ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 6 ಸಾವಿರ ರಸ್ತೆಗುಂಡಿ 10 ದಿನಗಳಲ್ಲಿ ಬಂದ್!

By Mahesh
|
Google Oneindia Kannada News

ಬೆಂಗಳೂರು, ಜೂನ್ 12: ನಗರದಲ್ಲಿ ಗುರುತಿಸಿರುವ ಒಟ್ಟಾರೆ 6 ಸಾವಿರಕ್ಕೂ ಅಧಿಕ ರಸ್ತೆಗುಂಡಿಗಳನ್ನು 10 ದಿನಗಳಲ್ಲಿ ಮುಚ್ಚಲಾಗುವುದು ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ ಪರಮೇಶ್ವರ ಅವರು ಭರವಸೆ ನೀಡಿದ್ದಾರೆ.

'ಬಾಕಿ ಹಣ ಪಾವತಿ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವುದಾಗಿ ಡಿಸಿಎಂ ಡಾ.ಜಿ. ಪರಮೇಶ್ವರ್ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ ಆಟೋ ಮತ್ತು ಲಾರಿ ಮಾಲಿಕರು, ಗುತ್ತಿಗೆದಾರರು ಪ್ರತಿಭಟನೆ ಹಿಂಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಬಿಬಿಎಂಪಿ: ತ್ಯಾಜ್ಯ ಗುತ್ತಿಗೆದಾರರ ಪ್ರತಿಭಟನೆ ಹಿಂದಕ್ಕೆ ಬಿಬಿಎಂಪಿ: ತ್ಯಾಜ್ಯ ಗುತ್ತಿಗೆದಾರರ ಪ್ರತಿಭಟನೆ ಹಿಂದಕ್ಕೆ

ಬಿಬಿಎಂಪಿ ತ್ಯಾಜ್ಯ ಸಂಗ್ರಹಿಸಲು 4 ಸಾವಿರಕ್ಕೂ ಹೆಚ್ಚಿನ ಆಟೋ ಟಿಪ್ಪರ್‌ಗಳಿವೆ, 450ಕ್ಕೂ ಹೆಚ್ಚು ಕಾಂಪ್ಯಾಕ್ಟರ್‌ಗಳಿವೆ. ಈ ಕಾರ್ಯದಲ್ಲಿ 7 ಸಾವಿರಕ್ಕೂ ಹೆಚ್ಚಿನ ಸಹಾಯಕರು ಸೇವೆ ಮಾಡುತ್ತಿದ್ದಾರೆ. ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಗೆ ಕಳೆದ ಐದು ತಿಂಗಳ 220 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ ಇದನ್ನು ಕೂಡಲೇ ಪಾವತಿಸಬೇಕು ಎಂಬುದು ಗುತ್ತಿಗೆದಾರರ ಆಗ್ರಹವಾಗಿತ್ತು.

No potholes in 10 days: Promises to keep Dr G Parameshwar

ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಸಾವಿರ ಟನ್ ಕಸ ಉತ್ಪಾದನೆಯಾಗುತ್ತಿದೆ. ಅದರಲ್ಲಿ 2,100 ಟನ್ ಸಂಸ್ಕರಿಸಿ ಉಳಿದಿದ್ದನ್ನು ಕಲ್ಲು ಕ್ವಾರಿಗಳಿಗೆ ಸುರಿಯಲಾಗುತ್ತಿದೆ.

ಪ್ರತಿ ಚದರ ಮೀಟರ್ ನಲ್ಲಿ 1,200 ರಸ್ತೆಗುಂಡಿಗಳನ್ನು ಗುರುತಿಸಲಾಗಿದ್ದು, ಆದ್ಯತೆ ಮೇರೆಗೆ ಪೈಥಾನ್ ಮಷಿನ್ ಗಳನ್ನು ಬಳಸಿ, ಶೀಘ್ರದಲ್ಲೇ ಮುಚ್ಚಲಾಗುವುದು ಎಂದು ಪರಮೇಶ್ವರ್ ಅವರು ಹೇಳಿದರು.

ಟೆಂಡರ್ ಶ್ಯೂಟರ್ ರಸ್ತೆಗಳು ಒಳಚರಂಡಿ ಅವ್ಯವಸ್ಥೆಯಿಂದ ಹಾಳಾಗಿರುವುದನ್ನು ಗಮನಿಸಲಾಗಿದ್ದು, ಆ ರಸ್ತೆಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದರು.

English summary
Deputy chief minister and Bengaluru development minister G. Parameshwar gave assurance to release pending bills of contractors and also assued no potholes in 10 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X