ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಡತಯಜ್ಞ, ಭಾನುವಾರವೂ ನೌಕರರ ಕೆಲಸ

|
Google Oneindia Kannada News

ಬೆಂಗಳೂರು, ಸೆ.7 : ಭಾನುವಾರ ರಾಜ್ಯದ ಆಡಳಿತ ಶಕ್ತಿಕೇಂದ್ರ ವಿಧಾನಸೌಧ ಬಿಕೋ ಎನ್ನುತ್ತಿರುತ್ತದೆ. ಸರ್ಕಾರಿ ನೌಕರರು ರಜೆಯಲ್ಲಿರುತ್ತಾರೆ. ಆದರೆ, ಇಂದು ವಿವಿಧ ಇಲಾಖೆಯ ಅಧಿಕಾರಿಗಳು ಕಚೇರಿಗೆ ಆಗಮಿಸಿದ್ದು, ಕಡತಗಳ ವಿಲೇವಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿ ರಜಾ ದಿನವಾದ ಭಾನುವಾರ ಸಹ ನೌಕರರು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿಯವರ ಸೂಚನೆ. ಲಕ್ಷಾಂತರ ಕಡತಗಳು ಬಾಕಿ ಉಳಿದಿರುವುದರಿಂದ ನೌಕರರು ಇಂದು ಕಚೇರಿಗೆ ಆಗಮಿಸಿದ್ದಾರೆ.

vidanasoudha

ವಿವಿಧ ಇಲಾಖೆಗಳಲ್ಲಿ ಸುಮಾರು ಎರಡು ಲಕ್ಷ ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿದೆ ಎಂದು ಕಳೆದವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಅವುಗಳನ್ನು ತಕ್ಷಣ ವಿಲೇವಾರಿ ಮಾಡಬೇಕೆಂದು ಸಿಎಂ ಖಡಕ್ ಆದೇಶ ನೀಡಿದ್ದರು. ಆದ್ದರಿಂದ ನೌಕರರು ಭಾನುವಾರವಾದ ಇಂದು ಕಡತಯತ್ಞದಲ್ಲಿ ಪಾಲ್ಗೊಂಡಿದ್ದಾರೆ. [ಕಡತ ವಿಲೇವಾರಿ ಬಗ್ಗೆ ಸಿಎಂ ಗರಂ]

ಕೌಶಿಕ್ ಮುಖರ್ಜಿ ಭೇಟಿ : ಸರ್ಕಾರದ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಇಂದು ವಿಧಾನಸೌಧಕ್ಕೆ ಭೇಟಿ ನೀಡಿ ನೌಕರರು ಕೆಲಸ ಮಾಡುತ್ತಿರುವ ಕುರಿತು ಪರಿಶೀಲನೆ ನಡೆಸಿದರು. ಕಂದಾಯ ಮತ್ತು ನಗರಾಭಿವೃದ್ಧಿ ಇಲಾಖೆಗಳ ಕಡತಗಳ ವಿಲೇವಾರಿಗೆ ಭಾನುವಾರ ಆದ್ಯತೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸಚಿವಾಲಯಗಳ ಮಟ್ಟದಲ್ಲಿ ಸಾವಿರಾರು ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿದ್ದು, ಅವುಗಳು ಸರಿಯಾಗಿ ವಿಲೇವಾರಿಯಾಗದಿದ್ದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೌಶಿಕ್ ಮುಖರ್ಜಿ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ರಜೆಯ ದಿನವೂ ಕಡತ ಯಜ್ಞ ಸಾಗಿದೆ.

ಸಚಿವರಿಗೂ ಸೂಚನೆ ಇದೆ : ಸಚಿವರು ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ತನಕ ವಿಧಾನಸೌಧದದ ಕಚೇರಿಯಲ್ಲಿದ್ದು, ಕಡತ ವಿಲೇವಾರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಆದರೆ, ಇದನ್ನು ಸಚಿವರು ಪಾಲಿಸುತ್ತಾರೆಯೇ ಕಾದು ನೋಡಬೇಕು.

English summary
Karnataka Vidhana Soudha employees working on Sunday, September 7. The decision to work on Sunday was triggered after an upset chief minister, at a recent cabinet meeting, expressed concern over a pileup of 2 lakh files, across departments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X