ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣಪತಿ ಕೂರಿಸಲು ತೆರಿಗೆ-ಗಿರಿಗೆ ಕಟ್ಟೋ ಹಂಗಿಲ್ಲ: ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಆಗಸ್ಟ್ 13: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಗಣಪತಿ ಕೂರಿಸುವವರು ಭಾರಿ ಮೊತ್ತದ ಮೊತ್ತವನ್ನು ಬಾಂಡ್ ರೂಪದಲ್ಲಿ ಕಟ್ಟಬೇಕು ಎಂಬ ಸುದ್ದಿ ಹರಿದಾಡುತ್ತಿದ್ದು, ಆದರೆ ಬಿಬಿಎಂಪಿ ಇದನ್ನು ನಿರಾಕರಿಸಿದೆ.

ಬೆಂಗಳೂರು ನಗರ ವ್ಯಾಪತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚಿಸುವವರಿಗೆ ಯಾವುದೇ ತೆರಿಗೆಯಾಗಲಿ, ಶುಲ್ಕವಾಗಲಿ ವಿಧಿಸುತ್ತಿಲ್ಲ ಎಂದು ಬಿಬಿಎಂಪಿ ಮಹಾಪೌರರು ಸ್ಪಷ್ಟಪಡಿಸಿದ್ದಾರೆ.

No tax or any fee for public Ganesh festival: BBMP

ಸಾರ್ವಜನಿಕವಾಗಿ ಗಣೇಶೋತ್ಸವ ಮಾಡುವವರಿಂದ ಅಡಿಗೆ ಇಂತಿಷ್ಟು ಎಂದು ಬಿಬಿಎಂಪಿ ಶುಲ್ಕ ವಸೂಲಿ ಮಾಡುತ್ತದೆ. ಗಣೇಶ ಕೂರಿಸುವವರು ಭದ್ರತೆ ನೀಡಬೇಕು ಎಂದೆಲ್ಲಾ ವದಂತಿಗಳು ಬೆಳಿಗ್ಗಿನಿಂದಲೂ ಹರಿದಾಡುತ್ತಿತ್ತು. ಆದರೆ ಇದನ್ನೆಲ್ಲಾ ಬಿಬಿಎಂಪಿ ಅಲ್ಲಗಳೆದಿದೆ.

ಗಣೇಶನನ್ನು ಪ್ರತಿಷ್ಠಾಪಿಸಬೇಕೆ? ಬಿಬಿಎಂಪಿ ಅನುಮತಿ ಬೇಕೇ ಬೇಕುಗಣೇಶನನ್ನು ಪ್ರತಿಷ್ಠಾಪಿಸಬೇಕೆ? ಬಿಬಿಎಂಪಿ ಅನುಮತಿ ಬೇಕೇ ಬೇಕು

ಪ್ರತಿ ವರ್ಷದಂತೆ ಈ ವರ್ಷವೂ ಯಾವುದೇ ತೆರಿಗೆ, ಶುಲ್ಕಗಳ ಹಾವಳಿಯಿಲ್ಲದೆ ಗಣೇಶೋತ್ಸವ ಆಚರಿಸಬಹುದಾಗಿದೆ ಎಂದಿರುವ ಮಹಾಪೌರರು, ಉತ್ಸವದ ಅಂಗವಾಗಿ ಸ್ವಚ್ಛತೆ ಕಾಪಾಡುವತ್ತ ಗಮನ ಹರಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.

ಪಾಲಿಕೆಯಿಂದ ಭರ್ಜರಿ ಟ್ಯಾಕ್ಸ್‌ ಕಲೆಕ್ಷನ್‌: 60 ದಿನದಲ್ಲಿ 592 ಕೋಟಿ ವಸೂಲಿಪಾಲಿಕೆಯಿಂದ ಭರ್ಜರಿ ಟ್ಯಾಕ್ಸ್‌ ಕಲೆಕ್ಷನ್‌: 60 ದಿನದಲ್ಲಿ 592 ಕೋಟಿ ವಸೂಲಿ

ಸಾರ್ವಜನಿಕ ಸ್ಥಳದಲ್ಲಿ ಗಣೇಶ ವಿಗ್ರಹ ಕೂರಿಸುವವರು ಸ್ವಯಂ ಪ್ರೇರಿತರಾಗಿ ಸ್ವಚ್ಛತೆ ಕಾಪಾಡುವ ಜೊತೆಗೆ , ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಹಾಪೌರರು ಮನವಿ ಮಾಡಿದ್ದಾರೆ.

English summary
BBMP said, No tax or any kind of fee for public Ganesh festival. some fake news spreading that BBMP imposing tax on Ganesh festival organizing on public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X