ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮ್ಯಾ ಎಂಎಲ್ಸಿ ಆಗುತ್ತಿಲ್ಲ, ಮತ್ತೆ ಹಂಗಾದ್ರೆ ಯಾರಿಗೆ ಚಾನ್ಸ್?

By Mahesh
|
Google Oneindia Kannada News

ಬೆಂಗಳೂರು, ಜುಲೈ 03: ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಖಾಲಿ ಬಿಟ್ಟ ಸ್ಥಾನ ಯಾರಿಗೆ ಲಭಿಸಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಜೊತೆಗೆ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರು ಎಂಎಲ್ಸಿ ಆಗುತ್ತಾರಾ? ಸಂಪುಟಕ್ಕೆ ಸೇರುತ್ತರಾ? ಎಂಬ ಕುತೂಹಲದ ಪ್ರಶ್ನೆಗೆ ಸಿದ್ದರಾಮಯ್ಯ ಅವರು ಉತ್ತರಿಸಿದ್ದಾರೆ.

ವಿಧಾನ ಪರಿಷತ್‌ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ಹೆಸರು ಪ್ರಸ್ತಾವನೆಯಾಗಿಲ್ಲ. ಅಲ್ಲದೆ ಸೀತಾರಾಮ್ ಅವರನ್ನು ಹೊರತುಪಡಿಸಿ ಚುನಾಯಿತ ಪ್ರತಿನಿಧಿ(ಎಂಎಲ್ ಎ)ಗಳನ್ನು ಮಾತ್ರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಪರಿಪಾಠ ಪಾಲಿಸುತ್ತಾ ಬಂದಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ರಮ್ಯಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯಾವುದೇ ಸಾಧ್ಯತೆ ಕಂಡು ಬಂದಿಲ್ಲ. [ಕುರುಬರ ಸಮಾವೇಶದಲ್ಲಿ ಸಿಎಂ ಸಿದ್ದುಗೆ 'ಕಿಸ್ ಭಾಗ್ಯ']

No proposal to induct Ramya into cabinet : CM Siddaramaiah

ಮತ್ತೆ ಯಾರಿಗೆ ಚಾನ್ಸ್: ಎಲ್ಲಾ ಸಮರ್ಥ ಚುನಾಯಿತ ಪ್ರತಿನಿಧಿಗಳಿಗೂ ಅವಕಾಶ ನೀಡುವ ದೃಷ್ಟಿಯಿಂದ ಸಂಪುಟ ಪುನರ್ ರಚನೆ ಮಾಡಲಾಯಿತು. ಅವಕಾಶ ಎಲ್ಲರಿಗೂ ಸಿಕ್ಕಿದೆ. ಖಾಲಿ ಉಳಿದಿರುವ ಒಂದು ಸ್ಥಾನವನ್ನು ಆತುರವಾಗಿ ತುಂಬುವುದಿಲ್ಲ. ['ಸಿದ್ದರಾಮಯ್ಯ ವಿಶ್ವಾಸದ್ರೋಹಿ, ಅವರಿಗೆ ಕೃತಜ್ಞತೆ ಇಲ್ಲ']

ಈ ಬಗ್ಗೆ ದೆಹಲಿಯಲ್ಲಿರುವ ನಮ್ಮ ಹಿರಿಯ ನಾಯಕರೊಡನೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರನ್ನು ಸಂಸತ್ತಿನಲ್ಲಿ ನೋಡಲು ಇಚ್ಛಿಸುತ್ತೇವೆ. ಅವರನ್ನು ಎಂಎಲ್ಸಿಯಾಗಿಸಿ, ಕ್ಯಾಬಿನೆಟ್ ಗೆ ಸೇರಿಸಿಕೊಳ್ಳಲಾಗುವುದು ಎಂಬ ಸುದ್ದಿ ಹಬ್ಬಿದ್ದು, ಇದರಲ್ಲಿ ಹುರುಳಿಲ್ಲ. [ಖಮರುಲ್ ಇಸ್ಲಾಂ ಯೂ ಟೂರ್ನ್ ತಗೊಂಡ್ಬಿಟ್ರು!]

ಆದರೆ, ಶೀಘ್ರವೇ ಒಕ್ಕಲಿಗ ಕೋಟಾ ಶೀಘ್ರ ಭರ್ತಿಯಾಗಲಿದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಮಂಡ್ಯದಲ್ಲಿ ನನ್ನ ಅಂತಿಮ ನಿರ್ಧಾರ ಪ್ರಕಟಿಸುವೆ: ಅಂಬರೀಶ್]

English summary
CM Siddaramaiah retorted that there was no proposal to induct former Mandya MP and actress, Ramya.Chief Minister Siddaramaiah, on Saturday. He also said lone vacancy in his ministry will be filled after consulting central leaders in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X