ಉಕ್ಕಿನ ಮೇಲ್ಸೇತುವೆ ವಿರುದ್ಧ ಮಾನವ ಸರಪಳಿ ಪ್ರತಿಭಟನೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 16: ಬಹುಕೋಟಿ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಸಿಟಿಜನ್ ಎಗೇನ್ಸ್ಟ್ ಫ್ಲೈಓವರ್ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗುತ್ತಿದೆ.

ನಗರದ ಚಾಲುಕ್ಯ ವೃತ್ತ, ಮೇಖ್ರಿ ವೃತ್ತ, ಕಾವೇರಿ ಜಂಕ್ಷನ್, ಹೆಬ್ಬಾಳ ಮುಂತಾದೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ಕಲಾವಿದರು, ಸ್ಥಳೀಯ ನಿವಾಸಿಗಳು, ಪರಿಸರವಾದಿಗಳು ಸೇರಿದಂತೆ ಕೆಲ ಸೆಲಿಬ್ರಿಟಿಗಳು ಕೂಡಾ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.[ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]

No Steel Flyover : Bengaluru Public human chain protest -CAFo

ನಗರಾಭಿವೃದ್ಧಿ, ಸಂಚಾರ ದಟ್ಟಣೆ ತಜ್ಞರು ಮಾಧ್ಯಮಗಳಲ್ಲಿ ತಮ್ಮಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಫೇಸ್ ಬುಕ್ ನಲ್ಲಿ ಎನ್ ಜಿಒಗಳು ಪ್ರತಿಭಟನೆ ವಿಡಿಯೋಗಳು ಹರಿದಾಡುತ್ತಿವೆ.[ಗ್ಯಾಲರಿ : ಸ್ಟೀಲ್ ಬ್ರಿಡ್ಜ್ ವಿರುದ್ಧ ಮಾನವ ಸರಪಳಿ]

ಮೇಲ್ಸೇತುವೆ ನಿರ್ಮಾಣದ ಮುಖ್ಯ ಉದ್ದೇಶವಾಗಿರುವ ಸಂಚಾರ ದಟ್ಟಣೆ ಒತ್ತಡ ಕಡಿಮೆ ಮಾಡಲು ಪರ್ಯಾಯವಾಗಿ ಯಾವ ಮಾರ್ಗಗಳಿವೆ ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ.[ಉಕ್ಕಿನ ಮೇಲ್ಸೇತುವೆ ಪರ್ಯಾಯವಾಗಿ ಏನ್ಮಾಡ್ಬಹುದು?]

ಚಾಲುಕ್ಯ ಸರ್ಕಲ್ ನಿಂದ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗಿನ ಉಕ್ಕಿನ ಮೇಲ್ಸೇತುವೆಗೆ ಸುಮಾರು 1,791 ಕೋಟಿ ರು ವೆಚ್ಚ ಎಂದು ಅಂದಾಜಿಸಲಾಗಿದೆ.

ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ವೆಚ್ಚ 1,900 ಕೋಟಿ ರು ದಾಟಬಹುದು. ಆರೇಳು ಕಿ.ಮೀ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಥವಾ 10 ನಿಮಿಷದ ಟ್ರಾಫಿಕ್ ಒತ್ತಡ ನಿವಾರಿಸಲು ಎಷ್ಟೊಂದು ಮೊತ್ತದ ಸಾರ್ವಜನಿಕರ ಹಣ ವ್ಯಯಿಸುವ ಅಗತ್ಯವಿದೆಯೇ? ಎಂದು ಪ್ರಶ್ನಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The campaign launched by Citizens Against Steel Flyover ( C A S Fo ) - a group of artists,citizen activists, resident welfare associations backed by residents protesting against Steel Flyover construction.
Please Wait while comments are loading...