ಮೆಟ್ರೋ ಕಾಮಗಾರಿಗಾಗಿ ಕೆಲ ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ಬಿಎಂಆರ್ ಸಿಎಲ್ ಕಾಮಗಾರಿಯನ್ನು ನಿರ್ವಹಿಸಲು, ಈಗಿರುವ ವಿದ್ಯುತ್ ಮೂಲಸೌಕರ್ಯಗಳನ್ನು ಸ್ಥಳಾಂತರಿಸಬೇಕಾಗಿರುವುದರಿಂದ ಏ.13(ಶುಕ್ರವಾರ) ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಿಂದ ಸರಬರಾಜಾಗುವ ಪ್ರದೇಶಗಳಿಗೆ ಅಡಚಣೆ ಉಂಟಾಗಲಿದೆ.

ವಿದ್ಯುತ್ ವಿತರಣಾ ಕೇಂದ್ರ 66/11ನಾಗನಾಥಪುರ ವಿದ್ಯುತ್ ಉಪಕೇಂದ್ರದ ಎಫ್-6 ಮತ್ತು ಎಫ್-16 ಫೀಡರ್ ಗಳ ಮಾರ್ಗದಲ್ಲಿರುವ ಹೊಂಗಸಂದ್ರ ಮುಖ್ಯ ರಸ್ತೆ, ಓಂ ಶಕ್ತಿ ಲೇಔಟ್, ಗುರುಮೂರ್ತಿ ಬಡಾವಣೆ, ಹೊಂದಸಂದ್ರದ ಇತರೆ ಪ್ರದೇಶಗಳು, ಜಿ.ಬಿ. ಪಾಳ್ಯ, ಬೇಗೂರು ರೋಡ್, ಎಇಸಿಎಸ್ ಲೇಔಟ್ ಬಿ ಬ್ಲಾಕ್, ಸಿಂಗಸಂದ್ರ ಕೈಗಾರಿಕಾ ಪ್ರದೇಶ, ಮುನಿರೆಡ್ಡಿ ಲೇಔಟ್, ಲಕ್ಷ್ಮೀ ಲೇಔಟ, ರಾಘವೇಂದ್ರ ಲೇಔಟ್, ಮೈಕೋ ಲೇಔಟ್, ವಾಜಪೇಯಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

No power supply around Naganathapura Today

ಚುನಾವಣೆ ಮುನ್ನ ಗ್ರಾಹಕರಿಗೆ ವಿದ್ಯುತ್ ಬೆಲೆ ಏರಿಕೆ ಬಿಸಿ ತಟ್ಟಲಿದೆಯೇ?

ವಿದ್ಯುತ್ ವಿತರಣಾ ಕೇಂದ್ರ 66/11 ಎಲೆಕ್ಟ್ರಾನಿಕ್ ಸಿಟಿ ಫೇಸ್2 ಸೆಕ್ಟರ್ -1 ಉಪ ಕೇಂದ್ರದ ಎಫ್-4, ಎಫ್-14, ಎಫ್-9 ಮತ್ತು ಎಫ್ -10 ಫೀಡರ್ ಗಳ ಮಾರ್ಗದಲ್ಲಿರುವ ಶ್ರೀರಾಮ ಬಡಾವಣೆ, ಹೊಂಗಸಂದ್ರ 9ನೇ ಮುಖ್ಯ ರಸ್ತೆ, ಬಾಲಾಜಿ ಲೇಔಟ್, ಸತೀಶ್ ರೆಡ್ಡಿ ಲೇಔಟ್, ಎನ್ ಜಿಆರ್ ಲೇಔಟ್, ಬೊಮ್ಮನಹಳ್ಳಿ ಮತ್ತು ರೂಪೇನ ಅಗ್ರಹಾರದ ಇತರೆ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Following the shifting work of electricity infrastructure for BMRCL lane construction there will be interruption in power supply on April 13 in and around of Naganathapura in Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ