ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂ.4ರ ಮೆಟ್ರೋ ಮುಷ್ಕರ ಕೈಬಿಟ್ಟ ನೌಕರರು

By Nayana
|
Google Oneindia Kannada News

ಬೆಂಗಳೂರು, ಮೇ 30: ನಮ್ಮ ಮೆಟ್ರೋ ನೌಕರರು ಜೂನ್ 4 ರಂದು ನಡೆಸಲು ನಿರ್ಧರಿಸಿದ್ದ ಮುಷ್ಕರವನ್ನು ನಡೆಸದಿರುವಂತೆ ಕ್ರಮ ಕೈಗೊಂಡಿದ್ದಾರೆ. ಮೆಟ್ರೋ ನೌಕರರ ಮುಷ್ಕರ ಕುರಿತಂತೆ ಹೈಕೋರ್ಟ್‌ ನಲ್ಲಿ ಸೋಮವಾರ ನಡೆಯಬೇಕಿದ್ದ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಅಂದು ಮುಷ್ಕರ ನಡೆಸದಿರುವಂತೆ ಹೈಕೋರ್ಟ್ ಸೂಚನೆಯನ್ನು ನೌಕರರು ಒಪ್ಪಿಕೊಂಡಿದ್ದಾರೆ. ನಿಗದಿಯಂತೆ ನ್ಯಾ.ಎ.ಎಸ್. ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ಬಿಎಂಆರ್‌ ಸಿಎಲ್ ಎಸ್ಮಾ ಜಾರಿಗೆ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋಟಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಬಂದಿತು.

ಮೆಟ್ರೋ ನೌಕರರ ಮುಷ್ಕರ ಪ್ರಶ್ನಿಸಿ ಅಧಿಕಾರಿಗಳ ಅರ್ಜಿ: ವಿಚಾರಣೆ ಮುಂದಕ್ಕೆ ಮೆಟ್ರೋ ನೌಕರರ ಮುಷ್ಕರ ಪ್ರಶ್ನಿಸಿ ಅಧಿಕಾರಿಗಳ ಅರ್ಜಿ: ವಿಚಾರಣೆ ಮುಂದಕ್ಕೆ

ಆಗ ನಿಗಮದ ಪರ ವಕೀಲರು ಹೈಕೋರ್ಟ್ ನಿರ್ದೇಶನದಂತೆ ಬುಧವಾರ ಕಾರ್ಮಿಕ ಆಯುಕ್ತರು ಮೆಟ್ರೋ ನೌಕರರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ನಂತರ ಆಯುಕ್ತರು ಮಾತುಕತೆ ವಿವರಗಳನ್ನು ನ್ಯಾಯಾಲಯಕ್ಕೆ ವರದಿ ರೂಪದಲ್ಲಿ ಸಲ್ಲಿಸಲಿದ್ದಾರೆ ಹಾಗಾಗಿ ವಿಚಾರಣೆ ಮುಂದೂಡಬೇಕು ಎಂದು ವಕೀಲರು ಮನವಿ ಮಾಡಿದರು.

No strike on June 4: Metro employees

ಈ ಮಧ್ಯೆ ಮಂಗಳವಾರ ಪ್ರಮಾಣ ಪತ್ರ ಸಲ್ಲಿಸಿರುವ ನೌಕರರ ಸಂಘ, ಜೂ.4 ರಂದು ನೌಕರರು ಮುಷ್ಕರ ನಡೆಸಲು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ. ಹೈಕೋರ್ಟ್ ವಿಚಾರಣೆಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ನೌಕರರ ಸಂಘ ಕೋರ್ಟ್ ತೀರ್ಮಾನಕ್ಕೆ ಕಾಯಲು ತೀರ್ಮಾನಿಸಿದೆ. ಕೋರ್ಟ್ ತೀರ್ಪು ವ್ಯತಿರಿಕ್ತವಾಗಿ ಬಂದರೆ ಮುಷ್ಕರಕ್ಕೂ ತಯಾರಿ ನಡೆಸಿದೆ.

English summary
Employees union of Namma Metro has clarified that there will be no strike on June 4 since the high court has adjourned to same day plea filed by BMRCL. After the court decision further steps will be taken, union clarified.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X