ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ರಂಗಪ್ಪ ನೇಮಕ ಇಲ್ಲ: ಜಿಟಿಡಿ

By Nayana
|
Google Oneindia Kannada News

ಬೆಂಗಳೂರು, ಜೂನ್ 23: ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರರನ್ನಾಗಿ ರಂಗಪ್ಪ ಅವರನ್ನು ನೇಮಕ ಮಾಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಈ ಬಗ್ಗೆ ಹೇಳಿದ್ದಾರೆ, ಯಾವುದೇ ಕಾರಣಕ್ಕೂ ರಂಗಪ್ಪ ಅವರನ್ನು ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರರನ್ನಾಗಿ ನೇಮಕ ಮಾಡುವುದಿಲ್ಲ, ಆದರೆ ಅವರ ಸಲಹೆಗಳನ್ನು ಪಡೆಯುತ್ತೇವೆ ಎಂದರು.

ಇಂಗ್ಲಿಷ್ ಮಾತನಾಡಲು ಬಾರದೆ ಇರಿಸುಮುರಿಸು ಅನುಭವಿಸಿದ ಜಿಟಿಡಿ ಇಂಗ್ಲಿಷ್ ಮಾತನಾಡಲು ಬಾರದೆ ಇರಿಸುಮುರಿಸು ಅನುಭವಿಸಿದ ಜಿಟಿಡಿ

ಕರ್ನಾಟಕ ಮುಕ್ತ ವಿವಿ 2013-14 ರಿಂದ ಮಾನ್ಯತೆ ಕಳೆದುಕೊಂಡಿದೆ. ಇದುವರೆಗೂ ವಿವಿಗೆ ಮಾನ್ಯತೆ ದೊರೆತಿಲ್ಲ. ಅಂದಿನಿಂದ ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಯದೇ ವಿವಿ ಕೋಮಾ ಸ್ಥಿತಿಯಲ್ಲಿದೆ. ಇದಕ್ಕೆ ರಂಗಪ್ಪ ಅವರೇ ನೇರವಾಗಿ ಕಾರಣರಾಗಿದ್ದು ಇಂಥವರನ್ನು ಉನ್ನತ ಶಿಕ್ಷಣ ಮಂಡಳಿಗೆ ನೇಮಿಸಬಾರದು ಎನ್ನುವ ವಿರೋಧದ ಮಾತುಗಳು ಕೇಳಿಬಂದಿದ್ದವು.

No proposal of appoint advisor to me: G.T. Devegowda

ಈ ವಿಚಾರದ ಕುರಿತು ದೇವೇಗೌಡ ಅವರು ಮಾತನಾಡಿ ರಂಗಪ್ಪ ಅವರ ಕುರಿತು ಇನ್ನಷ್ಟು ಚರ್ಚೆಗಳು ಬೇಡ, ಅವರು ತಪ್ಪು ಮಾಡಿದ್ದರೆ ಕಾನೂನಾತ್ಮಕವಾಗಿ ಶಿಕ್ಷೆ ಅನುಭವಿಸುತ್ತಾರೆ, ಆದರೆ ಅವರನ್ನು ಇಲಾಖೆಯ ಸಲಹೆಗಾರರನ್ನು ಮಾಡುವ ವಿಚಾರವೇ ಇಲ್ಲ ಎಂದು ತಿಳಿಸಿದರು.

English summary
Higher education minister G.T. Devegowda has clarified that there was no proposal to appoint former vice Chancellor Prof. Rangappa as advisor to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X