ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಬುಲೆನ್ಸ್‌ ಸೇವೆ ಗುತ್ತಿಗೆ ಪಡೆಯೋಕೆ ಏಜೆನ್ಸಿಗಳೇ ಮುಂದೆ ಬರ್ತಿಲ್ಲ

By Nayana
|
Google Oneindia Kannada News

ಬೆಂಗಳೂರು, ಜು.27: ಆಂಬುಲೆನ್ಸ್‌ ಸೇವೆ ಗುತ್ತಿಗೆ ಪಡೆಯಲು ಏಜೆನ್ಸಿಗಳು ಮುಂದೆ ಬಾರದೆ ಇರುವ ಕಾರಣ 108 ಆಂಬುಲೆನ್ಸ್‌ ಸೇವೆ ಒದಗಿಸಲು ಸರ್ಕಾರ ಕಷ್ಟಪಡುತ್ತಿದೆ.

ಸರ್ಕಾರದ ಆರೋಗ್ಯ ಕವಚ ಯೋಜನೆಯಲ್ಲಿ 711 ಆಂಬುಲೆನ್ಸ್‌ಗಳಿವೆ. ಈ ಸೇವೆಯನ್ನು ಜಿವಿಕೆ ಇಎಂಆರ್‌ಐ ನಿರ್ವಹಣೆ ಮಾಡಿಕೊಂಡು ಬರುತ್ತಿತ್ತು. ಈ ಸಂಸ್ಥೆ ಜತೆ ಸರ್ಕಾರದ ಒಡಂಬಡಿಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಎರಡು ಬಾರಿ ಹೊಸ ಟೆಂಡರ್‌ ಕರೆಯಲಾಗಿದ್ದರೂ ಏಜೆನ್ಸಿಗಳು ಮುಂದೆ ಬರುತ್ತಿಲ್ಲ.

108 ಆಂಬ್ಯಲೆನ್ಸ್ ಸೇವೆಗೆ 400 ಹೊಸ ವಾಹನ ಸೇರ್ಪಡೆ108 ಆಂಬ್ಯಲೆನ್ಸ್ ಸೇವೆಗೆ 400 ಹೊಸ ವಾಹನ ಸೇರ್ಪಡೆ

ಇದರಿಂದ ರೋಗಿಗಳಿಗೂ ಕೂಡ ತೊಂದರೆಯಾಗುತ್ತಿದೆ. ಬರೋಬ್ಬರಿ 92 ಸಾವಿರ ಮಂದಿಗೆ ಒಂದು ಅಂಬ್ಯುಲೆನ್ಸ್‌ ಇದೆ. ಆರೋಗ್ಯ ಇಲಾಖೆ ತನ್ನದೇ ಆದ ಸೇವೆ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಿದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ 2008ರಲ್ಲಿ ಸರ್ಕಾರ ಮತ್ತು ಜಿವಿಕೆ ಇಎಂಆರ್‌ಐಗಳು ಒಪ್ಪಂದ ಮಾಡಿಕೊಂಡಿದ್ದವು.ಈ ಒಡಂಬಡಿಕೆ ಅನ್ವಯ ಸರ್ಕಾರ ಆಂಬುಲೆನ್ಸ್‌ ಹಾಗೂ ಮೂಲಸೌಕರ್ಯ ಕಲ್ಪಿಸುವ ಜವಾಬ್ದಾರಿ ಹೊಂದಿತ್ತು.

No takers for 108 medical emergency services agency for govt

ಪ್ರಸ್ತುತ 92 ಸಾವಿರ ಜನಸಂಖ್ಯೆಗೆ ಒಂದು ಆಂಬುಲೆನ್ಸ್‌ ಇದ್ದು, ಹೊಸ ವ್ಯವಸ್ಥೆ ಜಾರಿಗೊಂಡಲ್ಲಿ ಆ ಸಂಖ್ಯೆ 42 ಸಾವಿರಕ್ಕೆ ಇಳಿಯಲಿದೆ. ಆದರೆ ಟೆಂಡರ್‌ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದೆ ಇರುವುದರಿಂದ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ.

ಪ್ರಕೃತಿ ಚಿಕಿತ್ಸೆ, ವಿಶ್ರಾಂತಿಗಾಗಿ ಜಿಂದಾಲ್‌ಗೆ ಯಡಿಯೂರಪ್ಪ ದಾಖಲುಪ್ರಕೃತಿ ಚಿಕಿತ್ಸೆ, ವಿಶ್ರಾಂತಿಗಾಗಿ ಜಿಂದಾಲ್‌ಗೆ ಯಡಿಯೂರಪ್ಪ ದಾಖಲು

ಸರ್ಕಾರದೊಂದಿಗೆ ತಮ್ಮ ಸಂಸ್ಥೆ 10 ವರ್ಷಗಳ ಕಾಲಾವಧಿಯ ಒಡಂಬಡಿಕೆ ಮಾಡಿಕೊಂಡಿದೆ. ಆದರೆ, ಅವಧಿಯ ಮೊದಲು ಸೇವೆ ಮುಕ್ತಾಯಗೊಳಿಸಿರುವುದು ಸರಿಯಲ್ಲ ಮತ್ತು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕೊಡಬೇಂದು ಜಿವಿಕೆ ಹೈಕೋರ್ಟ್‌ ಮೆಟ್ಟಿಲೇರಿತ್ತು.

English summary
Karnataka government has called tender for 108 medical emergency services agency twice but no agency was shown interest to bid for the tender. Officials have worried about the continuation of the scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X