ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ ಬಳಿ ಬಿಎಂಟಿಸಿ ಬಸ್‌ಗಳು ಸದ್ಯಕ್ಕೆ ಟೋಲ್‌ ಕಟ್ಟಬೇಕಿಲ್ಲ

By Nayana
|
Google Oneindia Kannada News

ಬೆಂಗಳೂರು, ಜು.17: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಲು ಇರುವ ನವಯುಗ ಟೋಲ್‌ ನಲ್ಲಿ ಕೆಲ ದಿನಗಳ ಕಾಲ ಬಿಎಂಟಿಸಿ ಬಸ್‌ಗಳಿಗೆ ಟೋಲ್‌ ಸಂಗ್ರಹಿಸದಿರುವಂತೆ ತೀರ್ಮಾನ ಕೈಗೊಳ್ಳಲಾಗಿದೆ.

ನವಯುಗ ಟೋಲ್‌ನಲ್ಲಿ ಬಿಎಂಟಿಸಿ ಬಸ್‌ಗಳಿಗೆ ಹಳೆಯ ಶುಲ್ಕವನ್ನೇ ಮುಂದುವರೆಸುವ ಬಗ್ಗೆ ಚರ್ಚೆ ನಡೆಸಲಾಯಿತು, ಕೊನೆಗೆ ಈ ನಿರ್ಧಾರಕ್ಕೆ ಬರಲಾಗಿದೆ. ಬಿಎಂಟಿಸಿ ಬಸ್‌ಗಳಲ್ಲಿ ಹೆಚ್ಚುವರಿ ಶುಲ್ಕ ಪಡೆದುಕೊಳ್ಳಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಬಿಎಂಟಿಸಿ, ನವಯುಗ ಟೋಲ್‌, ಶಾಸಕರು ಹಾಗೂ ಪ್ರಯಾಣಿಕರ ನಡುವೆ ಸಭೆ ನಡೆಯಿತು.

ನವಯುಗ ಟೋಲ್ ಗೆ ಪೊಲೀಸ್ ಭದ್ರತೆ ಕಲ್ಪಿಸುವಂತೆ ಹೈಕೋರ್ಟ್ ಸೂಚನೆನವಯುಗ ಟೋಲ್ ಗೆ ಪೊಲೀಸ್ ಭದ್ರತೆ ಕಲ್ಪಿಸುವಂತೆ ಹೈಕೋರ್ಟ್ ಸೂಚನೆ

ಈ ಸಭೆಯಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಆದರೆ ಟೋಲ್‌ ಹೆಚ್ಚಿದ ಕಾರಣ ಟಿಕೆಟ್‌ದರ ಹೆಚ್ಚಳ ಅನಿವಾರ್ಯ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದರು. ನಿರ್ವಹಣಾ ವೆಚ್ಚ ಏರಿಕೆಯಾಗಿರುವ ಕಾರಣ ಟೋಲ್‌ ಶುಲ್ಕವನ್ನು ಹೆಚ್ಚಿಸಲಾಗಿದೆ ಎಂದು ಟೋಲ್‌ ನಿರ್ವಹಣಾ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

No toll for BMTC buses near KIAl for few days

ಹೀಗಾಗಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ, ಆದರೆ ಕೆಲವೇ ದಿನಗಳಲ್ಲಿ ನಿರ್ಧಾರ ಪ್ರಕಟಿಸುವಂತೆ ಅಲ್ಲಿಯವರೆಗೆ ಯಾವುದೇ ಶುಲ್ಕ ಪಡೆಯದಿರುವಂತೆ ಶಾಸಕರು ತಿಳಿಸಿದ್ದಾರೆ.

2018ರ ಮಾರ್ಚ್ ಬಳಿಕ ನವಯುಗ ಸಂಸ್ಥೆಯು ಟೋಲ್‌ ದರವನ್ನು ಹೆಚ್ಚಿಸಿತ್ತು. ಇದರಿಂದಾಗಿ ಬಿಎಂಟಿಸಿ ಸಂಸ್ಥೆಗೆ ಹೆಚ್ಚುವರಿ ಹೊರೆ ಬೀಳಲು ಆರಂಭವಾಯಿತು. ಟೋಲ್‌ ಮೂಲಕ ಸಾಗುವ ಬಸ್‌ಗಳಿಗೆ ಏಕಾಏಕಿ 6 ರೂ. ಏರಿಸಲಾಗಿತ್ತು. ಇದಕ್ಕೆ ಸಾರ್ವಜನಿಕರು ಹಾಗೂ ಬಿಎಂಟಿಸಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

English summary
Coordination committee has decided to not to collect toll fees from BMTC buses at Navayuga toll plaza near Kempegowda international airport for few days. BMTC has sought to impose old fees while toll plaza agency not accepted the demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X