ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿಗಿಲ್ಲ ಆಸಕ್ತಿ: ಬಿಬಿಎಂಪಿಯಿಂದ ತ್ಯಾಜ್ಯ ವಿದ್ಯುತ್‌ ಘಟಕ ನಿರ್ಮಾಣ

By Nayana
|
Google Oneindia Kannada News

ಬೆಂಗಳೂರು, ಜುಲೈ 2: ಬಿಬಿಎಂಪಿಯು ಒಂದು ಸಾವಿರ ಟನ್‌ ಸಾಮರ್ಥ್ಯದ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾಧಿಸಬಲ್ಲ ಘಟಕ ಸ್ಥಾಪನೆಗೆ ಮುಂದಾಗಿದೆ. ಖಾಸಗಿ ಸಂಸ್ಥೆಗಳಿಂದ ಟೆಂಡರ್‌ ಆಹ್ವಾನಿಸಿದ್ದರು ಆದರೆ ಸಂಸ್ಥೆಗಳು ಹೆಚ್ಚು ಆಸಕ್ತಿ ತೋರದ ಕಾರಣ ಬಿಬಿಎಂಪಿಯೇ ಸ್ವತಃ ಕೇಂದ್ರವನ್ನು ಸ್ಥಾಪಿಸಲು ಚಿಂತನೆ ನಡೆಸಿದೆ.

ಬಾಕಿ ಕೊಡದ ಬಿಬಿಎಂಪಿ: ಮತ್ತೆ ಮುಷ್ಕರಕ್ಕೆ ಮುಂದಾದ ಗುತ್ತಿಗೆದಾರರುಬಾಕಿ ಕೊಡದ ಬಿಬಿಎಂಪಿ: ಮತ್ತೆ ಮುಷ್ಕರಕ್ಕೆ ಮುಂದಾದ ಗುತ್ತಿಗೆದಾರರು

ಬಿಬಿಎಂಪಿಯು ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪನೆಗೆ ಎರಡು ವಿದೇಶಿ ಕಂಪನಿಗಳೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ. ಇನ್ನು ಬಿಬಿಎಂಪಿ ಸಂಗ್ರಹವಾದ 3 ಸಾವಿರ ಟನ್‌ ಕಸ ವಿಲೇವಾರಿಗೆ ಕನ್ನಹಳ್ಳಿ ಮತ್ತು ಮಾವಳ್ಳಪುರದಲ್ಲಿ ತಲಾ 50 ಕೋಟಿ ರೂ. ವೆಚ್ಚದಲ್ಲಿ ಕಸದಿಂದ ವಿದ್ಯುತ್‌ ತಯಾರಿಸುವ 2 ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಿದೆ.

No private takers: BBMP plans to install waste to energy unit

ಈಗಾಗಲೇ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಹೊಸ ಘಟಕ ಸ್ಥಾಪನೆ ಹೇಗೆ ಮಾಡಬೇಕೆಂಬುದರ ಕುರಿತು ಯೋಜನಾ ವರದಿಯನ್ನು ಬಿಬಿಎಂಪಿ ಅಧಿಕಾರಿಗಳು ಸಿದ್ಧಪಡಿಸುವುದಕ್ಕೆ ಆರಂಭಿಸಿದ್ದು, ಪಾಲಿಕೆ ಸದಸ್ಯರ ಅಭಿಪ್ರಾಯ ಪಡೆದು ಟೆಂಡರ್‌ ಮೂಲಕ ಘಟಕ ನಿರ್ಮಾಣ ಮಾಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನುದಾನದ ಕೊರತೆ ಉಂಟಾಗುವ ಕಾರಣ ಬಿಬಿಎಂಪಿಗೆ ಹೊರೆ ಆಗದಂತೆ ಸರ್ಕಾರದಿಂದಲೂ ಅನುದಾನ ಪಡೆಯಲು ಚಿಂತನೆ ನಡೆಸಿದೆ.

English summary
As private agencies were not shown their interest to install waste to energy units in Bangalore, BBMP is thinking to install two units of 1k tonne waste capacity on its own soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X