to usages of those water, he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X