ಆನ್‌ಲೈನ್‌ನಲ್ಲಿ ತೆರಿಗೆ ಪಾವತಿ ಸುರಕ್ಷಿತ, ಭಯ ಬೇಡ: ಬಿಬಿಎಂಪಿ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 09: ಆನ್‌ಲೈನ್‌ ಮೂಲಕ ತೆರಿಗೆ ಪಾವತಿ ಮಾಡುವುದು ಸುರಕ್ಷಿತವಾಗಿದೆ ಪಾವತಿದಾರರು ಭಯ ಪಡುವ ಅಗತ್ಯವಿಲ್ಲ ಎಂದು ಬಿಬಿಎಂಪಿ ಭರವಸೆ ನೀಡಿದೆ.

ತೆರಿಗೆ ಪಾವತಿ ವೇಳೆ ಸೂಕ್ಷ್ಮ ವಿಚಾರಗಳನ್ನು ಆನ್‌ಲೈನ್ ಮೂಲಕ ಹಂಚಿಕೊಳ್ಳಬೇಡಿ ಎನ್ನುವ ಅಲರ್ಟ್ ರೀಡಿಂಗ್‌ಗಳು ಬರುತ್ತಿರುವುದು ತೆರಿಗೆ ಪಾವತಿದಾರರಿಗೆ ಭಯ ಹುಟ್ಟಿಸಿದೆ. ಆನ್‌ಲೈನ್‌ನಲ್ಲಿ ನೀವು ನೀಡುವ ದಾಖಲೆಗಳು ಸುರಕ್ಷಿತವಾಗಿರುತ್ತದೆ.

ಆನ್ ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?

ಯಾವುದೇ ಕಾರಣಕ್ಕೂ ಬೇರೆ ಯಾರಿಗೂ ಮಾಹಿತಿ ರವಾನೆಯಾಗಲು ಸಾಧ್ಯವಿಲ್ಲ ಹಾಗಾಗಿ ನಿಮ್ಮ ಎಲ್ಲ ದಾಖಲೆಗಳು ಸುರಕ್ಷಿತ, ಭಯ ಪಡುವುದು ಬೇಡ ಎಂದು ಬಿಬಿಎಂಪಿ ಜಂಟಿ ಆಯುಕ್ತ(ರೆವಿನ್ಯೂ) ಎಂ. ವೆಂಕಟಾಚಲಪತಿ ಭರವಸೆ ನೀಡಿದ್ದಾರೆ.

No problem with paying property tax online:BBMP

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಆನ್‌ಲೈನ್‌ ಪಾವತಿ ಮುಂದುವರೆಯುತ್ತಿದೆ ಇಲ್ಲಿಯವರೆಗೆ ಆನ್‌ಲೈನ್‌ ಮೂಲಕ ಒಟ್ಟು 44 ಕೋಟಿ ತೆರಿಗೆ ಸಂಗ್ರಹವಾಗಿದೆ. ಯಾರ ದಾಖಲೆಗಳನ್ನೂ ಕದಿಯಲು ಸಾಧ್ಯವಿಲ್ಲ ಎಲ್ಲವೂ ಸುರಕ್ಷಿತವಾಗಿದೆ. ಆದರೆ ಇಂಟರ್ ನೆಟ್ ನಿಧಾನವಿರುವ ಕಾರಣ ಹೆಚ್ಚು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಚುನಾವಣಾ ಕೆಲಸದಲ್ಲಿ ಬಿಬಿಎಂಪಿ ಅಧಿಕಾರಿಗಳು ತೊಡಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The BBMP said taxpayers needn't worry about security aspects of the palike's online portal and that they can continue to pay property tax.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ